ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನಿಂದ ಯುವಸಿರಿ- ರೈತ ಭಾರತದ ಐಸಿರಿ ವಿಶಿಷ್ಟ ಕಾರ್ಯಕ್ರಮ ಸುಮಾರು 500ಕ್ಕೂ ಮಿಕ್ಕಿ ಕಾಲೇಜು ವಿದ್ಯಾರ್ಥಿಗಳಿಂದ ಏಕಕಾಲದಲ್ಲಿ ಗದ್ದೆಯಲ್ಲಿ ನೇಜಿನಾಟಿ

Suddi Udaya

ಉಜಿರೆ: ಅನ್ನಕ್ಕಿಂತ ಮಿಗಿಲಾದ ದಾನವಿಲ್ಲ.ರೈತ ಎಷ್ಟು ಕಷ್ಟಪಟ್ಟು ಭತ್ತ ಬೇಸಾಯ ಮಾಡುತ್ತಾರೆಂದು ಇಂದಿನ ಯುವ ಪೀಳಿಗೆಗೆ ತಿಳಿಯದಾಗಿದೆ. ಅದನ್ನು ಯುವ ಮನಸ್ಸುಗಳಿಗೆ ನೇಜಿ ನಾಟಿ ಮೂಲಕ ವಿಶೇಷ ಪ್ರಯತ್ನ ಮಾಡುತ್ತಿರುವ ಬದುಕು ಕಟ್ಟೋಣ ತಂಡದ ಕಾರ್ಯವೈಖರಿ ಮೆಚ್ಚುವಂತದ್ದು ಎಂದು ಸೋನಿಯಾ ಯಶೋವರ್ಮ ಹೇಳಿದರು.

ಅವರು ಅ.20 ರಂದು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ ಇದರ ನೇತೃತ್ವದಲ್ಲಿ, ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ ಘಟಕದ ಸುವರ್ಣಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ಕಾಲೇಜಿನ ಕ್ರೀಡಾಸಂಘ, ಬೆಳ್ತಂಗಡಿ ರೋಟರಿಕ್ಲಬ್, ತಾಲ್ಲೂಕು ಪತ್ರಕರ್ತರ ಸಂಘ ಹಾಗೂ ಅನಂತೋಡಿ ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ದೇವಸ್ಥಾನದ ವಠಾರದಲ್ಲಿರುವ ನಾಲ್ಕೂವರೆ ಎಕ್ರೆ ಗದ್ದೆಯಲ್ಲಿ ಎಸ್.ಡಿ.ಎಂ. ಕಾಲೇಜಿನ ಎನ್.ಎಸ್.ಎಸ್. ಘಟಕದ ಸ್ವಯಂ ಸೇವಕರು ಹಾಗೂ ಎಸ್.ಡಿ.ಎಂ. ಕ್ರೀಡಾ ಸಂಘದ ಸದಸ್ಯರು,ಊರವರು ಯುವಸಿರಿ, ರೈತ ಭಾರತದ ಐಸಿರಿ ನೇಜಿ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ ಯುವ ಪೀಳಿಗೆ ಮತ್ತು ಹಿರಿಯರನ್ನು ಒಟ್ಟಿಗೆ ಸೇರಿಸಿಕೊಂಡು ಪರಶುರಾಮ ಸೃಷ್ಟಿಯ ತುಳುನಾಡ ನಾಗರಾಧನೆಯ ಪುಣ್ಯ ಭೂಮಿಯ ಸತ್ವವನ್ನು ಸಾರುವ ಮಹತ್ತರವಾದ ನೇಜಿ‌ನಾಟಿಯನ್ನು ಯುವ ಜನತೆಗೆ ತಿಳಿಸುವ ಅದ್ಬುತ ಕಾರ್ಯಕ್ರಮವನ್ನು ಮೋಹನ್ ಕುಮಾರ್, ರಾಜೇಶ್ ಪೈ ಅವರ ಸಂಚಾಲಕತ್ವದ ಬದುಕು ಕಟ್ಟೋಣ ಬನ್ನಿ ತಂಡ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು.

