23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರಿಗೆ ಯುಎಇ 10 ವರ್ಷದ ಗೋಲ್ಡನ್ ವೀಸಾ

ಬೆಳ್ತಂಗಡಿ; ಹಿರಿಯ ಸಾಮಾಜಿಕ ಜನಪರ ಸಂಘಟನೆಯಾದ ಜಮೀಯುಲ್ ಫಲಾಹ್ ಇದರ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಹಾಲಿ ಗೌರವಾಧ್ಯಕ್ಷ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಕೊಲ್ಪೆದಬೈಲು ಅವರಿಗೆ ಯುಎಇ ಸರ್ಕಾರವು 10 ವರ್ಷಗಳ ಗೋಲ್ಡನ್ ವೀಸಾ ನೀಡಿ ಗೌರವ ತೋರಿದೆ.

ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರು ಅತ್ಯುತ್ತಮ ಸಂಘಟಕರಾಗಿ, ಕೊಡುಗೈ ದಾನಿಯಾಗಿ ಹಲವು ಸಾಮಾಜಿಕ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮುಖ್ಯವಾಗಿ ಶಿಕ್ಷಣ, ಮಕ್ಕಳ ಕಲ್ಯಾಣ ಹಾಗೂ ಮುಸ್ಲಿಂ ಸಮುದಾಯದ ಅಭಿವೃದ್ಧಿ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ನೀಡಿದ್ದಾರೆ.
ಅವರ ಈ ಸಾಧನೆ ಹಾಗೂ ಸೇವಾ ಕಾರ್ಯಗಳನ್ನು ಗುರುತಿಸಿ ಯುಎಇ ಸರಕಾರ ಅವರಿಗೆ ಈ ಮಾನ್ಯತೆ ನೀಡಿ ಪುರಸ್ಕರಿಸಿದೆ.

ಈ ಗೌರವಾನ್ವಿತ ಗೋಲ್ಡನ್ ವೀಸಾವನ್ನು ಪ್ರಮುಖ ಹೂಡಿಕೆದಾರರು, ಶ್ರೇಷ್ಠ ಉದ್ಯಮಿಗಳು, ಪರಿಣತ ವೃತ್ತಿಪರರು, ವಿಜ್ಞಾನಿಗಳು, ಸಂಶೋಧಕರು ಮತ್ತು ಮಾನವೀಯ ಕಾರ್ಯಗಳಿಗೆ ತೊಡಗಿರುವವರನ್ನು ಅರ್ಹತೆಯ ಮೇಲೆ ಆಯ್ಕೆ ಮಾಡಲಾಗುತ್ತದೆ.
ಯುಎಇ ನಲ್ಲಿ ಸುಧೀರ್ಘ ವಾಸದ ಸೌಲಭ್ಯಗಳನ್ನೂ ಒಳಗೊಂಡ ಈ ವೀಸಾವನ್ನು ನಿರ್ದಿಷ್ಟ ಅರ್ಹತೆಯ ವ್ಯಕ್ತಿಗಳು ಮಾತ್ರ ಪಡೆದುಕೊಳ್ಳುವ ವಿಶಿಷ್ಟ ಗೌರವವೆಂದು ಪರಿಗಣಿಸಲಾಗಿದೆ.

Related posts

ಬಳಂಜ, ನಿಟ್ಟಡ್ಕ ಶಾಲೆಯಲ್ಲಿ ಬಿರುಸಿನ ಮತದಾನ

Suddi Udaya

ಶ್ರೀ ಧ. ಮಂ.  ಆಂಗ್ಲ ಮಾಧ್ಯಮ  ಶಾಲೆಯಲ್ಲಿ  ಆಂಗ್ಲಭಾಷಾ ಶಿಕ್ಷಕರ  ಕಾರ್ಯಾಗಾರ

Suddi Udaya

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನವೀಕೃತ ಮಡಂತ್ಯಾರು ಶಾಖೆಯ ಉದ್ಘಾಟನೆ

Suddi Udaya

ಉಜಿರೆ ಗ್ರಾ.ಪಂ. ಅಮೃತ ಸಭಾಂಗಣ ಉದ್ಘಾಟನೆ

Suddi Udaya

ಶ್ಲೋಕ ಕಂಠಪಾಠ : ಉರುವಾಲು ಶ್ರೀ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ರಿಷಿಕ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ನಾರ್ಮ್ ರೌಂಡರ್ ರಾಬಿನ್ ಪಂದ್ಯಾವಳಿಯಲ್ಲಿ ಬೆಳ್ತಂಗಡಿಯ ಇಶಾ ಶರ್ಮಾ ರವರಿಗೆ ರಾಜ್ಯದ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಬಿರುದು

Suddi Udaya
error: Content is protected !!