25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ: 22ನೇ ಯ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಗೆ ಆಹ್ವಾನ

ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್(ರಿ). ಆಶ್ರಯದಲ್ಲಿ “ನಮ್ಮೂರ ಜಾತ್ರೆಗಳು” ಎಂಬ ವಿಷಯದ ಕುರಿತು 22ನೆಯ ರಾಜ್ಯಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಸಂಯೋಜಿಸಲಾಗಿದೆ.

20 x 14 ಸೆಂ.ಮೀ ಗಾತ್ರದ ಡ್ರಾಯಿಂಗ್ ಶೀಟ್, ಸ್ಪರ್ಧಾ ಕಾರ್ಡ್ ಅಥವಾ ಅಂಚೆ ಕಾರ್ಡ್ ಮೂಲಕ ಚಿತ್ರ ಬಿಡಿಸಬಹುದು. ಸ್ಪರ್ಧೆಯು ಕರ್ನಾಟಕದವರಿಗೆ ಮಾತ್ರ ಅನ್ವಯಿಸುತ್ತದೆ. ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಪ್ರಾಥಮಿಕ ಶಾಲಾ ವಿಭಾಗ, ಪ್ರೌಢ ಶಾಲಾ ವಿಭಾಗ, ಕಾಲೇಜು ವಿಭಾಗ ಹಾಗೂ ಸಾರ್ವಜನಿಕ ವಿಭಾಗ ಹೀಗೆ ನಾಲ್ಕು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ, ಗೌರವಿಸಲಾಗುವುದು.

ಪೆನ್ಸಿಲ್, ಜಲವರ್ಣ, ತೈಲವರ್ಣ ಅಥವಾ ಇಂಡಿಯನ್ ಇಂಕ್ ಹಾಗೂ ವಿವಿಧ ರೀತಿಯಿಂದ ಚಿತ್ರಗಳನ್ನು ರಚಿಸಬಹುದಾಗಿದೆ. ಒಬ್ಬರು ಎಷ್ಟು ಚಿತ್ರಗಳನ್ನು ಬೇಕಾದರೂ ಕಳುಹಿಸಬಹುದು. ವಿದ್ಯಾರ್ಥಿಗಳಾಗಿದ್ದಲ್ಲಿ ತಮ್ಮ ಮನೆ ವಿಳಾಸ (ದೂರವಾಣಿ ಸಂಖ್ಯೆ ಸಹಿತ) ವಿದ್ಯಾಲಯದ ಮುದ್ರೆ ಹಾಗೂ ಶಾಲಾ ಕಾಲೇಜಿನ ಮುಖ್ಯಸ್ಥರ ಸಹಿಯೊಂದಿಗೆ ದೃಢೀಕರಿಸಿ ಕಳುಹಿಸಬೇಕು. ಶಾಲಾ ಮುಖ್ಯಸ್ಥರ ಸಹಿಯಿಲ್ಲದಿದ್ದಲ್ಲಿ ಅಂತಹ ಚಿತ್ರಗಳನ್ನು ಸಾರ್ವಜನಿಕ ವಿಭಾಗ ಎಂದು ಪರಿಗಣಿಸಲಾಗುವುದು. ಸಾರ್ವಜನಿಕ ವಿಭಾಗದವರು ಕೇವಲ ಸಾರ್ವಜನಿಕ ವಿಭಾಗ ಎಂದು ಬರೆದು ಸ್ಪರ್ಧಿಯ ಪೂರ್ಣ ವಿಳಾಸ (ದೂರವಾಣಿ ಸಂಖ್ಯೆ ಸಹಿತ) ಕಳುಹಿಸಬೇಕು.

ಸ್ಪರ್ಧಿಗಳು ಚಿತ್ರಗಳನ್ನು ತಮ್ಮ ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯೊಂದಿಗೆ 31-03-2025ರ ಒಳಗಾಗಿ ನಿರ್ದೇಶಕರು, ಅಂಚೆ-ಕುಂಚ ವಿಭಾಗ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್‌(ರಿ). ಶ್ರೀ ಕ್ಷೇತ್ರ ಧರ್ಮಸ್ಥಳ- 574216, ಬೆಳ್ತಂಗಡಿ ತಾಲೂಕು, ದ.ಕ. ಜಿಲ್ಲೆ ಈ ವಿಳಾಸಕ್ಕೆ ಕಳುಹಿಸಬೇಕೆಂದು ಯೋಜನೆಯ ನಿರ್ದೇಶಕರಾದ ಡಾ. ಐ. ಶಶಿಕಾಂತ್ ಜೈನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ರಾಷ್ಟ್ರಮಟ್ಟದ ಅಬಕಾಸ್ ಚಾಂಪಿಯನ್ ಶಿಪ್ ಸ್ಪರ್ಧೆ: ಅರ್ಹನ್ ಬೈಗ್ ಮತ್ತು ಅರ್ಮನ್ ಬೈಗ್ ದ್ವಿತೀಯ ಚಾಂಪಿಯನ್

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಭೇಟಿ

Suddi Udaya

ಗರ್ಡಾಡಿ ಸೌಭಾಗ್ಯ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

Suddi Udaya

ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾಟ: ಶೊರೀನ್ ರಿಯೂ ಉಜಿರೆ ಹಾಗೂ ಬೆಳ್ತಂಗಡಿ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ಪುತ್ತಿಲ ಹೇರಾಜೆ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಯಿಂದ ಮದೂರು ಶ್ರೀ ಮದನಂತೇಶ್ವರ ದೇವಸ್ಥಾನದಲ್ಲಿ ಭಜನಾ ಸೇವೆ

Suddi Udaya

ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಕೈ ಮತ್ತು ಮೈಕ್ರೊಸರ್ಜರಿ ಸೇವೆಗೆ ಚಾಲನೆ

Suddi Udaya
error: Content is protected !!