27.9 C
ಪುತ್ತೂರು, ಬೆಳ್ತಂಗಡಿ
September 28, 2026
ಧಾರ್ಮಿಕ

ಗುರುವಾಯನಕೆರೆ ಗೆಳೆಯರ ಬಳಗ: 34ನೇ ವರ್ಷದ ಶ್ರೀ ಶಾರದ ಪೂಜೋತ್ಸವ

ಗುರುವಾಯನಕೆರೆ: ಗೆಳೆಯರ ಬಳಗ ಗುರುವಾಯನಕೆರೆ ಇದರ ವತಿಯಿಂದ ಗುರುವಾಯನಕೆರೆ ಶಾರದಾ ಮಂಟಪದಲ್ಲಿ ಅ.9 ಮತ್ತು ಅ.10ರಂದು ನಡೆಯಲಿರುವ ೩೪ನೇ ವರ್ಷದ ಶ್ರೀ ಶಾರದೋತ್ಸವ ಅ.9ರಂದು ವಿದ್ಯುಕ್ತವಾಗಿ ಆರಂಭಗೊಂಡಿತು.

ಬೆಳಿಗ್ಗೆ ಕುತ್ಯಾರು ಕೆ. ದಯಾಕರ ಭಟ್ ಪೌರೋಹಿತ್ಯದಲ್ಲಿ ಪಂಚಗವ್ಯ ಪುಣ್ಯಾಹ ಸಹಿತ ಗಣಹೋಮ, ದೇವರ ಪ್ರತಿಷ್ಠಾಪನೆ ನಡೆಯಿತು. ಶ್ರೀಮತಿ ದೀಪಾ ಶೆಣೈ ಮತ್ತು ಪ್ರಕಾಶ್ ಶೆಣೈ ಶೆಣೈ ರೆಸ್ಟೋರೆಂಟ್, ಗುರುವಾಯನಕೆರೆ ಇವರು ದೀಪ ಪ್ರಜ್ವಲನೆಯನ್ನು ನೇರವೇರಿಸಿದರು.
ಈ ಸಂದರ್ಭದಲ್ಲಿ ಗಣ್ಯರಾದ ಯೋಗೀಶ್ ಆಚಾರ್ಯ,ಟಿ.ಆರ್ ಅಡ್ಯಾಂತಾಯ, ಸುಧಾಮಣಿ, ಗೆಳೆಯರ ಬಳಗದ ಗೌರವಾಧ್ಯಕ್ಷ ಮೋಹನ್ ಕಂಚಿಂಜೆ, ಅಧ್ಯಕ್ಷ ಕೃಷ್ಣಾನಂದ ಜಿ. ಕುಲಾಲ್, ಕಾರ್ಯದರ್ಶಿ ಮಂಜುನಾಥ ಕುಂಬ್ಳೆ,

ಜೊತೆ ಕಾರ್ಯದರ್ಶಿ ಚೈತನ್ಯ ಜಿ. ಕೋಶಾಧಿಕಾರಿ ಶರಣ್ ಕುಲಾಲ್, ಶಿವಾಜಿನಗರ ಕಾರ್ಯಕಾರಿ ಸಮಿತಿ ಸದಸ್ಯರಾದ ಗೋಪಿನಾಥ ನಾಯಕ್, ಲೋಕೇಶ್ ಕೆ., ರಾಮಚಂದ್ರ ಶೆಟ್ಟಿ, ಕೃಷ್ಣಪ್ಪ ಟೈಲರ್ ವಿವೇಕಾನಂದ ಸಾಲಿಯಾನ್, ವಿಠಲ ಆಚಾರ್ಯ, ಮೋಹನ ಬಿ. ರಕ್ಷಿತ್ ಶೆಣೈ, ಆನಂದ ಕೋಟ್ಯಾನ್, ಸುಂದರ ನಾಯ್ಕ, ಶೀನ ದಡ್ಡಲೆ, ಲೋಕೇಶ್ ಜಿ, ದಾಮೋದರ ಕೆ., ಕಾರ್ತಿಕ್ ನಾಯಕ್, ಸೇವಾದಾರರಾದ ಶ್ರೀಮತಿ ಶಶಿಕಲಾ ಎನ್. ಕಾಮತ್ ಮತ್ತು ಮನೆಯವರು ಉಪಸ್ಥಿತರಿದ್ದರು.
ಬಳಿಕ ಶ್ರೀ ಶಾರದಾಂಭ ಭಜನಾ ಮಂಡಳಿ ಶಾರದಾನಗರ, ಗುರುವಾಯನಕೆರೆ ಇವರಿಂದ ಭಜನಾ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ

ಸಂಜೆ ಭಗವಾನ್ ಶಿರ್ಡಿಸಾಯಿ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರ ಶ್ರೀ ಸಾಯಿ ನಗರ, ಹಳೆಕೋಟೆ, ಬೆಳ್ತಂಗಡಿ ಇವರ ಸೇವೆ ಸಂಜೆ ಸ್ಥಳೀಯ ಕಲಾ ಪ್ರತಿಭೆಗಳಿಂದ ಸಾಂಸ್ಕೃತಿಕ

ಕಾರ್ಯಕ್ರಮ ಜರುಗಿತು. ರಾತ್ರಿ ದೇವಿ ಕಿರಣ್ ಕಲಾ ನಿಕೇತನ ಗುರುವಾಯನಕೆರೆ ವಿದುಷಿ ಸ್ವಾತಿ ಜಯರಾಂ ಮತ್ತು ವಿದುಷಿ ಪೃಥ್ವಿ ಸತೀಶ್ ಇವರ ಶಿಷ್ಯ ವೃಂದದವರಿಂದ ‘ನೃತ್ಯಾಪ೯ಣಂ’ ಕಾಯ೯ಕ್ರಮ ನಡೆಯಿತು.

Related posts

ಉಜಿರೆ ಸಂತ ಅಂತೋನಿ ಚರ್ಚ್ ನಲ್ಲಿ ಸಂಭ್ರಮದ ಕ್ರಿಸ್ಮಸ್ ಹಬ್ಬ ಆಚರಣೆ

Suddi Udaya

ಅರಫಾ ಜಾಮಿಅಃ ಮಸ್ಜಿದ್ ಅತ್ತಾಜೆಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

Suddi Udaya

ಚಾರ್ಮಾಡಿ: ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹೋಮಕುಂಡದ ಭೂಮಿ ಪೂಜೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿವಿಧ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಕಲಿಕಾ ಆಟಿಕೆಗಳ ಹಸ್ತಾಂತರ ಕಾರ್ಯಕ್ರಮ

Suddi Udaya

ಜ.25: ಉಜಿರೆ ವಿಜಯನಗರ ಅಜಿತ್‌ನಗರ (ಕಲ್ಲೆ) ದಲ್ಲಿ ಶ್ರೀ ವನದುರ್ಗಾ, ಶ್ರೀ ನಾಗರಕ್ತೇಶ್ವರಿ ಸಾನಿಧ್ಯ ಕ್ಷೇತ್ರದಲ್ಲಿ ವಾರ್ಷಿಕ ಆರಾಧನೆ

Suddi Udaya

ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥ ಧರ್ಮಸ್ಥಳಕ್ಕೆ ಪ್ರವೇಶ

Suddi Udaya
error: Content is protected !!