24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವಾಣಿ ಪ.ಪೂ. ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

ಬೆಳ್ತಂಗಡಿ: ದೇಶದ ಬೆಳವಣಿಗೆಯಲ್ಲಿ ಯುವ ಜನಾಂಗ ತೊಡಗಿಸಿಕೊಂಡಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗುವುದು ಎಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ I ಯ ಸಹ ಶಿಕ್ಷಕರಾದ ವಿಕಾಸ್ ರಾವ್ ಹೇಳಿದರು.


ಅವರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ I ಇಲ್ಲಿ ನಡೆದ ವಾಣಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡುತ್ತಾ, ಸಕರಾತ್ಮಕ ಚಿಂತನೆಗಳೊಂದಿಗೆ ನಿಸ್ವಾರ್ಥ ಸೇವೆ, ಭಾವೈಕ್ಯತೆ, ಸೌಹಾರ್ದತೆ ಹಾಗೂ ಜೀವನಾನುಭವಗಳನ್ನು ಎನ್ ಎಸ್ ಎಸ್ ನಿಂದ ಪಡೆಯಲು ಸಾಧ್ಯ. ಇಂತಹ ಚಟುವಟಿಕೆಗಳಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದರು.

ವಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ರಾಜಶೇಖರ ಅಜ್ರಿ, ಬೆಳ್ತಂಗಡಿಯ ಉದ್ಯಮಿಗಳಾದ ಅಭಿನಂದನ್ ಹರೀಶ್ ಕುಮಾರ್, ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಟ್ರಸ್ಟಿ ಗಣೇಶ್ ಕನಾಲು, ಬೆಳ್ತಂಗಡಿ ಸಿ ಎ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಮುನಿರಾಜ ಅಜ್ರಿ, ಬೆಳ್ತಂಗಡಿ ಜೈನ್ ರೆಸ್ಟೋರೆಂಟ್ ನ ಮಾಲಕರಾದ ಸಂತೋಷ್ ಕುಮಾರ್ ಜೈನ್, ನಡ ಗ್ರಾಮ ಪಂಚಾಯಿತ್ ಸದಸ್ಯರಾದ ಪ್ರವೀಣ್ ವಿ ಜೆ, ವಾಣಿ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಪ್ರಸಾದ್ ಕುಮಾರ್, ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಕನ್ಯಾಡಿ I ಯ ಮುಖ್ಯೋಪಾಧ್ಯಾಯರಾದ ಹನುಮಂತರಾಯ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನೋಣಯ್ಯ ಗೌಡ, ಜನಾರ್ದನ ಗೌಡ ಕಡ್ತಿಯಾರ್, ನಾರಾಯಣ ಗೌಡ ಕೈಲಾಜೆ ಉಪಸಿತರಿದ್ದರು.


ವಾಣಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಎಂ ಸ್ವಾಗತಿಸಿದರು. ಎನ್ಎಸ್ಎಸ್ ಸಹ ಕಾರ್ಯಕ್ರಮಾಧಿಕಾರಿ ಶ್ರೀಮತಿ ದೀಕ್ಷಾ ವರದಿ ವಾಚಿಸಿದರು. ಎನ್ಎಸ್ಎಸ್ ಮುಖ್ಯಕಾರ್ಯಕ್ರಮಾಧಿಕಾರಿ ಶಂಕರ್ ರಾವ್ ಧನ್ಯವಾದವಿತ್ತರು. ಉಪನ್ಯಾಸಕ ಸುಧೀರ್ ಕೆಎನ್ ಕಾರ್ಯಕ್ರಮ ನಿರೂಪಿಸಿದರು.

Related posts

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗುವ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕೊಯ್ಯೂರು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ

Suddi Udaya

ಬೆಳ್ತಂಗಡಿ ಗ್ರಾಹಕರಿಗೆ ಸುವರ್ಣಾವಕಾಶ ; ಯಾವುದೇ ಬಟ್ಟೆ ಖರೀದಿಸಿದರೂ ರೂ.200 ಮಾತ್ರ

Suddi Udaya

ಬೆಳ್ತಂಗಡಿಯಲ್ಲಿ 500 ಎಕ್ರೆ ಯಾಂತ್ರಿಕೃತ ಯಂತ್ರಶ್ರೀ ನಾಟಿಗೆ ಚಾಲನೆ

Suddi Udaya

ವಾಣಿ ಕಾಲೇಜು: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಸಮಾರೋಪ

Suddi Udaya

ಕಕ್ಕಿಂಜೆ : ಕೃಷಿಕ ಗೋಕುಲ್ ದಾಸ್ ಭಟ್ ನಿಧನ

Suddi Udaya
error: Content is protected !!