25.7 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಚ್ಚಿನ–ಬಳ್ಳಮಂಜದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನೂತನ ಶಾಖೆ ಉದ್ಘಾಟನೆ

ಬಳ್ಳಮಂಜ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.), ಕೇಂದ್ರ ಕಚೇರಿ ತುಮಕೂರು, ನೇತ್ರಾವತಿ ವಲಯ ಮಂಗಳೂರು ಇದರ ಆಶ್ರಯದಲ್ಲಿ ಮಚ್ಚಿನ ಸಮುದಾಯ ಭವನದಲ್ಲಿ ನೂತನ ಯೋಗ ಶಿಕ್ಷಣ ಶಾಖೆಯನ್ನು ಜು.26ರಂದು ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೋಕ್ತೇಸರರಾದ ಡಾ. ಎಂ. ಹರ್ಷ ಸಂಪಿಗೆತ್ತಾಯ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಸಮಿತಿಯ ನೇತ್ರಾವತಿ ವಲಯ ಸಂಚಾಲಕರಾದ ಅಶೋಕ್ ಪ್ರಾಸ್ತಾವಿಕ ನುಡಿಗಳ ಮೂಲಕ ಸಮಿತಿಯ ಉದ್ದೇಶ ಹಾಗೂ ಯೋಗದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಷಮರ್ದಿನಿ ಶಾಖೆಯ ಸಹ ಶಿಕ್ಷಕ ಸುಧಾಕರ್ ವಹಿಸಿದ್ದರು. ಯೋಗ ಶಿಬಿರಾರ್ಥಿಗಳಾದ ದಿವಾಕರ್, ಉಮಾ ಹಾಗೂ ನಾರಾಯಣ ಅವರು ಯೋಗಾಭ್ಯಾಸದಿಂದ ತಮ್ಮ ಜೀವನದಲ್ಲಿ ಕಂಡ ಬದಲಾವಣೆ ಹಾಗೂ ಅನುಭವಗಳನ್ನು ಹಂಚಿಕೊಂಡರು .ಸಹ ಶಿಕ್ಷಕ ಸುಕೇಶ್ ಉಪಸ್ಥಿತರಿದ್ದರು.

ಕುಮಾರಿ ಭಕ್ತಿಪ್ರಿಯ ಪ್ರಾರ್ಥನೆ ನೆರವೇರಿಸಿ, ಉಮಾ ಸ್ವಾಗತಿಸಿದರು.ಅಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಬಾಲಕೃಷ್ಣ ವಂದಿಸಿದರು. ಸುಧಾ ಸೂಚನೆಗಳನ್ನು ನೀಡಿದರು.

Related posts

ಇಳಂತಿಲ: ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಸ್ ಎಸ್ ಎಲ್ ಸಿ ವಿಧ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದೆ ಸಾವು

Suddi Udaya

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಗೆಲುವು: ಬೈಕ್ ಜಾಥದ ಮುಖೇನಾ ಗೆಲುವನ್ನು ಸಂಭ್ರಮಿಸಿದ ನಾಲ್ಕೂರಿನ ಕಾರ್ಯಕರ್ತರು

Suddi Udaya

ಬಂದಾರು: 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ

Suddi Udaya

ಹೋರಾಟದ ಮೂಲಕ ಧರ್ಮ ಜಾಗೃತಿಯನ್ನು ಮಾಡಿದ್ದೇನೆ: ಮಹೇಶ್ ಶೆಟ್ಟಿ ತಿಮರೋಡಿ

Suddi Udaya

ಬಳಂಜ”ಮನಸ್ವಿನಿ” ಸಂಜೀವಿನಿ ಗ್ರಾ. ಪಂ. ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಬಂಗೇರಕಟ್ಟೆಯಿಂದ ಮಡಂತ್ಯಾರಿನವರೆಗೆ ರಸ್ತೆಯಲ್ಲೆ ಹರಿಯುತ್ತಿರುವ ಮಳೆ ನೀರು: ತಕ್ಷಣ ಕ್ರಮ ಕೈಗೊಳ್ಳುವಂತೆ ಚಾಲಕರ ಹಾಗೂ ಸಾರ್ವಜನಿಕರ ಆಗ್ರಹ

Suddi Udaya
error: Content is protected !!