30.9 C
ಪುತ್ತೂರು, ಬೆಳ್ತಂಗಡಿ
April 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಆರಂಬೋಡಿ : ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆ

ಆರಂಬೋಡಿ : ಇಲ್ಲಿಯ ಪಿಲಿಕಜೆಯ ನಿವಾಸಿ ಶ್ರೀಮತಿ ಮಮತಾ(45ವ) ಅವರು ಅ.13 ರಂದು ಮನೆಯಿಂದ ನಾಪತ್ತೆಯಾಗಿದ್ದು, ಅವರ ಮೃತ ದೇಹವು ಬಾವಿಯಲ್ಲಿ ಮರುದಿನ ಪತ್ತೆಯಾದ ಘಟನೆ ಅ.14 ರಂದು ನಡೆದಿದೆ.

ಘಟನೆ ವಿವರ: ಆರಂಬೋಡಿ ಗ್ರಾಮದ ಪಿಲಿಕಜೆ ನಿವಾಸಿ ಶ್ರೀಧರ ಪೂಜಾರಿ ಅವರು ಸುಮಾರು 7 ವರ್ಷಗಳ ಹಿಂದೆ ಪಾರ್ಶ್ವವಾಯು ಖಾಯಿಲೆಗೆ ತುತ್ತಾಗಿದ್ದು ಎಡಕೈ ಹಾಗೂ ಎಡಕಾಲಿನ ಸ್ವಾಧಿನತೆ ಕಳೆದುಕೊಂಡು ಮನೆಯಲ್ಲೆ ಇದ್ದಾರೆ. ಇವರ ಪತ್ನಿ ಶ್ರೀಮತಿ ಮಮತಾರವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದವರು ಚಿಕಿತ್ಸೆಯಲ್ಲಿ ಪಡೆಯುತ್ತಿದ್ದರು. ಅ.13 ರಂದು ಬೆಳಗಿನ ಉಪಹಾರದ ಬಳಿಕ ಶ್ರೀಮತಿ ಮಮತಾ ರವರು ಮನೆಯಿಂದ ನಾಪತ್ತೆಯಾಗಿದ್ದರು. ಮನೆಯವರು ಹಾಗೂ ನೆರೆ-ಹೊರೆಯವರು ಎಲ್ಲ ಕಡೆ ಹುಡುಕಾಡಿದರೂ ,ಆ ದಿನ ರಾತ್ರಿಯಾದರೂ ಪತ್ತೆಯಾಗಿಲ್ಲ , ಮರುದಿನ ಅ. 14 ರಂದು ಬೆಳಿಗ್ಗೆ ಹುಡುಕಾಡುತ್ತಿರುವ ಸಮಯ ಅವರ ಮೃತ ದೇಹವು ಮನೆಯ ಅಂಗಳದಲ್ಲಿ ಇರುವ ಕುಡಿಯುವ ನೀರಿನ ಬಾವಿಯಲ್ಲಿ ಪತ್ತೆಯಾಗಿದೆ.

ಶ್ರೀಮತಿ ಮಮತಾರವರಿಗೆ ಇದ್ದ ಮಾನಸಿಕ ಖಾಯಿಲೆಯಿಂದ ಹಾಗೂ ಅವರ ಗಂಡನಿಗೆ ಇರುವ ಪಾರ್ಶ್ವವಾಯು ಖಾಯಿಲೆಯಿಂದ ಬೇಸತ್ತು ಮಮತಾರವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಬಾವಿಗೆ ಹಾರಿದ್ದು, ಉಸಿರುಗಟ್ಟಿ ಮೃತ ಪಟ್ಟಿದ್ದಾರೆ. ಈ ಬಗ್ಗೆ ಮೃತರ ಪುತ್ರ ಶ್ರೀಕಾಂತ್ ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಔಷಧ ದಾನಕ್ಕಾಗಿ ಕ್ಷೇತ್ರದಿಂದ ವಾರ್ಷಿಕವಾಗಿ ರೂ.2ರಿಂದ 3 ಕೋಟಿ ರೂ. ಅನುದಾನ: ಡಾ.ಹೆಗ್ಗಡೆ

Suddi Udaya

ಕಳೆಂಜ ಗ್ರಾಮ ಪಂಚಾಯತ್ ನ ಗ್ರಾಮ ಸಭೆ

Suddi Udaya

ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ “CBK CUP” ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಶಾಖೆಯ ಹತ್ತನೇ ವರ್ಷದ ಆಚರಣೆ

Suddi Udaya

ಗುರುವಾಯನಕೆರೆ ಹೋಟೆಲ್ ರೇಸ್ ಇನ್ ನ ಆಹಾರ ವಿಭಾಗವಾದ “ಪೆಗ್ಸ್ ರೆಸ್ಟೋ ಬಾರ್ & ಫ್ಯಾಮಿಲಿ ರೆಸ್ಟೋರೆಂಟ್” ಹೊಸ ಆಡಳಿತದೊಂದಿಗೆ ಶುಭಾರಂಭ

Suddi Udaya

ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ ಇದರ 8 ನೇ ವಾರ್ಷಿಕೋತ್ಸವ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