September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಆರಂಬೋಡಿ : ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಬಾವಿಯಲ್ಲಿ ಪತ್ತೆ

ಆರಂಬೋಡಿ : ಇಲ್ಲಿಯ ಪಿಲಿಕಜೆಯ ನಿವಾಸಿ ಶ್ರೀಮತಿ ಮಮತಾ(45ವ) ಅವರು ಅ.13 ರಂದು ಮನೆಯಿಂದ ನಾಪತ್ತೆಯಾಗಿದ್ದು, ಅವರ ಮೃತ ದೇಹವು ಬಾವಿಯಲ್ಲಿ ಮರುದಿನ ಪತ್ತೆಯಾದ ಘಟನೆ ಅ.14 ರಂದು ನಡೆದಿದೆ.

ಘಟನೆ ವಿವರ: ಆರಂಬೋಡಿ ಗ್ರಾಮದ ಪಿಲಿಕಜೆ ನಿವಾಸಿ ಶ್ರೀಧರ ಪೂಜಾರಿ ಅವರು ಸುಮಾರು 7 ವರ್ಷಗಳ ಹಿಂದೆ ಪಾರ್ಶ್ವವಾಯು ಖಾಯಿಲೆಗೆ ತುತ್ತಾಗಿದ್ದು ಎಡಕೈ ಹಾಗೂ ಎಡಕಾಲಿನ ಸ್ವಾಧಿನತೆ ಕಳೆದುಕೊಂಡು ಮನೆಯಲ್ಲೆ ಇದ್ದಾರೆ. ಇವರ ಪತ್ನಿ ಶ್ರೀಮತಿ ಮಮತಾರವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದವರು ಚಿಕಿತ್ಸೆಯಲ್ಲಿ ಪಡೆಯುತ್ತಿದ್ದರು. ಅ.13 ರಂದು ಬೆಳಗಿನ ಉಪಹಾರದ ಬಳಿಕ ಶ್ರೀಮತಿ ಮಮತಾ ರವರು ಮನೆಯಿಂದ ನಾಪತ್ತೆಯಾಗಿದ್ದರು. ಮನೆಯವರು ಹಾಗೂ ನೆರೆ-ಹೊರೆಯವರು ಎಲ್ಲ ಕಡೆ ಹುಡುಕಾಡಿದರೂ ,ಆ ದಿನ ರಾತ್ರಿಯಾದರೂ ಪತ್ತೆಯಾಗಿಲ್ಲ , ಮರುದಿನ ಅ. 14 ರಂದು ಬೆಳಿಗ್ಗೆ ಹುಡುಕಾಡುತ್ತಿರುವ ಸಮಯ ಅವರ ಮೃತ ದೇಹವು ಮನೆಯ ಅಂಗಳದಲ್ಲಿ ಇರುವ ಕುಡಿಯುವ ನೀರಿನ ಬಾವಿಯಲ್ಲಿ ಪತ್ತೆಯಾಗಿದೆ.

ಶ್ರೀಮತಿ ಮಮತಾರವರಿಗೆ ಇದ್ದ ಮಾನಸಿಕ ಖಾಯಿಲೆಯಿಂದ ಹಾಗೂ ಅವರ ಗಂಡನಿಗೆ ಇರುವ ಪಾರ್ಶ್ವವಾಯು ಖಾಯಿಲೆಯಿಂದ ಬೇಸತ್ತು ಮಮತಾರವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಬಾವಿಗೆ ಹಾರಿದ್ದು, ಉಸಿರುಗಟ್ಟಿ ಮೃತ ಪಟ್ಟಿದ್ದಾರೆ. ಈ ಬಗ್ಗೆ ಮೃತರ ಪುತ್ರ ಶ್ರೀಕಾಂತ್ ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ತಾಲೂಕು ಮಟ್ಟದ ಕರಾಟೆ ಪಂದ್ಯಾಟ: ಪಿಲ್ಯ ಗುಡ್ ಫ್ಯೂಚರ್ ಚೈಲ್ಡ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಬಂದಾರು: ಮೈರೋಳ್ತಡ್ಕ ಶಿವ ಗೆಳಯರ ಬಳಗದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಮಡಂತ್ಯಾರು ಸಹಕಾರಿ ಸಂಘಕ್ಕೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಕಾಶಿಪಟ್ಣ ಕೇಳದಪೇಟೆ ಮಸೀದಿಗೆ ಖಾಝಿಯಾಗಿ ತ್ವಾಖಾ ಉಸ್ತಾದ್ ಅಧಿಕಾರ ಸ್ವೀಕಾರ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಣಾಹ೯ ಪೋಸ್ಟ್ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲು

Suddi Udaya

ಪಿಯುಸಿ ಫಲಿತಾಂಶ: ಪುತ್ತೂರಿನ ವಿವೇಕಾನಂದ ಪ.ಪೂ. ಕಾಲೇಜಿನ ವಿಜ್ಞಾನ ವಿಭಾಗದ ಅಭಿರಾಮ್ ವಿ. ಭಟ್ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್

Suddi Udaya
error: Content is protected !!