ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಜೆಸಿ ಭವನದಲ್ಲಿ ಸಂವಹನ ಕಲೆ ಮತ್ತು ಅವಕಾಶಗಳನ್ನು ಬಳಸಿಕೊಳ್ಳುವ ಬಗ್ಗೆ ಸದಸ್ಯರಿಗೆ ತರಬೇತಿಯನ್ನು ನಡೆಸಲಾಯಿತು.
ಜೆಸಿಐಯ ಪ್ರಾವಿಷನಲ್ ವಲಯ ತರಬೇತುದಾರರಾದ ಜೆಸಿಐ ಮುಂಡ್ಕುರು ಭಾರ್ಗವ ಘಟಕದ ಪೂರ್ವ ಅಧ್ಯಕ್ಷರು, ವಲಯ ಹದಿನೈದರ ಲೇಡಿ ಜೆಸಿ ವಿಭಾಗದ ಸಂಯೋಜಕರಾದ ಮಾಲತಿ ಉಮೇಶ್ ಹಾಗೂ ಜೆಸಿಐ ಮಂಗಳೂರು ಸಾಮ್ರಾಟ್ ಘಟಕದ ಸದಸ್ಯರು, ಯುವ ಉದ್ಯಮಿ ವರುಣ್ ಪ್ರಭುರವರು ತರಬೇತಿಯನ್ನು ನಡೆಸಿಕೊಟ್ಟರು.
ಜೆಸಿಐ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ರಂಜಿತ್ ಎಚ್.ಡಿ ಸ್ವಾಗತಿಸಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.
ಘಟಕದ ಪೂರ್ವಾಧ್ಯಕ್ಷರಾದ ಪ್ರಶಾಂತ್ ಲಾಯಿಲ ತರಬೇತಿಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು ಹಾಗೂ ತರಬೇತುದಾರರನ್ನು ಘಟಕದ ಪರವಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ಮುಂಡ್ಕುರ್ ಭಾರ್ಗವ ಘಟಕದ ಅಧ್ಯಕ್ಷರಾದ ಗಣೇಶ್ ಆಚಾರ್ಯ, ಬೆಳ್ತಂಗಡಿ ಘಟಕದ ಪೂರ್ವಾಧ್ಯಕ್ಷರುಗಳಾದ ನಾರಾಯಣ ಶೆಟ್ಟಿ, ಚಿದಾನಂದ ಇಡ್ಯಾ, ಲೇಡಿ ಜೆಸಿ ಸಂಯೋಜಕರಾದ ಶ್ರುತಿರಂಜಿತ್, ಉಪಾಧ್ಯಕ್ಷರಾದ ಶೈಲೇಶ್, ಜೆಜೆಸಿ ಅಧ್ಯಕ್ಷರಾದ ಸಮನ್ವಿತ್ ಕುಮಾರ್, ಅಕ್ಷಯ್ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.
ವೇದಿಕೆ ಆಹ್ವಾನವನ್ನು ಉಪಾಧ್ಯಕ್ಷರಾದ ಆಶಾ ಪ್ರಶಾಂತ್, ತರಬೇತುದಾರರ ಪರಿಚಯವನ್ನು ಕಾರ್ಯದರ್ಶಿ ಅನುದೀಪ್ ಜೈನ್ ಹಾಗೂ ಉಪಾಧ್ಯಕ್ಷರಾದ ಚಂದ್ರಹಾಸ್ ಬಳಂಜರವರು ಮಾಡಿದರು.