April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬರೆಂಗಾಯದಲ್ಲಿ ಅಡಿಕೆ ಮತ್ತು ಕಾಳುಮೆಣಸು ಖರೀದಿ ಉಪಕೇಂದ್ರ ಆರಂಭ

ಬೆಳ್ತಂಗಡಿ: ದಿ ಕ್ಯಾಂಪ್ಕೋ ಲಿ.ಮಂಗಳೂರು ಬೆಳ್ತಂಗಡಿ ಶಾಖೆ ಇದರ ಅಡಿಕೆ ಮತ್ತು ಕಾಳುಮೆಣಸು ಖರೀದಿಯ ಉಪಕೇಂದ್ರವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಡ್ಲೆ ಇದರ ಬರೆಂಗಾಯದಲ್ಲಿ ಅ.29 ರಂದು ಆರಂಭಿಸಲಾಯಿತು.

ಖರೀದಿ ಕೇಂದ್ರವನ್ನು ಕ್ಯಾಂಪ್ಕೋ ಮಂಗಳೂರು ಇದರ ಮಾರುಕಟ್ಟೆ ವಿಭಾಗದ ಡಿಜಿಎಂ ಗೋವಿಂದ ಭಟ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕ್ಯಾಂಪ್ಕೋ ಬೈಕಂಪಾಡಿ ವಲಯದ ಮುಖ್ಯ ಮಾರುಕಟ್ಟೆ ಅಧಿಕಾರಿ ಗಿರೀಶ್ ಇ. ನಿಡ್ಲೆ ಪ್ಯಾಕ್ಸ್ ನ ಅಧ್ಯಕ್ಷ ರಮೇಶ್ ರಾವ್, ಬೆಳ್ತಂಗಡಿ ಕ್ಯಾಂಪ್ಕೋ ಪ್ರಬಂಧಕರಾದ ಕೃಷ್ಣ ಕೆ.ಎಸ್ ಉಪಸ್ಥಿತರಿದ್ದರು. ಕ್ಯಾಂಪ್ಕೋ ಸದಸ್ಯ ಬೆಳೆಗಾರರು. ಕ್ಯಾಂಪ್ಕೋ ಮತ್ತು ನಿಡ್ಲೆ ಪ್ಯಾಕ್ಸ್ ನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತೀ ಮಂಗಳವಾರದಂದು ಇಲ್ಲಿ ಅಡಿಕೆ ಮತ್ತು ಕಾಳು ಮೆಣಸನ್ನು ಖರೀದಿಸಲಾಗುವುದು ಮತ್ತು ಇದರ ಪ್ರಯೋಜನವನ್ನು ಎಲ್ಲಾ ಬೆಳೆಗಾರರು ಪಡೆದುಕೊಳ್ಳಬೇಕೆಂದು ಕ್ಯಾಂಪ್ಕೋದ ಪ್ರಕಟಣೆಯಲ್ಲಿ ಕೋರಲಾಗಿದೆ

Related posts

ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರತಿಷ್ಠಾ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಕನಕದಾಸ ಜಯಂತಿ ಆಚರಣೆ

Suddi Udaya

ಅಟ್ಲಾಜೆ ದ.ಕ.ಜಿ.ಪ.ಕಿ.ಪ್ರಾ ಶಾಲೆಯಲ್ಲಿ ಅ೦ತರಾಷ್ಟ್ರೀಯ ಯೋಗ ದಿನಾಚರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ

Suddi Udaya

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆ

Suddi Udaya

ಬಿ.ಸಿ. ರೋಡ್ ನಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್: ಬೆಳ್ತಂಗಡಿಯ ಇಬ್ಬರು ವಿದ್ಯಾರ್ಥಿಗಳಿಗೆ ಗಾಯ

Suddi Udaya
error: Content is protected !!