ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ನ್ಯಾಯತರ್ಪು ಗ್ರಾಮದ ರಕ್ತೇಶ್ವರಿಪದವು ಅಂಗನವಾಡಿ ಕಾರ್ಯಕರ್ತೆ ನಿವೃತ್ತ ಶ್ರೀಮತಿ ನಾಗವೇಣಿ ಕೆ.ಎಸ್.ಅವರಿಗೆ ಸ್ಥಳೀಯ ವಿವಿಧ ಸಂಘ,ಸಂಸ್ಥೆಗಳ ವತಿಯಿಂದ ಬೀಳ್ಕೋಡುಗೆ ಸಮಾರಂಭ ಅ.30.ರಂದು ರಕ್ತೇಶ್ವರಿಪದವು ನೇತಾಜಿ ರಂಗಮಂದಿರದಲ್ಲಿ ನಡೆಯಿತು.

ಗರಿಷ್ಠ ದುಡಿಮೆ, ಕನಿಷ್ಠ ವೇತನಕ್ಕೆ ಸರಕಾರದ ಎಲ್ಲಾ ಕಚೇರಿಯ ಕೆಲಸ ಮತ್ತು ಮನೆ ಭೇಟಿ, ಪ್ರಾಮಾಣಿಕವಾಗಿ ದಿನದ 8 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಿ ಸಮಾಜ ಸೇವೆ ಮಾಡುತ್ತಾರೆ. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯವರಿಗೆ ನಿವೃತ್ತಿ ಹೊಂದಿದ ನಂತರ ಪಿಂಚಣಿ ಇಲ್ಲದೆ ಸಾರ್ಥಕ ಬದುಕು ನಡೆಸಲು ತುಂಬಾ ಕಷ್ಟವಾಗುತ್ತದೆ. ಸರಕಾರ ವೇತನವನ್ನು ಹೆಚ್ಚಿಸುವ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಭುವನೇಶ್ ಗೇರುಕಟ್ಟೆ ಹೇಳಿದರು.
ನಮ್ಮ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ಇಲಾಖೆಯ ಅಡಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತದೆ ಅದುದರಿಂದ ನಾಗವೇಣಿ ಅವರಿಗೆ ಜಿಲ್ಲಾ ಪ್ರಶಸ್ತಿ ಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುಮನ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಗನವಾಡಿ ಕೇಂದ್ರ ರಕ್ತೇಶ್ವರಿಪದವು ಇಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ 29 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ಜಿಲ್ಲಾ ಪ್ರಶಸ್ತಿ ಪಡೆದ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆಯಾದ ನಿವೃತ್ತ ಶ್ರೀಮತಿ ನಾಗವೇಣಿ ಕೆ.ಎಸ್.ರವರಿಗೆ ಬೀಳ್ಕೋಡುಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ತೇಶ್ವರಿಪದವು ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ರಮೇಶ್ ವಿ. ವಹಿಸಿದ್ದರು. ಸನ್ಮಾನ ಸ್ವೀಕರಿಸಿದ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಅನಿಸಿಕೆ ಮತ್ತು ಅನುಭವ ಹಂಚಿ ಕೊಂಡರು.
ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್,ಉಪಾಧ್ಯಕ್ಷೆ ಶ್ರೀಮತಿ ಇಂದಿರಾ,ಸದಸ್ಯರಾದ ವಿಜಯ ಕುಮಾರ್ ಕೆ, ಸದಸ್ಯರು,ಶ್ರೀಮತಿ ಮೋಹಿನಿ ಬೊಮ್ಮಣ್ಣ ಗೌಡ, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕೆ,ನಿವೃತ ಸೈನಿಕ ದಿನೇಶ್ ಕುಮಾರ್ ಕೆ, ರಕ್ತೇಶ್ವರಿಪದವು ಸ.ಕಿ.ಪ್ರಾ.ಶಾಲಾ ಮುಖ್ಯ ಶಿಕ್ಷಕಿ ಚೈತ್ರಪ್ರಭಾ,ನಾಳ ದೇವಸ್ಥಾದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಎಮ್,ರಕ್ತೇಶ್ವರಿಪದವು ಶಾಲಾಭಿವೃದ್ಧಿ ಸಮಿತಿ ಸ.ಕಿ.ಪ್ರಾ. ಶಾಲೆ ಅಧ್ಯಕ್ಷೆ ಶ್ರೀಮತಿ ಕವಿತಾ ರಕ್ತೇಶ್ವರಿಪದವು,ನ್ಯಾಯತರ್ಪು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಸಂತ ಕುಮಾರ್, ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಅಧ್ಯಕ್ಷ ವಸಂತ ಗೌಡ ಕೆ, ರಕ್ತಶ್ವರಿಪದವು,ನೇತಾಜಿ ಕ್ರೀಡಾ ಸಂಘದ ಅಧ್ಯಕ್ಷ ಸಿದ್ದಪ್ಪ ಗೌಡ ಹೆಚ್,ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಕ್ತೇಶ್ವರಿಪದವು ಅಂಗನವಾಡಿ ಬಾಲವಿಕಾಸ ಸಮಿತಿ, ಸ್ತ್ರೀ ಶಕ್ತಿ ಸ್ವಸಹಾಯ ಸಂಘ,ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅಭಿಮಾನಿಗಳಿಂದ ಪ್ರತ್ಯೇಕವಾಗಿ ಗೌರವಿಸಿದರು.
ನ್ಯಾಯತರ್ಪು ಅರಣ್ಯ ಸಮಿತಿ ಅಧ್ಯಕ್ಷ ವಸಂತ ಕುಮಾರ್ ಪ್ರಸ್ತಾವನೆ ಮಾತನಾಡುತ್ತಾ ಸ್ವಾಗತಿಸಿದರು. ಉಮೇಶ್ ಕೇಲ್ದಡ್ಕ ಕಾರ್ಯಕ್ರಮ ನಿರ್ವಹಿಸಿದರು. ಕಳಿಯ ಸಿ.ಎ. ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಕೆ.ವಂದಿಸಿದರು.
ಕಳಿಯ ಗ್ರಾಮ ಪಂಚಾಯತ್ ಸದಸ್ಯರಾದ ಮರೀಟಾ ಪಿಂಟೊ, ಶ್ವೇತಾ ಶ್ರೀನಿವಾಸ್, ಮಾಜಿ ಅಧ್ಯಕ್ಷ ತುಕರಾಮ ಪೂಜಾರಿ,ಪ್ರದೀಪ್ ಕುಮಾರ್,ನಾಳ ದೇವಸ್ಥಾನದ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ,ನಿವೃತ್ತ ಶಿಕ್ಷಕಿ ಬೇಬಿ,ಜನಾರ್ದನ ಪೂಜಾರಿ, ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾದ ಗಿರಿಯಪ್ಪ ಗೌಡ ಕೆ,ನೇವಿಲ್ ಸ್ಟೀವನ್ ಮೋರಸ್,ರಂಜನ್ ಹೆಚ್, ಸೈನಿಕ ಲೋಕೇಶ್ ಗೌಡ, ನಿವೃತ್ತ ಅಂಚೆ ಪಾಲಕ ವಿಠ್ಠಲ ಶೆಟ್ಟಿ,ನಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ದಮಯಂತಿ, ಹಸೈನರ್ ಗೇರುಕಟ್ಟೆ, ನಿವೃತ್ತ ಸೈನಿಕ ವಿಕ್ರಂ ಜೆ , ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಣಾಧಿಕಾರಿ ಸುನೀತಾ ಹೆಗ್ಡೆ, ಕಳಿಯ, ನ್ಯಾಯತರ್ಪು ವಿಭಾಗದ ಅಂಗನವಾಡಿ ಕಾರ್ಯಕರ್ತಯರು ,ಆಶಾ ಕಾರ್ಯಕರ್ತಯರು, ವಿವಿಧ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪೋಷಕರು, ಅಂಗನವಾಡಿ ಸಹಾಯಕಿ, ಬಾಲವಿಕಾಸ ಸಮಿತಿ ಸದಸ್ಯರು ಮತ್ತಿತರಿದ್ದರು.