ಉಜಿರೆ : ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕಾಲೇಜು ಕರ್ಣಾಟಕ ಸರಕಾರ ಹಾಗೂ ಶ್ರೀ ರಾಮ ಕೃಷ್ಣ ವಿಧ್ಯಾಶಾಲಾ ಮೈಸೂರ್ ಸಹಯೋಗದೊಂದಿಗೆ ನಡೆದ ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಉಜಿರೆ ತಂಡ ದ್ವಿತೀಯ ಸ್ಥಾನವನ್ನು ಗಳಿಸಿ ಸುಮಿತ್ ಎಂ ಆರ್ ಇವರು ಹರಿಯಾಣದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯದ ತಂಡವನ್ನು ಪ್ರತಿನಿಧಿಸಲಿರುತ್ತಾರೆ.
ಕ್ರಿಸ್ ಅಂಜನ್ ಬ್ಯಾಪ್ಟಿಸ್ಟ್ಪ ಎಸ್ ಡಿ ಎಂ ಪದವಿ ಪೂರ್ವ ಕಾಲೇಜು ಉಜಿರೆ, ಸುಮಿತ್ ಎ ಆರ್ ಎಸ್ ಡಿ ಎಂ ಪದವಿ ಪೂರ್ವ ಕಾಲೇಜು ಉಜಿರೆ, ಅನ್ಸುಲ್ ಸೈಂಟ್ ಅಲೋಶಿಯಸ್ ಪ.ಪೂ ಕಾಲೇಜು ಮಂಗಳೂರು, ಲಿಖಿತ್ ಸೈಂಟ್ ಫಿಲೋಮಿನಾ ಪ.ಪೂ ಕಾಲೇಜು ಪುತ್ತೂರು, ವಾಸುಕಿಅಭಯ ಶರ್ಮ ತುಂಬೆ ಪ.ಪೂ ಕಾಲೇಜು ಬಂಟ್ವಾಳ ತಂಡ, ವ್ಯವಸ್ಥಾಪಕರಾಗಿ ಮೋಹಿನಿ.ಎಸ್ ಡಿ ಎಂ ಉಜಿರೆ
ಹಾಗೂ ನವೀನ್ ಕುಮಾರ್ ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು ಭಾಗವಹಿಸಿದ್ದರು.
ಇವರಿಗೆ ಕಾಲೇಜಿನ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳು ಡಾ| ಸತೀಶ್ಚಂದ್ರ ಎಸ್, ಕಾಲೇಜಿನ ಪ್ರಾಂಶುಪಾಲರು ಪ್ರಮೋದ್ ಕುಮಾರ್, ಕ್ರೀಡಾ ಸಂಘದ ಕಾರ್ಯದರ್ಶಿಗಳು ರಮೇಶ್ ,ದೈಹಿಕ ಶಿಕ್ಷಣ ನಿರ್ದೇಶಕರು ಸಂದೇಶ್ ಪೂಂಜ ಹಾಗೂ ಬೋಧಕ , ಬೋಧಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದರು.