ಬೆಳ್ತಂಗಡಿ: ರಾಷ್ಟ್ರೀಯ ಅಧ್ಯಕ್ಷ ಚಿತ್ರಕುಮಾರ್ , ರಾಷ್ಟ್ರೀಯ ಉಪಾಧ್ಯಕ್ಷ ಕಿಶೋರ್ ಫೆರ್ನಾಂಡಿಸ್, ರಾಷ್ಟ್ರೀಯ ನಿರ್ದೇಶಕರಾದ ನವೀನ್ ಅಮೀನ್ , ಸುಕುಮಾರ್ ಹಾಗೂ ಡಾ. ಪ್ರಮೋದ್ ಆರ್ ನಾಯಕ್ ರವರು ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರಿಗೆ ಭೇಟಿ ನೀಡಿದರು.
ನಂತರ ಉದಯನಗರದ ಆಶ್ರಮಕ್ಕೆ ಭೇಟಿ, ದಿನಸಿಗಳ ಹಸ್ತಾಂತರಿಸಲಾಯಿತು.
ಸನ್ ರಾಕ್ ಬಲಿಪ ರೆಸಾರ್ಟ್’ನಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ “ರಾಷ್ಟ್ರೀಯ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಹಸ್ತಾಂತರ ಕಾರ್ಯಕ್ರಮದಲ್ಲಿ ವಿಶ್ವನಾಥ್ ಶೆಟ್ಟಿ ದಂಪತಿಯ ಮದುವೆಯ ಬೆಳ್ಳಿಹಬ್ಬದ ಸವಿನೆನಪಿಗಾಗಿ ಉಡುಗೊರೆಯಾಗಿ ಸಾನಿಧ್ಯ ಎಂಡೋಸಲ್ಫಾನ್ ಕೇಂದ್ರದ ಕು. ಪೂಜಾ ಪದ್ಮನಾಭರಿಗೆ ವೀಲ್ ಚೇರ್ ಹಸ್ತಾoತರಿಸಿದರು. ನಿಕಟಪೂರ್ವಧ್ಯಕ್ಷರಾದ ದಿ. ಪ್ರಥ್ವಿರಂಜನ್ ರಾವ್ ಇವರ ಸವಿನೆನಪಿಗಾಗಿ ಅವರ ಪತ್ನಿ ಶ್ರೀಮತಿ ಉಮಾ ಆರ್ ರಾವ್ ಹಾಗೂ ಮಕ್ಕಳು ಸೇರಿ ಹೊಲಿಗೆ ಯಂತ್ರವನ್ನು ಶ್ರೀಮತಿ ದಿವ್ಯಾ ಎನ್, ಮಿತ್ತಬಾಗಿಲು ಇವರಿಗೆ ಹಸ್ತಾoತರಿಸಿದರು. ಅಧ್ಯಕ್ಷ ವಾಲ್ಟರ್ ಸಿಕ್ವೇರಾ ಹಾಗೂ ವಿಲ್ಸನ್ ಗೊನ್ಸಾಲ್ವಿಸ್ ಇವರು ಜಾಲಾಧರ ಯೋಜನೆಯಾಗಿ ವಾಟರ್ ಪ್ಯೂರಿಫೈರ್ ಇದನ್ನು ಚಂದ್ಕೂರು ಅಂಗನವಾಡಿ ಕೇಂದ್ರ, ಕುತ್ರೊಟ್ಟು ಇವರಿಗೆ ಹಸ್ತಾoತರಿಸಲಾಯಿತು.
ಫೌಂಡೇಶನ್ ಇದಕ್ಕೆ ಚಂದ್ರಹಾಸ ಕೇದೆ ಹಾಗೂ ದಯಾನಂದ (ನಿವ್ರತ್ತ ಸೈನಿಕರು) ನೀಡಿದರು.
ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಚುನಾಯಿತರಾದ ಜಯಾನಂದ ಗೌಡ, ಛೇoಬರಿನ ಹಿರಿಯ ಸಕ್ರಿಯ ಸದಸ್ಯರಾದ ಲ್ಯಾನ್ಸಿ ಪಿರೇರಾ, ಅಂತಾರಾಷ್ಟ್ರೀಯ ಕ್ರೀಡಾಪಾಟುಗಳಾದ ಡೆಫ್ನಿ ವೆರೋನಿಕಾ ಮಿಸ್ಕ್ವಿತ್ ಹಾಗೂ ಫ್ಲಾಯ್ಡ್ ಮಿಸ್ಕ್ವಿತ್ ಹಾಗೂ ಅತ್ಯುತ್ತಮ ಶಿಕ್ಷಕ ವಿ. ಕೆ. ವಿಟ್ಲ ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಅರವಿಂದ ರಾವ್ ಕೇದಿಗೆ, ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷ ವಾಲ್ಟರ್ ಸಿಕ್ವೇರ್ ಸ್ವಾಗತಿಸಿ, ಕಾರ್ಯದರ್ಶಿ ಜಾನ್ ಅರ್ವಿನ್ ಡಿಸೋಜಾ ಧನ್ಯವಾದವಿತ್ತರು. ಊರ ಹಾಗೂ ಪರಊರಿನ ಗಣ್ಯರು ಹಾಜರಿದ್ದರು.
ಭೋಜನದ ವ್ಯವಸ್ಥೆಯನ್ನು ಡಾ. ಪ್ರಮೋದ್ ಆರ್ ನಾಯಕ್, ಪೋಫ್ ಪುಷ್ಪರಾಜ ಶೆಟ್ಟಿ, ಬಾನುಪ್ರಸನ್ನ ಹಾಗೂ ಪ್ರಶಾಂತ್ ಕುಮಾರ್ ನೀಡಿದರು.
ಕಾರ್ಯಕ್ರಮದ ಸಂಯೋಜಕರಾದ ಲ್ಯಾನ್ಸಿ ಪಿರೇರಾ ಹಾಗೂ ಬಾನುಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.