ಮಂಗಳೂರು: ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆಯ ಅಧೀಕ್ಷಕರು ಮತ್ತು ಶಸ್ತ್ರಚಿಕಿತ್ಸಕರಾದ ಡಾ.ಶಿವಪ್ರಕಾಶ್ (DM0) ರವರ ನೇತೃತ್ವದಲ್ಲಿ ವೆನ್ಲಾಕ್ ಆಸ್ಪತ್ರೆಯ ವಿವಿಧ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು. ಆಸ್ಪತ್ರೆಗೆ ಹೊಸದಾಗಿ ನೇಮಕವಾದ ಡಿ.ಎಮ್.ಒ ರವರನ್ನು ಪರಿಚಯ ಮಾಡಿಕೊಳ್ಳಲಾಯಿತು.
ಇತ್ತೀಚಿಗೆ ಉದ್ಘಾಟನೆಗೊಂಡ ಹೊಸ ಸರ್ಜಿಕಲ್ ಬ್ಲಾಕ್ ಗೆ ರೋಗಿಗಳನ್ನು ಹಸ್ತಾಂತರಿಸಿದ ವಿವರವನ್ನು ಪಡೆಯಲಾಯಿತು. ಮುಂದಿನ 175 ನೇ ವರ್ಷದ ಸಂಭ್ರಮಾಚರಣೆಗೆ ಆಸ್ಪತ್ರೆಯ ಕೆಲವು ಮೂಲಭೂತ ಸೌಕರ್ಯಕ್ಕೆ ಸರಕಾರದಿಂದ ಅನುದಾನ ಬಿಡುಗಡೆಯಾಗಲು ಆರೋಗ್ಯ ಸಚಿವರನ್ನು ಭೇಟಿಯಾಗಲು ಅಭಿಪ್ರಾಯ ವ್ಯಕ್ತಪಡಿಸಲಾಯಿತು. ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸುವಂತೆ ಕೋರಲಾಯಿತು.
ಸಭೆಯಲ್ಲಿ ರಕ್ಷಾ ಸಮಿತಿ ಸದಸ್ಯರಾದ ಪದ್ಮನಾಭ ಅಮೀನ್, ಅಬ್ದುಲ್ ಕರೀಮ್ ಗೇರುಕಟ್ಟೆ, ಶ್ರೀಮತಿ ಪ್ರಮೀಳಾ ಕಾವೂರು, ಅಬ್ದುಲ್ ಸಲೀಮ್ ‘ಅನಿಲ್,ಶಶಿಧರ್, ದಾಮೋದರ ಪುತ್ತೂರು, ಜಯರಾಮ ದಿಡುಪೆ ಉಪಸ್ಥಿತರಿದ್ದರು.