April 6, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಹಪ್ಪಳ ಸಂಡಿಗೆ, ಉಪ್ಪಿನ ಕಾಯಿ ಮತ್ತು ಮಸಾಲ ಪೌಡರ್ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ : ಆಹಾರ ತಯಾರಿಸುವಾಗ ಯಾವ ರೀತಿಯ ಸುವಾಸನೆಯನ್ನು ಸೂಸುವಂತೆ ನಿಮ್ಮ ಮುಂದಿನ ಸ್ವ ಉದ್ಯೋಗ ಸಹ ಸುತ್ತಮುತ್ತಲಿನ ಪರಿಸರದ ಯುವಜನರಿಗೆ ಉದ್ಯೋಗ ನೀಡುವುದರ ಮೂಲಕ ಸುವಾಸನೆ ನೀಡುವಂತೆ ಆಗಲಿ, ವ್ಯವಹಾರದಲ್ಲಿ ಲಾಭ-ನಷ್ಟವನ್ನು ಸಮಾನವಾಗಿ ಸ್ವೀಕರಿಸಬೇಕು. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುವ ರುಡ್ ಸೆಟ್ ಸಂಸ್ಥೆಯಲ್ಲಿ ಜೀವನದ‌ ಪಾಠವನ್ನು ಕಲಿಸಿ ಕೊಡುತ್ತದೆ. ಇದು ಯಾವುದೇ ಕಾಲೇಜಿನ ವಿದ್ಯಾಭ್ಯಾಸದಲ್ಲಿ ಸಿಗುವುದಿಲ್ಲ. ಪೂಜ್ಯ‌ರ ಮಾತಿನಂತೆ ಮೂರರಿಂದ ಐದು ವರ್ಷ ಕಾಲೇಜು ವ್ಯಾಸಂಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು‌ ಸ್ವ ಉದ್ಯೋಗ ಆರಂಭಿಸಿ ನಮ್ಮ ಲೆಕ್ಕ ನಾವು ಬರೆಯುವುದು ಹೆಚ್ಚು ಅರ್ಥಪೂರ್ಣ ಎನ್ನುವ ಹಾಗೇ ನೀವೇಲ್ಲ ನಿಮ್ಮ ಲೆಕ್ಕ ನೀವೇ ಬರೆಯುವ ದಾರಿಯಲ್ಲಿ ನಡೆಯವುದಕ್ಕೆ ತಯಾರಾಗಿದ್ದೀರಿ ನಿಮಗೆಲ್ಲ ಯಶಸ್ಸು ಆಗಲಿ ಎಂದು ಉಜಿರೆ ದಿಶಾ ಸಮೂಹ ಸಂಸ್ಥೆಗಳ ಮಾಲಕರಾದ ರೋಟರಿಯನ್ ಅರುಣ ಕುಮಾರ್ ಅಭಿಪ್ರಾಯಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 10ದಿನಗಳ ಕಾಲ ನಡದೆ ಹಪ್ಪಳ ಸಂಡಿಗೆ, ಉಪ್ಪಿನ ಕಾಯಿ ಮತ್ತು ಮಸಾಲ ಪೌಡರ್ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಅವರು ವಹಿಸಿ, ಮಾತನಾಡಿದರು ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಕೌಶಲ್ಯ ತರಬೇತಿ‌ ನೀಡಿದ ಶ್ರೀಮತಿ‌ ಲತಾ ಮೈಸೂರು, ಉಪಸ್ಥಿತರಿದ್ದರು

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು.

ಶ್ರೀಮತಿ ಅನುಶ್ರೀ ಮತ್ತು ಶ್ರೀಮತಿ ಮಮತಾ ಪ್ರಾರ್ಥನೆ ಮಾಡಿದರು. ಶ್ರೀಮತಿ ಶಾಂತ, ಸುರೇಶ್, ಫೈಜ್‌ಲ್ ಭಾಷ, ಶ್ರೀಮತಿ ರಮ್ಮಿತಾ ತರಬೇತಿಯ ಅನುಭವ ಹಂಚಿಕೊಂಡರು.

Related posts

ಇಳಂತಿಲ : ಸಂವಿಧಾನ ಜಾಗೃತಿ ಜಾಥಾ

Suddi Udaya

ಕೊಕ್ಕಡದ ಅಂಗಡಿಯಿಂದ ರೂ.2 ಲಕ್ಷ ಹಣ ಕಳ್ಳತನ ಪ್ರಕರಣ: ಆರೋಪಿಗಳಿಬ್ಬರ ಬಂಧನ

Suddi Udaya

ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ತರಬೇತಿ

Suddi Udaya

ಕಿಲ್ಲೂರು ಮಾರಿಗುಡಿ ಯುವ ಕೇಸರಿ ಗೆಳೆಯರ ಬಳಗ ಆಶ್ರಯದಲ್ಲಿ ಹೊನಲು ಬೆಳಕಿನ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಹಾಗೂ ವಲಯ ಮಟ್ಟದ ಬಾಲಕಿಯರ ಮ್ಯಾಟ್‌ ಕಬಡ್ಡಿ ಪಂದ್ಯಾಟ

Suddi Udaya

ವಾಲಿಬಾಲ್ ಪಂದ್ಯಾಟ: ಬಂದಾರು ಪ್ರಾಥಮಿಕ ಶಾಲಾ ಬಾಲಕಿಯರ ತಂಡ ಪ್ರಥಮ

Suddi Udaya

ಸಿಬಿಎಸ್ಸಿ ಎಸ್.ಎಸ್.ಎಲ್.ಸಿ ಫಲಿತಾಂಶ: ಶ್ರೀ ವಿದ್ಯಾಸಾಗರ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya
error: Content is protected !!