ಕನ್ಯಾಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿII ಶಾಲೆಯಲ್ಲಿ 69ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾದ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನಂದಾ ಕೆ ರಾಷ್ಟ್ರಧ್ವಜವನ್ನು ಹಾರಿಸಿ, ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್ ಮತ್ತು ಸಹ ಶಿಕ್ಷಕರು ಕೂಡ ಭಾಗಿಯಾದರು.
‘ಕರ್ನಾಟಕ ಏಕೀಕರಣದ’ ಕುರಿತು ಶಾಲಾ ವಿದ್ಯಾರ್ಥಿಯಾದ ಜನ್ವಿತ್ ಸವಿಸ್ತಾರವಾಗಿ ಹೇಳಿದನು. ಶಾಲಾ ಮಕ್ಕಳು ಕನ್ನಡ ನಾಡು- ನುಡಿ ಸಂಸ್ಕೃತಿಯನ್ನು ಕನ್ನಡದ ಕವಿಗಳು ರಚಿಸಿದ ಹಾಡುಗಳನ್ನು ಹಾಡುತ್ತಾ ಅಭಿವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ರಮ್ಯಾ, ಸದಸ್ಯ ಪುರುಷೋತ್ತಮ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ನಿನಾದ ಸ್ವಾಗತಿಸಿ, ಅಭಿಲಾಷ್ ವಂದಿಸಿ, ಯಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.