25.7 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಸೆ. 28 ರಿಂದ ಅ. 4 : ಧರ್ಮಸ್ಥಳದಲ್ಲಿ 28ನೇ ವರ್ಷದ ಭಜನಾ ಕಮ್ಮಟ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಶ್ರಯದಲ್ಲಿ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 4 ರ ವರೆಗೆ 28ನೇ ವರ್ಷದ ಭಜನಾ ಕಮ್ಮಟವನ್ನು ಆಯೋಜಿಸಲಾಗಿದೆ ಎಂದು ಭಜನಾಕಮ್ಮಟದ ಸಂಚಾಲಕರಾದ ಜಿ. ಸುಬ್ರಹ್ಮಣ್ಯ ಪ್ರಸಾದ್ ಮತ್ತು ಕಾರ್ಯದರ್ಶಿ ಎ.ವಿ. ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಜನೆಯಲ್ಲಿ ರಾಗ, ತಾಳ ಮತ್ತು ಲಯದ ಜ್ಞಾನವಿದ್ದು, 18 ವರ್ಷ ಪ್ರಾಯದಿಂದ 45 ವರ್ಷ ಪ್ರಾಯದ ಒಳಗಿನವರಿಗೆ ಭಜನಾ ಕಮ್ಮಟದಲ್ಲಿ ಭಾಗವಹಿಸಲು ಅವಕಾಶವಿದೆ. ಒಂದು ಭಜನಾ ಮಂಡಳಿಯಿಂದ ಇಬ್ಬರಿಗೆ ಮಾತ್ರ ಕಮ್ಮಟದಲ್ಲಿ ಭಾಗವಹಿಸಲು ಅವಕಾಶವಿದೆ. ಆಸಕ್ತರು ಆಗೋಸ್ತು 31ರ ಒಳಗೆ ಹೆಸರು ನೋಂದಾಯಿಸಬೇಕು.


ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 9632064164, 9844239233, 9663464648, 08256-266644

Related posts

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಕ್ರೀದ್ ಆಚರಣೆ

Suddi Udaya

ಚಾರ್ಮಾಡಿ: ಅರೆ ಪ್ರಜ್ಞಾ ಸ್ಥಿತಿಯಲ್ಲಿ ಪತ್ತೆಯಾದ ಕಾಡಾನೆ

Suddi Udaya

ಮದ್ದಡ್ಕ: 15 ನೇ ವರ್ಷದ ಗಣೇಶೋತ್ಸವದ ಪೂರ್ವ ತಯಾರಿ ಸಭೆ

Suddi Udaya

ರಾಷ್ಟೀಯ ನೆಟ್ ಬಾಲ್ ಪಂದ್ಯಾಟ: ಕರ್ನಾಟಕ ತಂಡದಲ್ಲಿ ಎಸ್ ಡಿ ಎಂ ಕಾಲೇಜಿನ ಕ್ರೀಡಾ ವಿದ್ಯಾರ್ಥಿಗಳು

Suddi Udaya

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಜಾತ್ರೋತ್ಸವ ಸಂಪನ್ನ

Suddi Udaya

ಕರಾಟೆ ಚಾಂಪಿಯನ್ ಶಿಪ್: ಶಕ್ತಿನಗರದ ಸೆನ್ಸಾಯ್ ಸಿರಾಜ್ ಎಚ್ ರವರಿಗೆ ಬ್ಲಾಕ್ ಬೆಲ್ಟ್ ಸೀನಿಯರ್ ವಿಭಾಗದಲ್ಲಿ ಗ್ರ್ಯಾಂಡ್ ಚಾಂಪಿಯನ್ ಟ್ರೋಫಿ

Suddi Udaya
error: Content is protected !!