23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕೊಕ್ಕಡ ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆಗಳ ವಿರುದ್ಧ ಬೃಹತ್ ಪ್ರತಿಭಟನೆ

ಕೊಕ್ಕಡ : ಕೊಕ್ಕಡ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ, ವಂಚನೆಗಳಿಂದ ಗ್ರಾಹಕರಿಗೆ ಆಗುತ್ತಿರುವ ಸಮಸ್ಯೆ, ಅನ್ಯಾಯಗಳನ್ನು ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಹಾಗೂ ವರದಿ ಬಹಿರಂಗ ಪಡಿಸಬೇಕು. ಎಲ್ಲಾ ಅನ್ಯಾಯಗಳನ್ನು ತಡೆಯಲು ಕ್ರಮ ಕೈಗೊಳ್ಳಬೇಕೆಂದು ಅ.14ರಂದು ಕೊಕ್ಕಡ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಕೊಕ್ಕಡ ಕೆನರಾ ಬ್ಯಾಂಕಿನ ದೌರ್ಜನ್ಯ, ಅಕ್ರಮ ವಿರೋಧಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಯಿತು.

ಸೈಬರ್ ಅಪರಾಧಗಳು ಹೆಚ್ಚು ನಡೆದಿದ್ದು ಇವರ ಪೈಕಿ ಒಬ್ಬ ಗ್ರಾಹಕರಿಗೆ ಮಾತ್ರ ಹಣ ಹಿಂತಿರುಗಿ ಬಂದಿದ್ದು ಈ ಬಗ್ಗೆ ವರದಿ ಕೇಳಿದರು ಬ್ಯಾಂಕಿನ ಸಿಬ್ಬಂದಿಗಳು ಯಾವುದೇ ರೀತಿಯ ಮಾಹಿತಿ ನೀಡಲು ನಿರಾಕರಿಸುತ್ತಿರುವುದರಿಂದ ಗ್ರಾಹಕರಿಗೆ ಸಂಶಯ ಕಾಡುತ್ತಿದೆ ಅಲ್ಲದೆ ಅತಿ ದೊಡ್ಡಮಟ್ಟದಲ್ಲಿ ಗ್ರಾಹಕರ ಖಾತೆಯಿಂದ ಸೈಬರ್ ಅಪರಾಧದ ಮೂಲಕ ಹಣ ವರ್ಗಾವಣೆ ಆಗುತ್ತಿರುವುದರಿಂದ ಬ್ಯಾಂಕಿನ ಗ್ರಾಹಕರೆಲ್ಲರೂ ಅಂತಕಕ್ಕೆ ಒಳಗಾಗಿದ್ದಾರೆ.

ಇಲ್ಲಿನ ಹೆಚ್ಚಿನ ಸಿಬ್ಬಂದಿಗಳಿಗೆ ವ್ಯವಹರಿಸಲು ಭಾಷೆ ಸಮಸ್ಯೆ ಆಗುತ್ತಿರುವುದರಿಂದ ಗ್ರಾಹಕರಿಗೆ ಬ್ಯಾಂಕಿನೊಂದಿಗೆ ವ್ಯವಹಾರ ನಡೆಸಲು, ತಮಗಾದ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ

ಕಳೆದ 19ವರ್ಷಗಳಿಂದ ಬ್ಯಾಂಕಿನ ಸರಾಫರಾಗಿ ಕೆಲಸ ನಿರ್ವಹಿಸುತ್ತಿದ್ದ ಪದ್ಮನಾಭ ಆಚಾರ್ಯ ಅವರನ್ನು ಸಕಾರಣವಿಲ್ಲದೆ ಆರೋಪಿಯನ್ನಾಗಿ ಬಿಂಬಿಸಿ ಕೆಲಸದಿಂದ ವಜಾ ಮಾಡಲಾಗಿದೆ, ಈ ಬಗ್ಗೆ ಸರಿಯಾದ ಕಾರಣ ನೀಡುವಂತೆ ಒತ್ತಾಯಿಸಲಾಯಿತು.ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಡೆಸುವುದಾಗಿ ಸಂಘಟಕರು ತಿಳಿಸಿದರು.

ಹೋರಾಟದಲ್ಲಿ ನ್ಯಾಯವಾದಿ ಬಿ.ಎಂ ಭಟ್, ಸಾಮಾಜಿಕ ಹೋರಾಟಗಾರರಾದ ಈಶ್ವರಿ, ಧನಂಜಯ, ಶೀನ ನಾಯ್ಕ್, ತುಕ್ರಪ್ಪ ಶೆಟ್ಟಿ, ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ ಅಧ್ಯಕ್ಷ ಸುಬ್ರಮಣ್ಯ ಶಬರಾಯ, ಇಸ್ಮಾಯಿಲ್, ಸಮಾಜ ಸೇವಕ ಶಾಮರಾಜ್, ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಡಾ.ಗಣೇಶ್ ಪ್ರಸಾದ್, ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿಯ ಮಾಜಿ ಸದಸ್ಯ ಪ್ರಶಾಂತ.ರೈ, ಜೇಸುದಾಸ್, ನಾರಾಯಣಗೌಡ, ಸತ್ಯದಾಸ್, ಶ್ರೀಧರ ಗೌಡ, ಆನಂದ.ರೈ, ಶಾಂತಪ್ಪ ಮಡಿವಾಳ, ಬ್ಯಾಂಕಿನ ಸರಾಫ ಪದ್ಮನಾಭ ಆಚಾರ್ಯ ದಂಪತಿಗಳು ಮುಂತಾದವರು ಉಪಸ್ಥಿತರಿದ್ದರು.

Related posts

ಸುಂದರ ಮಲೆಕುಡಿಯರ ಕೊಲೆ ಯತ್ನ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ: ಮಲೆಕುಡಿಯ ಸಂಘ ದಕ್ಷಿಣ ಕನ್ನಡ ಜಿಲ್ಲೆ

Suddi Udaya

ಉಜಿರೆ: ಸರಳ ಸಂಸ್ಕೃತ ವ್ಯಾಕರಣ ಪುಸ್ತಕ ಬಿಡುಗಡೆ

Suddi Udaya

ಧರ್ಮಸ್ಥಳ: ಉಚಿತ ಫೂಟ್ ಫಲ್ ಥೆರಪಿ ಶಿಬಿರ: ಮಾಹಿತಿ ಕಾರ್ಯಗಾರ

Suddi Udaya

ತೆಕ್ಕಾರು ಕುಟ್ಟಿಕಳ ಸ. ಹಿ ಪ್ರಾ. ಶಾಲೆಗೆ ಬೆಸ್ಟ್ ಫೌಂಡೇಶನ್ ವತಿಯಿಂದ ಪೀಠೋಪಕರಣ ವಿತರಣೆ

Suddi Udaya

ಎಸ್.ಡಿ.ಎಂ ಪ.ಪೂ. ಕಾಲೇಜಿನಲ್ಲಿ ಯೋಗ ದಿನಾಚರಣೆ ಹಾಗೂ ಯೋಗ ಸಪ್ತಾಹದ ಉದ್ಘಾಟನೆ

Suddi Udaya

ಶಿರ್ಲಾಲಿನಲ್ಲಿ ಅಂತರ್ ಜಿಲ್ಲಾ ಮಟ್ಟದ ಮುಕ್ತ ಕಬಡ್ಡಿ ಪಂದ್ಯಾಟ

Suddi Udaya
error: Content is protected !!