ಬೆಳ್ತಂಗಡಿ : ಬೆಳ್ತಂಗಡಿ ನ್ಯಾಯಲಯ ಸಿ ಸಿ ನಂಬ್ರ-176/23, 177/23, 543/23, 51/15, ಠಾಣಾ ಅಕ್ರ 127/13, 224/13, 398/13, 402/13 ಕಲಂ 457,380 ಐಪಿಸಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವಾರಂಟು ಆಸಾಮಿ ಪಡಂಗಡಿ ಲಾಡಿ ನಿವಾಸಿ ಹಮೀದ್ ಯಾನೆ ಜಪಾರ್ ಹಮೀದ್ , ಕುಂಹಿಮೋನು ಎಂಬವರನ್ನು ಅ. 13 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕರು ಬಿ ಜಿ ಸುಬ್ಬಾಪೂರ್ ಮಠ, ಉಪ ನೀರಿಕ್ಷಕರು ಮುರಳೀಧರ್ ಮತ್ತು ಯಲ್ಲಪ್ಪ ರವರ ನಿರ್ದೇಶನದಂತೆ ಠಾಣಾ ಹೆಚ್ ಸಿ 418 ವ್ರಷಭ, ಹೆಚ್ ಸಿ 863 ಬೆಣ್ಣಿಚ್ಚನ್, ಮತ್ತು ಪಿಸಿ 2398 ಮುನಿಯ ನಾಯ್ಕ್, ಪಿ ಸಿ 433 ಸುನಿಲ್ ರವರು ಪಡಂಗಡಿ ಎಂಬಲ್ಲಿಂದ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಧಿಶರ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿದಿಸಿ ಮಂಗಳೂರು ಜೈಲಿಗೆ ನೀಡಿರುತ್ತಾರೆ.
ಈತನ ಮೇಲೆ ದ. ಕ ಜಿಲ್ಲೆಯ ಬಂಟ್ವಾಳ, ಉಪ್ಪಿನಂಗಡಿ, ಕಡಬ, ಪುತ್ತೂರು, ವೇಣೂರ್, ಧರ್ಮಸ್ಥಳ, ಪುಂಜಾಲಕಟ್ಟೆ, ,ಮಂಗಳೂರು ನಗರ, ಬಂದರು ಠಾಣೆ.ಹೊರ ಜಿಲ್ಲೆಗಳಾದ ಹಾಸನದ ಬೇಲೂರು ಚಿಕ್ಕಮಂಗಳೂರು ಜಿಲ್ಲೆ N. R ಪುರ, ಕೊಪ್ಪ, ಹರಿಹರ ಪುರ, ಚಿಕ್ಕಮಂಗಳೂರು , ಮೂಡಿಗೆರೆ ಉಡುಪಿ ಜಿಲ್ಲೆ ಪಡುಬಿದ್ರೆ ಮಡಿಕೇರಿ ಹಾಗು ಹೊರ ರಾಜ್ಯ ಕೇರಳ ದಲ್ಲಿ ಸುಮಾರು 34 ಕಳ್ಳತನಾದ ಪ್ರಕರಣಗಳು ಇರುತ್ತದೆ.