23.7 C
ಪುತ್ತೂರು, ಬೆಳ್ತಂಗಡಿ
May 19, 2025
Uncategorized

ಅಂಡಿಂಜೆ ಪಾಂಡೀಲು ಹೊಸಮನೆ ಎಂಬಲ್ಲಿ ಮನೆಯ ಬೀಗವನ್ನು ಒಡೆದು ಒಳಗಿದ್ದ ಕಳ್ಳರು: ನಗ-ನಗದು ಸೇರಿದಂತೆ ‌ರೂ. 80 ಸಾವಿರ ಮೌಲ್ಯದ ಸೊತ್ತುಗಳ ಕಳವು

ಬೆಳ್ತಂಗಡಿ : ಅಂಡಿಂಜೆ ಗ್ರಾಮದ ಪಾಂಡೀಲು ಹೊಸಮನೆ ಎಂಬಲ್ಲಿ ರಾತ್ರಿ ಸಮಯ ಮನೆಯೊಂದರ‌ ಬೀಗವನ್ನು ಒಡೆದು
ನುಗ್ಗಿದ ಕಳ್ಳರು ನಗ-ನಗದು ಸೇರಿದಂತೆ ‌ರೂ. 80 ಸಾವಿರ ಮೌಲ್ಯದ ಸೊತ್ತುಗಳನ್ನು ಕಳವುಗೈದ ಘಟನೆ ಅ.28 ರಂದು ವರದಿಯಾಗಿದೆ.
ಅಂಡಿಂಜೆ ಗ್ರಾಮದ ಪಾಂಡೀಲು ಹೊಸ ಮನೆ. ಶ್ರೀಮತಿ ಸುಜಾತ ರಾಘವ ಪುತ್ರನ್ ಅವರ ಮನೆಯಿಂದ ಈ ಕಳ್ಳತನ ನಡೆಸಲಾಗಿದೆ.
ಅ. 27 ರಂದು ಸಂಜೆಯಿಂದ ಅ. 28ರ ಮದ್ಯಾಹ್ನ 12:15 ಗಂಟೆಯ ಮಧ್ಯೆ ಈ ಕಳ್ಳತನ ನಡೆಸಲಾಗಿದೆ.
ಶ್ರೀಮತಿ ಸುಜಾತ ಅವರು
ಮನೆಯ ಬಾಗಿಲಿಗೆ ಬೀಗ ಹಾಕಿ ತನ್ನ ತವರು ಮನೆಯಾದ ಅಳಿಯೂರು ಎಂಬಲ್ಲಿಗೆ ಹೋದ ಸಮಯ ಯಾರೋ ಕಳ್ಳರು ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳಪ್ರವೇಶಿಸಿ ಮನೆಯ ಗೋದ್ರೇಜ್‌ ಕಪಾಟಿನಲ್ಲಿದ್ದ ನಗದು ಹಣ ರೂ. 25,000/- ಹಾಗೂ 5 ಗ್ರಾಂ ತೂಕದ ಬೆಂಡೋಲೆ ಒಂದು ಜೊತೆ ಹಾಗೂ 4 ಗ್ರಾಂ ತೂಕದ ಚಿನ್ನದ ಉಂಗುರ ಒಂದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ . ಕಳುವಾದ ಸೊತ್ತುಗಳು, ನಗದು ಸೇರಿ ಒಟ್ಟು ಅಂದಾಜು ಮೌಲ್ಯ 80,000/ ರೂ ಆಗಬಹುದೆಂದು ಅಂದಾಜಿಸಲಾಗಿದೆ.‌ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸೂಪರ್ ಕ್ಯಾರಿ ಟರ್ಬೋ ವಾಹನ ದಲ್ಲಿ ಹಿಂಸಾತ್ಮಕವಾಗಿ 3 ಜಾನುವಾರುಗಳ ಅಕ್ರಮ ಸಾಗಾಟ: ವಾಹನ ಸಹಿತ ಇಬ್ಬರ ಬಂಧನ

Suddi Udaya

ಮದ್ದಡ್ಕ ಲ್ಯಾನ್ಸಿ ರೋಡ್ರಿಗಸ್ ನಿಧನ

Suddi Udaya

ಕುರಾಯ ಶ್ರೀ ಸದಾಶಿವ ದೇವಸ್ಥಾನ ಪ್ರತಿಷ್ಠಾ ಮಹೋತ್ಸವ – ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಪಡ್ಡಂದಡ್ಕ ಮದರಸದಲ್ಲಿ ಗಣರಾಜ್ಯೋತ್ಸವ

Suddi Udaya

ಕೊಯ್ಯೂರು ಗ್ರಾ.ಪಂ. ನ ಗ್ರಾಮ ಸಭೆ

Suddi Udaya

ಧರ್ಮಸ್ಥಳ ಕನ್ಯಾಡಿಯಲ್ಲಿ ಸಿಡಿಲು ಬಡಿದು ದನ ಸಾವು

Suddi Udaya
error: Content is protected !!