ವೇಣೂರು : ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ನಿಟ್ಟಡೆ ವೇಣೂರು ಇಲ್ಲಿನ ಶಿಕ್ಷಕ – ರಕ್ಷಕ ಸಂಘದ ಮತ್ತು ಕುಂಭಶ್ರೀ ವೈಭವ ಸಮಿತಿಯ ಪೂರ್ವಭಾವಿ ಸಭೆಯು ಅ.26 ರಂದು ನಡೆಯಿತು.
ಸಭೆಯಲ್ಲಿ ಕುಂಭಶ್ರೀ ವೈಭವ ಕಾರ್ಯಕ್ರಮ ಡಿಸೆಂಬರ್ 18 ರಂದು ನಡೆಯುದಾಗಿ ತೀರ್ಮಾನಿಸಲಾಯಿತು. ಕುಂಭಶ್ರೀ ಹಳೆ ವಿದ್ಯಾರ್ಥಿಗಳ ಒಗ್ಗೂಡುವಿಕೆ ಗೋಸ್ಕರ ನವೆಂಬರ್ 3 ರಂದು (ಸಮಯ 9.30 ರಿಂದ 11)ಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮವನ್ನು ಮಾಡುವುದೆಂದು ನಿರ್ಧರಿಸಲಾಯಿತು. ಸಭೆಯಲ್ಲಿ ಕುಂಭಶ್ರೀ ಶಾಲೆಯು ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯುತ್ತಮ ಶಾಲೆ ಎಂದು ಗುರುತಿಸಿ ರಾಜ್ಯ ಪ್ರಶಸ್ತಿಯಾದ ಶಿಕ್ಷಣ ಬೀಷ್ಮ 2024 ಪ್ರಶಸ್ತಿಯನ್ನು ಪಡೆದುಕೊಂಡ ಕುಂಭಶ್ರೀ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಗಿರೀಶ್ ಕೆ ಹೆಚ್ ರವರನ್ನು ಅಭಿನಂದಿಸಲಾಯಿತು.
ಸಭೆಯಲ್ಲಿ ಕುಂಭಶ್ರೀ ವೈಭವ ಸಮಿತಿಯನ್ನು ರಚಿಸಿ, ಈ ಸಮಿತಿಯ ಗೌರವ ಅಧ್ಯಕ್ಷರಾಗಿ ಹರೀಶ್ ಕುಮಾರ್ ಪೊಕ್ಕಿ, ಅಧ್ಯಕ್ಷರಾಗಿ ಅಶ್ವಿತ್ ಕುಲಾಲ್, ಕೋಶಾಧಿಕಾರಿಯಾಗಿ ಗಣೇಶ್ ಕುಂದರ್ ಮತ್ತು ಉಪಾಧ್ಯಕ್ಷರು, ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದಂತಹ ಕುಂಭಶ್ರೀ ಸಂಸ್ಥೆಯ ಸಂಸ್ಥಾಪಕರಾದ ಗಿರೀಶ್ ಕೆ ಹೆಚ್ ರವರು ಶಿಕ್ಷಣಭೀಷ್ಮ ರಾಜ್ಯ ಪ್ರಶಸ್ತಿಯನ್ನು ಪಡೆದ ಸಂತಸದ ವಿಷಯವನ್ನು ವ್ಯಕ್ತಪಡಿಸಿದರು. ಶಾಲಾ ಸಂಚಾಲಕರಾದ ಅಶ್ವಿತ್ ಕುಲಾಲ್ ಶಾಲಾ ಚಟುವಟಿಕೆ ಮತ್ತು ಕುಂಭಶ್ರೀ ವೈಭವದ ಬಗ್ಗೆ ಸಂಕ್ಷಿಪ್ತ ವಿವರ ನೀಡಿದರು. ಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ವಸಂತ್ ಈ ಶಾಲೆಯಲ್ಲಿ ಎರಡು ವರ್ಷಕ್ಕೊಮ್ಮೆ ಕುಂಭಶ್ರೀ ವೈಭವ ಎಂಬ ಮಹತ್ತರವಾದ ಕಾರ್ಯಕ್ರಮ ನಡೆಯುತ್ತಾ ಬಂದಿದ್ದು ಈ ವರ್ಷ ಕೂಡ ಕುಂಭಶ್ರೀ ವೈಭವ ಅದ್ದೂರಿಯಾಗಿ ನಡೆಯಬೇಕೆಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಪವಿತ್ರ ಹಾಗೂ ಪ್ರಾಥಮಿಕ ಶಾಲಾ ಉಪಮುಖ್ಯ ಶಿಕ್ಷಕಿ ಶುಭ , ಶ್ವೇತಾ ಹಾಗೂ ಎಲ್ಲಾ ಶಿಕ್ಷಕ ವೃಂದದವರು , ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೌಢಶಾಲಾ ವಿಭಾಗದ ಉಪಮುಖ್ಯ ಶಿಕ್ಷಕಿ ಮಮತಾಶಾಂತಿ ಸ್ವಾಗತಿಸಿ, ಪ್ರಾಥಮಿಕ ಶಾಲಾ ಶಿಕ್ಷಕಿ ಸುಜಾತ ಮತ್ತು ಪ್ರೌಢಶಾಲಾ ಶಿಕ್ಷಕಿ ಅಕ್ಷತಾ ನಿರೂಪಿಸಿ, ಕಾಲೇಜಿನ ಉಪನ್ಯಾಸಕಿ ಸ್ವರ್ಣ ಲತಾ ವಂದಿಸಿದರು.