ಅಳದಂಗಡಿ: ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆ ಇವರ ಆಯೋಜಕತ್ವದಲ್ಲಿ ಪ್ರಪ್ರಥಮ ಬಾರಿಗೆ ಅಳದಂಗಡಿಯಲ್ಲಿ ಸಂಘಟನೆಯ ವತಿಯಿಂದ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮ ಹಾಗೂ ಆರೋಗ್ಯ ಶಿಬಿರ ಮತ್ತು ರಕ್ತದಾನ ಶಿಬಿರ ಹಾಗೂ ಕಾರ್ಗಿಲ್ ವೀರ ಯೋಧರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವು ಅ. 17 ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನ ವಠಾರದಲ್ಲಿ ನಡೆಯಿತು.
ಆರೋಗ್ಯ ಮೇಳ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಳದಂಗಡಿ ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರದ ಅಧ್ಯಕ್ಷ ದೇವದಾಸ್ ಕೆ. ಸಾಲ್ಯಾನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಸ್ವಾತಿ ಡೆಂಟಲ್ ಕ್ಲಿನಿಕ್ ಡಾ. ಶಶಿಧರ್ ಡೋಂಗ್ರೆ, ಶಿರ್ತಾಡಿ ನವಚೇತನಾ ಕ್ಲಿನಿಕ್ ಡಾ. ಕೃಷ್ಣ ರಾಜ್ ಭಟ್ ,ಪಿಲ್ಯ ನಾಟಿ ವೈದ್ಯ ಬೇಬಿ ಪೂಜಾರಿ,ಮಂಗಳೂರು ಕೆ.ಎಂ.ಸಿ ಅರ್ಬಟ್,ರೆಡ್ ಕ್ರಾಸ್ ಮಂಗಳೂರು ಪ್ರವೀಣ್ ಉಪಸ್ಥಿತರಿರುವರು.
ಬೆಳಿಗ್ಗೆ 9.30 ಕ್ಕೆ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಬೆಳಿಗ್ಗೆ 10 ಕ್ಕೆ ಅಳದಂಗಡಿ ಪೇಟೆಯಿಂದ ಕಾರ್ಗಿಲ್ ಯೋಧರ ಬೃಹತ್ ಮೆರವಣಿಗೆಗೆ ಡಾ. ಎನ್. ಯಂ ತುಳಪುಳೆ ಅಳದಂಗಡಿ ರವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸೇವೆಗೈದ ಕಾರ್ಗಿಲ್ ವೀರ ಯೋಧರಾದ ರಂಗಪ್ಪ ಹುಲಿಯಪ್ಪ ಆಲೂರು,ಹರೀಶ್ ರೈ ಪಿ, ಮತ್ತು ನಿಸ್ವಾರ್ಥ ಸೇವೆಗೈಯುತ್ತಿರುವ ಸಾಮಾಜಿಕ ಕಾರ್ಯಕರ್ತರಾದ ಡಾ.ರವಿ ಕಕ್ಕೆಪದವು, ಬೆಂಗಳೂರು ನಿರಾಶ್ರಿತ ಆಶ್ರಮ ಜನಸ್ನೇಹಿ ಯೋಗೀಶ್ ಇವರನ್ನು ಸನ್ಮಾನಿಸಲಾಯಿತು. ನಿವೃತ ಸೈನಿಕರಾದ ತಂಗಚ್ಚನ್,ಅನಿಕ್ ಡಿ.ಎಲ್.ದಿನೇಶ್,ಭಾಸ್ಕರ್ ನಾಯ್ಕ್,ರಮಾನಾಥ ರೈ,ಕೃಷ್ಣಾನಂದ ಶೆಟ್ಟಿ ಇವರನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಅಳದಂಗಡಿ ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರದ ಗೌರವ ಅಧ್ಯಕ್ಷ ಶಿವಪ್ರಸಾದ್ ಅಜಿಲರು ವಹಿಸಿದ್ದರು.
ವೇದಿಕೆಯಲ್ಲಿ ವಸಂತ ಪೂಜಾರಿ ಅಂಡಿಂಜೆ, ನಿವೃತ ಸೇನಾಧಿಕಾರಿ ಮೆ.ಜ.ಎಂ.ವಿ ಭಟ್, ಕೆಎಂಸಿ ಆಸ್ಪತ್ರೆಯ ಡಾ.ಕಾರ್ತಿಕ್ ಆರ್ ರಾವ್, ವೆನ್ ಲಾಕ್ ಆಸ್ಪತ್ರೆಯ ಅಂಗಾಂಗ ಕಸಿ ಸಂಯೋಜಕಿ ಪದ್ಮ ವೇಣೂರು, ಪದ್ಮಂಬ ಕ್ಯಾಟರಿಂಗ್ ಮಾಲಕ ನಾಗಕುಮಾರ್ ಜೈನ್ ಉಪಸ್ಥಿತರಿದ್ದರು.
ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರದ ಅಧ್ಯಕ್ಷ ದೇವದಾಸ್ ಕೆ ಸಾಲಿಯಾನ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಯುವ ಸಾಹಿತಿ ಚಂದ್ರಹಾಸ್ ಬಳಂಜ ನಿರೂಪಿಸಿದರು. ಹರೀಶ್ ಕಲ್ಲಾಜೆ ವಂದಿಸಿದರು.ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ಸಮಾಜ ಸೇವಾ ಸಂಘಟನೆಯ ಸದಸ್ಯರು ಸಹಕರಿಸಿದರು.