ಅ. 25: ಬರೆಂಗಾಯದಲ್ಲಿ ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರ

Suddi Udaya

ಅಮೃತ ಮಹೋತ್ಸವ ಸಮಿತಿ – 2024-25 ಬರೆಂಗಾಯ ಶಾಲೆ ಸಿಸರ್ಗ ಯುವಜನೇತರ ಮಂಡಲ (ರಿ), ಬರೆಂಗಾಯ ನಿಡ್ಲೆ, ಇವುಗಳ ಪ್ರಾಯೋಜಕತ್ವದಲ್ಲಿ ಬೆನಕ ಹೆಲ್ತ್ ಸೆಂಟರ್, ಉಜಿರೆ – ಬೆನಕ ಚಾರಿಟೇಬಲ್ ಟ್ರಸ್ಟ್, ಉಜಿರೆ ಕೆ. ಎಂ. ಸಿ. ಆಸ್ಪತ್ರೆ, ಮಂಗಳೂರು – ಲೇಡಿಗೋಶನ್ ಆಸ್ಪತ್ರೆ, ಮಂಗಳೂರು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಸೆಂಟರ್ ಇವುಗಳ ಸಹಭಾಗಿತ್ವದೊಂದಿಗೆ ಉಚಿತ ಆರೋಗ್ಯ ಶಿಬಿರ ಮತ್ತು ಬೃಹತ್ ರಕ್ತದಾನ ಶಿಬಿರವು ಅ. 25 ರಂದು ಬೆಳಿಗ್ಗೆ 10-00ರಿಂದ 1-30ರವರೆಗೆ ಬರೆಂಗಾಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಶಿಬಿರದಲ್ಲಿ ಹೃದ್ರೋಗ ತಜ್ಞರು – ಡಾ| ಪದ್ಮನಾಭ ಕಾಮತ್, MBBS, MD (ಪ್ರಖ್ಯಾತ ಹೃದ್ರೋಗ ತಜ್ಞರು, ಕೆ.ಎಂ.ಸಿ., ಮಂಗಳೂರು) • ಸಾಮಾನ್ಯ ಆರೋಗ್ಯ ಹಾಗೂ ತುರ್ತು ಚಿಕಿತ್ಸಾ ತಜ್ಞರು ಡಾ| ಆದಿತ್ಯ ರಾವ್, MBBS, DNB (ಫಿಸಿಶಿಯನ್) , ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು – ಡಾ| ಅಂಕಿತ ಜಿ. ಭಟ್, MBBS, M.S, DNB, OBG, FMIS, ಎಲುಬು-ಕೀಲು ತಜ್ಞರು – ಡಾ| ರೋಹಿತ್ ಜಿ. ಭಟ್, MBBS, MS (Ortho) • ಮಕ್ಕಳ ತಜ್ಞರು – ಡಾ| ಶಂತನು ಪ್ರಭು, MBBS, DCH ಭಾಗವಹಿಸಲಿದ್ದಾರೆ.

ಶಿಬಿರದ ವಿಶೇಷತೆ : ಉಚಿತ ಇ. ಸಿ. ಜಿ., ರಕ್ತದೊತ್ತಡ, ಮಧುಮೇಹ ತಪಾಸಣೆ ಇರಲಿದೆ.

Leave a Comment

error: Content is protected !!