25.7 C
ಪುತ್ತೂರು, ಬೆಳ್ತಂಗಡಿ
March 7, 2026
ತಾಲೂಕು ಸುದ್ದಿ

ಚಾರ್ಮಾಡಿ ಘಾಟಿಯಲ್ಲಿ ಭಾರಿ ಮಳೆ : ಮರ ಸಹಿತ ಗುಡ್ಡ ಕುಸಿತ ತೆರವು

ಚಾರ್ಮಾಡಿ ಘಾಟಿ ಪರಿಸರದಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ಭಾರಿ ಗಾಳಿ,ಮಳೆ ಸುರಿದಿದ್ದು, ಘಾಟಿಯ ಮೂರನೇ ತಿರುವಿನ ಬಳಿ ಎರಡು ಮರಗಳು ರಸ್ತೆಗೆ ಉರುಳಿ ಬಿದ್ದಿವೆ.
ಮರಗಳು ಉರುಳಿ ಬೀಳುವ ವೇಳೆ ಲಘು ಪ್ರಮಾಣದ ಗುಡ್ಡ ಕುಸಿತವು ಉಂಟಾಗಿದೆ. ಮರಗಳು ರಸ್ತೆಗೆ ಬಿದ್ದ ಪ್ರದೇಶದಲ್ಲಿ ಒಂದು ವಾಹನ ಮಾತ್ರ ಸಂಚರಿಸುವಷ್ಟು ಜಾಗ ಇದ್ದು ಬೇಕಾಬಿಟ್ಟಿ ವಾಹನಗಳನ್ನು ನುಗ್ಗಿಸಿದ ಕಾರಣ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರಿತು.


ಘಾಟಿ ಪ್ರದೇಶದಲ್ಲಿ ನಿರಂತರ ಎರಡು ತಾಸಿಗಿಂತ ಅಧಿಕಕಾಲ ಮಳೆ ಸುರಿದ ಕಾರಣ ಘಾಟಿ ರಸ್ತೆ ನದಿಯಂತಾಗಿತ್ತು.ಘಾಟಿ ಪ್ರದೇಶದಲ್ಲಿರುವ ಹಲವಾರು ಜಲಪಾತಗಳು ರಸ್ತೆ ತನಕವು ಧುಮ್ಮಿಕ್ಕಿದ ಕಾರಣ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಜಲಪಾತಗಳಿಂದ ರಸ್ತೆಗೆ ಬಿದ್ದ ನೀರು ಚರಂಡಿ ಇಲ್ಲದ ಕಾರಣ ರಸ್ತೆಯಲ್ಲಿ ಹಳ್ಳದಂತೆ ಹರಿಯಿತು.

ಗುಡ್ಡ ಕುಸಿತ ಹಾಗೂ ಮರ ಉರುಳಿರುವ ಕುರಿತು ಸ್ಥಳೀಯರಾದ ಚಾರ್ಮಾಡಿ ಹಸನಬ್ಬ ಹಾಗು ಇತರರು ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಜೆಸಿಬಿ ಮೂಲಕ ಮರ ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.

Related posts

ಕಾರಿಂಜ ಶ್ರೀ ವನಶಾಸ್ತಾರ-ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Suddi Udaya

ಶ್ರೀ ಗುರುದೇವ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳಿಂದ ಪಕ್ಷಿ ವೀಕ್ಷಣೆ ಹಾಗೂ ಸ್ವಚ್ಛತಾ ಕಾರ್ಯಕ್ರಮ

Suddi Udaya

ಉಜಿರೆ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ಸಾಧ್ಯತೆಗಳ ಹಾದಿಗಳು: ವೈಯಕ್ತಿಕ ಕಲಿಕೆಯ ವಿನ್ಯಾಸ” ಕಾರ್ಯಾಗಾರ

Suddi Udaya

ಕುಕ್ಕೇಡಿ: ಸುಡುಮದ್ದು ತಯಾರಿಕ ಘಟಕದಲ್ಲಿ ಸ್ಪೋಟ ಪ್ರಕರಣ: ಇಬ್ಬರಿಗೆ ನ್ಯಾಯಾಂಗ ಬಂಧನ

Suddi Udaya

ಉಜಿರೆಯ ಎಸ್.ಡಿ.ಎಂ. ಮಹಿಳಾ ಐ.ಟಿ.ಐ. ಕಾಲೇಜಿನಲ್ಲಿ ನೂತನ ವಿದ್ಯಾರ್ಥಿನಿಯರ ಸ್ವಾಗತ ಕಾರ್ಯಕ್ರಮ

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ “ಕ್ಷೀರಾಬ್ಧಿ” ಉದ್ಘಾಟನೆ

Suddi Udaya
error: Content is protected !!