April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಕೊಕ್ಕಡ: ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ

ಕೊಕ್ಕಡ : ಸೇವಾಭಾರತಿ ಕನ್ಯಾಡಿ ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ ಶ್ರೀ ರಾಮ ಸೇವಾ ಟ್ರಸ್ಟ್ ಕೊಕ್ಕಡ ಶ್ರೀ ದುರ್ಗಾ ಮಾತೃ ಮಂಡಳಿ ಕನ್ಯಾಡಿ ಇವುಗಳ ಸಹಭಾಗಿತ್ವದಲ್ಲಿ ಮಹಿಳೆಯರಿಗಾಗಿ ಉಚಿತ 28ನೇ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಅ. 17 ರಂದು ಶ್ರೀರಾಮ ಸೇವಾ ಮಂದಿರ ಕೊಕ್ಕಡದಲ್ಲಿ ನಡೆಯಿತು.

ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಕೊಕ್ಕಡ ಅಧ್ಯಕ್ಷ ಕೆ ಕೃಷ್ಣ ಭಟ್ ರವರು ಕೊಕ್ಕಡದ ಗ್ರಾಮೀಣ ಜನರಿಗೆ ಸ್ವ ಉದ್ಯೋಗ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟರುವುದು ಬಹಳ ಸಂತೋಷದ ವಿಷಯ ಹಾಗೂ ಸೇವಾಭಾರತಿ ಸಂಸ್ಥೆಯು ನಡೆಸುವ ಸೇವೆಗಳ ಬಗ್ಗೆ ಶ್ಲಾಘಿಸಿ ಇನ್ನಷ್ಟು ಸೇವೆಯನ್ನು ಮಾಡುವ ಯಶಸ್ಸು ನಿಮ್ಮದಾಗಲಿ ಎಂದು ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷೆ ಹಾಗೂ ಬೆಳ್ತಂಗಡಿ ತಾಲೂಕು ಮಹಿಳಾ ಸಹಕಾರಿ ಸಂಘ ಇದರ ಸಿಇಒ ಸ್ವರ್ಣಗೌರಿ ಟೈಲರಿಂಗ್ ಕಲಿಯುವುದರಿಂದ ಬೇರೆ ಬೇರೆ ರೀತಿಯ ಸ್ವ – ಉದ್ಯೋಗದ ಅವಕಾಶವಿರುತ್ತದೆ.
ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ಯಾರಿಗೂ ಅವಲಂಬಿತವಾಗದೆ ಸ್ವಾವಲಂಬಿ ಜೀವನವನ್ನು ನಡೆಸುವುದು ಅತ್ಯಗತ್ಯವೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಟೈಲರಿಂಗ್ ತರಬೇತುದಾರರಾದ ಗೀತಾ ತರಬೇತಿಯಲ್ಲಿ ತಿಳಿಸಿಕೊಟ್ಟ ಹೊಲಿಗೆಯ ವಿಧಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ, ತಮಗೆ ಶಿಬಿರಾರ್ಥಿಗಳಿಂದ ಕಲಿಯುವ ಸಂದರ್ಭದಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುತ್ತಿತ್ತು ಎಂದು ಸಂತಸ ವ್ಯಕ್ತಪಡಿಸಿದರು.

ಶ್ರೀ ದುರ್ಗಾ ಮಾತೃ ಮಂಡಳಿಯಿಂದ ಹಾಗೂ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಕೊಕ್ಕಡ ಇವರುಗಳು ಸೇವಭಾರತಿ ಸಂಸ್ಥೆಗೆ 2 ಟೈಲರಿಂಗ್ ಮಿಶಿನ್ ಅನ್ನು ನೀಡಿ ಮಹಿಳೆಯರ ಸ್ವ ಉದ್ಯೋಗಕ್ಕೆ ದಾರಿದೀಪವಾಗಿದ್ದಾರೆ.

