ಗುಂಡೂರಿ :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಗುರುವಾಯನಕೆರೆ
” ನೆಲ, ಜಲ,ಪ್ರಾಣಿ, ಸಂಕುಲ ಮತ್ತು ವನ,ಸಂರಕ್ಷಣೆಯ ಪ್ರಯುಕ್ತ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ ಪ್ರಗತಿ ಬಂಧು ತಂಡಗಳಿಗೆ ಗಿಡ ವಿತರಣಾ ಕಾರ್ಯಕ್ರಮ”
ಪ್ರವೀಣ್ ಚಂದ್ರ ಜೈನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆರಂಬೋಡಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಶುಭ ನುಡಿದರು
ಹಣ್ಣಿನ ಗಿಡ ವಿತರಣೆ ಮಾಡಿ ಮಾತನಾಡಿದ
ದಯಾನಂದ ಪೂಜಾರಿ (ಶ್ರೀ,ಕ್ಷೆ,ದ, ಗ್ರಾ ಯೋ, ಯೋಜನಾಧಿಕಾರಿ) ಮಾತನಾಡಿ ಯೋಜನೆ ವತಿಯಿಂದ ನೆಲ,ಜಲ,ಪ್ರಾಣಿ, ಸಂಕುಲ ಮತ್ತು ವನ ಸಂರಕ್ಷಣೆ ಮಾಡಲು ಪೂಜ್ಯರು ಸಂಕಲ್ಪಿಸಿದಂತೆ ಅರಣ್ಯ ಪ್ರದೇಶದ ಪ್ರಾಣಿಗಳು ಸಂತತಿಗಳ ಉಳಿವಿಗಾಗಿ ಕಾಡುಪ್ರಾಣಿಗಳಿಗೆ ಬೇಕಾಗುವ ಹಣ್ಣು ಹಂಪಲು ದೊರೆಯುವಂತೆ ರಾಜ್ಯದ ವಿವಿಧ ಅರಣ್ಯಗಳಲ್ಲಿ ಅರಣ್ಯ ಇಲಾಖೆಯ ಒಪ್ಪಿಗೆ ಮೇರೆಗೆ ಹಣ್ಣಿನ ಗಿಡವನ್ನು ಸಾರ್ವಜನಿಕ ಸ್ಥಳಗಳಲ್ಲಿ ಶಾಲೆ ಕಾಲೇಜುಗಳ ಹೊರಾಂಗಣದಲ್ಲಿ ಅರಣ್ಯದಲ್ಲಿ ಈ ವರ್ಷ ಈಗಾಗಲೇ ಗಿಡ ನಾಟಿ ಮಾಡಲಾಗಿದೆ ಪ್ರಗತಿ ಬಂದು ತಂಡದ ಸದಸ್ಯರಿಗೆ ತಮ್ಮ ಜಮೀನಿನಲ್ಲಿ ನಾಟಿ ಮಾಡಲು ಸೂಕ್ತವಾದ ರಂಬಾಟನ್, ಮ್ಯಾಂಗೋ ಸ್ಟೀನ, ಜಂಬುನೇರಳೆ, ಮಕುಟದೇವ,ಅಮೃತ್ ನೋನಿ, ನೇರಳೆ, ಹೀಗೆ ವಿವಿಧ ಹಣ್ಣಿನ ಗಿಡ ವನ್ನು ಪ್ರಗತಿ ಬಂದು ತಂಡದ ಸದಸ್ಯರಿಗೆ ವಿತರಣೆ ಮಾಡಿ ಉತ್ತಮ ರೀತಿಯಲ್ಲಿ ಗಿಡ ಬೆಳೆಸ ಬೇಕೆಂದು ಮಾಹಿತಿ ನೀಡಿದರು
ಕಾರ್ಯಕ್ರಮದ ಮುಖ್ಯ ಅತಿಥಿ ಹೊಸಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಯವರು ಮಾತನಾಡಿ ಹಸಿರು ಉಳಿದರೆ ನಮ್ಮೆಲ್ಲರ ಜೀವ ಉಳಿಯುವುದು ಹಣ್ಣಿನ ಗಿಡಗಳನ್ನು ಬೆಳೆಸಿದರೆ ಮನುಷ್ಯ ಮಾತ್ರವಲ್ಲ ಪ್ರಾಣಿ ಪಕ್ಷಿ ಗಳಿಗೂ ಆಹಾರ ಹಾಗೂ ಆಶ್ರಯ ಧಾಮವಾಗಿರುತ್ತದೆ, ಪ್ರತಿಯೊಬ್ಬರು ಶುಭ ಕಾರ್ಯಗಳಿಗೆ ಗಿಡವನ ನಾಟಿ ಮಾಡಬೇಕೆಂದು ಮಾಹಿತಿ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಸದಾನಂದ ಪೂಜಾರಿಯವರು ವಹಿಸಿಕೊಂಡಿದ್ದರು ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷರಾದ ರಮೇಶ್ ಪೂಜಾರಿ,ಗ್ರಾಮ ಸಮಿತಿ ಅಧ್ಯಕ್ಷರು ಶೇಷಪ್ಪ ಪೂಜಾರಿ ಹೊಸಂಗಡಿ ವಲಯ ಮೇಲ್ವಿಚಾರಕರು ಶ್ರೀ ಮತಿ ವೀಣಾ, ಕೃಷಿ ಮೇಲ್ವಿಚಾರಕರು ಕೃಷ್ಣ ಸೇವಾಪ್ರತಿನಿಧಿ ಹರೀಶ್ ಪೂಜಾರಿ ಒಕ್ಕೂಟದ ಪದಾಧಿಕಾರಿಗಳು ಊರಿನ ಗಣ್ಯರು ಹಿರಿಯರು ಪ್ರಗತಿ ಬಂಧು ಸ್ವ ಸಹಾಯ ತಂಡದ ಸದಸ್ಯರು ಉಪಸಿತರಿದ್ದರು