23.3 C
ಪುತ್ತೂರು, ಬೆಳ್ತಂಗಡಿ
May 18, 2025
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಖಾಸಗಿ ಬಸ್‌; ಡ್ರೈವರ್‌ ಸ್ಥಳದಲ್ಲೇ ಸಾವು

ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಗುಂಡ್ಯ ಹೊಳೆಗೆ ಬಿದ್ದ ಘಟನೆ ಅ.11 ರಂದು ತಡರಾತ್ರಿ 11.30ರ ಸಮಯ ದುರ್ಘಟನೆ ಸಂಭವಿಸಿದೆ.


ಬಸ್‌ನ ಡ್ರೈವರ್‌ ಬಸ್‌ನ ಚಕ್ರದಡಿಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಮೈಸೂರು ಮೂಲದ ಭರತ್(28) ಎಂದು ಗುರುತಿಸಲಾಗಿದೆ.


ಬೆಂಗಳೂರಿನಿಂದ ಪ್ರಯಾಣಿಕರನ್ನು ಗೋಕರ್ಣದಲ್ಲಿ ಇಳಿಸಿ, ಬಳಿಕ ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಪ್ರಯಾಣಿಕರನ್ನು ಪಿಕ್‌-ಅಪ್‌ ಮಾಡಲು ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಬಸ್ ನಲ್ಲಿ ಚಾಲಕ ಹಾಗೂ ಸಹ ಚಾಲಕರಿಬ್ಬರೂ ಮಾತ್ರ ಪ್ರಯಾಣಿಸುತ್ತಿದ್ದು ಸಹ ಚಾಲಕ ಅವಿನಾಶ್ ಎಂಬುವವರು ಅಪಾಯದಿಂದ ಪಾರಾಗಿದ್ದಾರೆ. ಬಸ್ ನಲ್ಲಿ ಯಾವುದೇ ಪ್ರಯಾಣಿಕರು ಇಲ್ಲದ ಕಾರಣ ಹೆಚ್ಚಿನ ಸಾವು ನೋವು ಸಂಭವಿಸಲಿಲ್ಲ.
ಮೃತ ದೇಹವನ್ನು ಪುತ್ತೂರಿನ ಸರಕಾರಿ ಶವಗಾರದಲ್ಲಿ ಇಡಲಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related posts

ಧರ್ಮಸ್ಥಳ  ಶ್ರೀ ಮಂ.ಸ್ವಾ. ಅ.ಹಿ. ಪ್ರಾ. ಶಾಲೆಯಲ್ಲಿ ‘ಆಟಿಡೊಂಜಿ ದಿನ ‘

Suddi Udaya

ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ವತಿಯಿಂದ ಧನಸಹಾಯ ಹಸ್ತಾಂತರ

Suddi Udaya

ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ಹರಿದ್ವಾರ ಶಾಖಾ ಮಠಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಭೇಟಿ

Suddi Udaya

ಗುರುವಾಯನಕೆರೆ: ಎಕ್ಸೆಲ್ ಕಾಲೇಜಿನ ಆಡಳಿತಕ್ಕೆ ವೇಣೂರಿನ ವಿದ್ಯೋದಯ ವಿದ್ಯಾ ಸಂಸ್ಥೆಗಳು

Suddi Udaya

ಧರ್ಮಸ್ಥಳ: ‘ಭಜನಾ ತರಬೇತಿ ಕಮ್ಮಟ’ ಕಾರ್ಯಾಗಾರ: ‘ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಭಜನೆಯ ಪಾತ್ರ’ ಕುರಿತು ಉಪನ್ಯಾಸ

Suddi Udaya

ಪರೀಕ ಶ್ರೀ ಶ್ರೀನಿವಾಸ ಪ್ರಸನ್ನ ಸೋಮೇಶ್ವರ ಮಹಾಗಣಪತಿ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

Suddi Udaya
error: Content is protected !!