ಸಂಸ್ಥೆಯ ಪರವಾಗಿ ಶ್ರೀಮತಿ ಗೀತಾ ಹಾಗೂ 1 ತಿಂಗಳುಗಳ ಕಾಲ ನಮಗೆ ಶಿಬಿರವನ್ನು ನಡೆಸಲು ಸಂಪೂರ್ಣ ಸಹಕಾರವನ್ನು ನೀಡಿದ ಪುರುಷೋತ್ತಮ ಇವರಿಬ್ಬರಿಗೂ ಸನ್ಮಾನಿಸಿ ಗೌರವಿಸಲಾಯಿತು. ನಂತರ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ , ಮಂಗಳೂರು ನಿರ್ದೇಶಕರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಕೊಕ್ಕಡ ಅಧ್ಯಕ್ಷರಾದ ಕುಶಾಲಪ್ಪ ಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೊಕ್ಕಡ ಉಪಾಧ್ಯಕ್ಷರಾದ ಈಶ್ವರ್ ಭಟ್ ಹಿತ್ತಿಲು, ಶ್ರೀರಾಮ ಸೇವಾ ಟ್ರಸ್ಟ್(ರಿ .),ಕೊಕ್ಕಡ ಅಧ್ಯಕ್ಷರು ಹಾಗೂ ಸೇವಾಭಾರತಿ(ರಿ.), ಕನ್ಯಾಡಿ ಕಾರ್ಯದರ್ಶಿ ಬಾಲಕೃಷ್ಣ, ಶ್ರೀ ದುರ್ಗಾ ಮಾತೃ ಮಂಡಳಿಯ ಖಜಾಂಚಿ ಶ್ರೀಮತಿ ಬಬಿತಾ, ಶ್ರೀ ದುರ್ಗಾ ಮಾತೃ ಮಂಡಳಿಯ ಸದಸ್ಯರಾದ ಶ್ರೀಮತಿ ಸುಮತಿ ಟೈಲರಿಂಗ್ ತರಬೇತುದಾರರಾದ ಗೀತಾ ಕೊಕ್ಕಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೇವಾಭಾರತಿ ಕನ್ಯಾಡಿಯ ಅಕೌಂಟೆಂಟ್ ಅಕ್ಷತಾ ಸ್ವಾಗತಿಸಿ, ಡಾಕ್ಯುಮೆಂಟೇಶನ್, ಮಾನಿಟರಿಂಗ್ ಮತ್ತು ಇವಲ್ಯೂವೇಟಿಂಗ್ ಕಾರ್ಡಿನೇಟರ್ ಸುಮ ಕಾರ್ಯಕ್ರಮ ನಿರೂಪಿಸಿ, ಶ್ರೀರಾಮ ಸೇವಾ ಟ್ರಸ್ಟ್(ರಿ.), ಸದಸ್ಯೆ ಪ್ರಮೀಳಾ ಧನ್ಯವಾದವಿತ್ತರು.
ಒಟ್ಟು 63 ಮಂದಿ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related posts

ಮರೋಡಿ: ಜ.27 ರಂದು ಅಂಬ್ಯುಲೆನ್ಸ್ ಲೋಕಾರ್ಪಣೆ

Suddi Udaya

ಕೊಯ್ಯೂರು ಗ್ರಾ.ಪಂ. ನ ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ರವರಿಂದ ಮತ ಚಲಾವಣೆ

Suddi Udaya

ಶ್ರೀ ಧ. ಮಂ. ಪ ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ

Suddi Udaya

ಮಚ್ಚಿನ: ಕಾಂಗ್ರೆಸ್ ಹಿರಿಯ ಕಾರ್ಯಕರ್ತ ಸೇಸು ಮೂಲ್ಯ ನಿಧನ

Suddi Udaya

ಅ.2: ಗಾಂಧಿಸ್ಮೃತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶ

Suddi Udaya
error: Content is protected !!