
ನೆರಿಯ: ತೋಟತ್ತಾಡಿ ಪಿತ್ತಿಲು ನಿವಾಸಿಯಾದ ಶಿವಕುಮಾರ್ ರವರು 300 ಎಕ್ರೆ ಎಸ್ಟೇಟ್ ಹತ್ತಿರ ಅಣಿಯೂರು ನದಿಗೆ ಮೀನು ಹಿಡಿಯಲು ಹೋಗಿ ನಾಪತ್ತೆಯಾದ ಘಟನೆ ಅ.13 ರಂದು ನಡೆದಿತ್ತು.

ಕುಟುಂಬದಸ್ಥರು ಮತ್ತು ಊರಿನವರು ಸೇರಿ ಹುಡುಕಾಟ ನಡೆಸಿದ್ದು, ಮೃತ ದೇಹವು ಅ.14ರಂದು ನಸುಕಿನ ಜಾವ ಹೊಳೆಯಲ್ಲಿ ಪತ್ತೆಯಾಗಿದೆ. ಘಟನ ಸ್ಥಳಕ್ಕೆ ಧರ್ಮಸ್ಥಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.