April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರಿನ ವಿದ್ಯೋದಯ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಯಕ್ಷಗಾನ ತಾಳಮದ್ದಳೆ

ವೇಣೂರಿನ ವಿದ್ಯೋದಯ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಅ.19 ರಂದು ಸುದರ್ಶನ ಚಕ್ರಗ್ರಹಣ ಎಂಬ ಯಕ್ಷಗಾನ ತಾಳಮದ್ದಳೆಯನ್ನು ವೇಣೂರಿನ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದ ಸದಸ್ಯರು ನಡೆಸಿಕೊಟ್ಟರು.

ಹಿಮ್ಮೇಳದಲ್ಲಿ ಭಾಗವತರಾಗಿ ಬಲಿಪ ಶಿವಶಂಕರ ಭಟ್, ಚೆಂಡೆ ಮದ್ದಳೆಗಳಲ್ಲಿ ಕೊಂಕಣಾಜೆ ಚಂದ್ರಶೇಖರ ಭಟ್ ಹಾಗೂ ಬೆಳಾಲು ಗಣೇಶ ಭಟ್, ಚಕ್ರತಾಳದಲ್ಲಿ ಇದೇ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿ ಸುಷೇಣರವರು ಸಹಕರಿಸಿದರು. ಶಾಲಾ ವಿದ್ಯಾರ್ಥಿಗಳಾದ ಒಂಬತ್ತನೆಯ ತರಗತಿಯ ರಂಜನಿ ಹಾಗೂ ನಾಲ್ಕನೇ ತರಗತಿಯ ಸುಷೇಣರು ಆಸಕ್ತಿಯಿಂದ ಭಾಗವಹಿಸಿದ್ದು ವಿಶೇಷವಾಗಿತ್ತು.


ಒಂಬತ್ತನೇ ತರಗತಿಯ ಕನ್ನಡ ಪಾಠದಲ್ಲಿ ಇರುವ ಈ ಭಾಗವನ್ನು ನಡೆಸಲು ಶಾಲಾ ಮುಖ್ಯ ಪ್ರಬಂಧಕರಾದ ಕೆ. ಶಿವರಾಮ ಹೆಗ್ಡೆಯವರು ಅವಕಾಶವನ್ನು ನೀಡಿದ್ದು, ಶಾಲಾ  ಸಂಚಾಲಕಿ ಶ್ರೀಮತಿ ಶೀಲಾ ಕೆ. ಎಸ್ ಹೆಗ್ಡೆ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಜಾತ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಭಾಗವತರಾಗಿದ್ದ ದಿ. ಬಲಿಪ ಪ್ರಸಾದ ಭಟ್ ರವರ ಸ್ಮರಣೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕರು ಹಾಗೂ ಊರಿನ ಪ್ರಮುಖರು ನೆರೆದಿದ್ದರು.

Related posts

ಉಜಿರೆ ಎಸ್.ಡಿ.ಎಂ. ಪಾಲಿಟೆಕ್ನಿಕ್ ಕಾಲೇಜು ವಾರ್ಷಿಕೋತ್ಸವ ಸಮಾರಂಭ

Suddi Udaya

ಕೊಲ್ಲಿ : ಬ್ರಹ್ಮಕಲಶ ಸಮಿತಿಯ ಕಚೇರಿ ಉದ್ಘಾಟನೆ

Suddi Udaya

ಬೆಳ್ತಂಗಡಿ: ಕೂಟ ಮಹಾ ಜಗತ್ತು ಮಹಿಳಾ ವೇದಿಕೆಯಿಂದ ಆಟಿ ಕೂಟ ಆಚರಣೆ: ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಮಹನೀಯರಿಗೆ ವಿವಿಧ ಸ್ಪರ್ಧೆಗಳು

Suddi Udaya

ತೆಂಕುಬೈಲು ಪಿಲಿಚಾಮುಂಡಿ ದೈವ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ದೈವಗಳ ಪತ್ತನಾಜೆ ನೇಮೋತ್ಸವ

Suddi Udaya

ಎಸ್‌ಡಿಎಂ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಭಾಟನೆ

Suddi Udaya

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ದ್ವಿತೀಯ ವಾರ್ಷಿಕೋತ್ಸವ

Suddi Udaya
error: Content is protected !!