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕ ಮೋಹನ್ ಕುಮಾರ್ ಮಾತನಾಡಿ ರೈತ ದೇಶದ ಬೆನ್ನೆಲುಬು, ಯುವ ಮನಸ್ಸುಗಳಿಗೆ ಭತ್ತದ ಕೃಷಿಯ ಬಗ್ಗೆ ತಿಳಿಯಬೇಕು ಎಂಬ‌ ಸದುದ್ದೇಶದಿಂದ ಸುಮಾರು ೫೦೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಂದ ನೇಜಿ ನಾಟಿ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಯುವ ಜನತೆ ಇಂತಹ ಕಾರ್ಯಕ್ರಮ ಮಾಡಬೇಕು.ಮುಂದೆ ಬೆಳೆಯ ರಕ್ಷಣೆ, ಕಟಾವು ಮಾಡಿ ಭತ್ತದಿಂದ ಅಕ್ಕಿ ಪಡೆದು ಅಕ್ಕಿಯನ್ನು ಸ್ಥಳೀಯ ದೇವಸ್ಥಾನಗಳಿಗೆ ಅರ್ಪಿಸಲಾಗುವುದು. ಬೈಹುಲ್ಲನ್ನು ನಂದಗೋಕುಲ ಗೋಶಾಲೆಗೆ ನೀಡುತ್ತಿದ್ದೇವೆ ಎಂದರು.

ಕೃಷಿ ಋಷಿ,ಸಾಧಕ,ಭತ್ತದ ತಳೊ ಉಳಿಸುವ ವಿಶೇಷ ಪ್ರಯತ್ನ ಮಾಡುತ್ತಿರುವ ಬಿ.ಕೆ. ದೇವರಾವ್ ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ವಿಧಾನ‌ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್,ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಸಂಚಾಲಕರಾದ ಮೋಹನ್ ಕುಮಾರ್,ರಾಜೇಶ್ ಪೈ,ಅಧ್ಯಕ್ಷ ಬಿ.ಕೆ ಧನಂಜಯ ರಾವ್,ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಳ,ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿನ ರವೀಶ್ ಪಡುಮಲೆ,ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಬಿಎ ಕುಮಾರ್ ಹೆಗ್ಡೆ, ಬೆಳಾಲು ಅನಂತೋಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅದ್ಯಕ್ಷ ಶ್ರೀನಿವಾಸ ಗೌಡ,ಉಪಾಧ್ಯಕ್ಷೆ ಮಮತಾ ದಿನೇಶ್ವಪೂಜಾರಿ, ಧರ್ಮಸ್ಥಳ ಕೃಷಿ ವಿಭಾಗದ ಮುಖ್ಯಸ್ಥರಾದ ಬಾಲಕೃಷ್ಣ ಪೂಜಾರಿ,ಬೆಳಾಲು ಗ್ರಾ.ಪಂ‌ ಅದ್ಯಕ್ಷೆ ವಿದ್ಯಾ ಶ್ರೀನಿವಾಸ್,ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿ ಮಹೇಶ್ ಶೆಟ್ಟಿ, ದೀಪಾ ಆರ್,ದೇಗುಲದ ಆರ್ಚಕ ದುರ್ಗಾಪ್ರಸಾದ್,ಮಹಿಳಾ ಸಮಿತಿ ಅದ್ಯಕ್ಷೆ ಹೇಮಾಲತಾ ಶ್ರೀನಿವಾಸ್,ರಮೇಶ್ ಎಸ್.ಡಿ.ಎಂ ಉಪಸ್ಥಿತರಿದ್ದರು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು.ತಿಮ್ಮಯ್ಯ ನಾಯ್ಕ್ ನಿರೂಪಿಸಿದರು. ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಅಮೀನ್ ಮತ್ತು ಸತೀಶ್ ಹೊಸ್ಮಾರು ವಿಕ್ಷಕ ವಿವರಣೆ ಮಾಡಿದರು.

Leave a Comment

error: Content is protected !!