23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ II ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಕನ್ಯಾಡಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿII ಶಾಲೆಯಲ್ಲಿ 69ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮುಖ್ಯ ಅತಿಥಿಗಳಾದ ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷರಾದ ನಂದಾ ಕೆ ರಾಷ್ಟ್ರಧ್ವಜವನ್ನು ಹಾರಿಸಿ, ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾ ಎನ್ ಮತ್ತು ಸಹ ಶಿಕ್ಷಕರು ಕೂಡ ಭಾಗಿಯಾದರು.

‘ಕರ್ನಾಟಕ ಏಕೀಕರಣದ’ ಕುರಿತು ಶಾಲಾ ವಿದ್ಯಾರ್ಥಿಯಾದ ಜನ್ವಿತ್ ಸವಿಸ್ತಾರವಾಗಿ ಹೇಳಿದನು. ಶಾಲಾ ಮಕ್ಕಳು ಕನ್ನಡ ನಾಡು- ನುಡಿ ಸಂಸ್ಕೃತಿಯನ್ನು ಕನ್ನಡದ ಕವಿಗಳು ರಚಿಸಿದ ಹಾಡುಗಳನ್ನು ಹಾಡುತ್ತಾ ಅಭಿವ್ಯಕ್ತ ಪಡಿಸಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಶ್ರೀಮತಿ ರಮ್ಯಾ, ಸದಸ್ಯ ಪುರುಷೋತ್ತಮ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ನಿನಾದ ಸ್ವಾಗತಿಸಿ, ಅಭಿಲಾಷ್ ವಂದಿಸಿ, ಯಕ್ಷಿತ್ ಕಾರ್ಯಕ್ರಮ ನಿರೂಪಿಸಿದರು.

Related posts

ಜಿಲ್ಲಾ ಮಟ್ಟದ ಇನ್ಸ್ ಪೈಯರ್ ಸ್ಪರ್ಧೆಗೆ ಉರುವಾಲು ಶ್ರೀ ಭಾರತೀ ವಿದ್ಯಾರ್ಥಿಗಳು ಆಯ್ಕೆ

Suddi Udaya

ಲಾಯಿಲ: ತಾಲೂಕು ಮಟ್ಟದ ಮಂದಿರ ಅಧಿವೇಶನ

Suddi Udaya

ಬೆಳ್ತಂಗಡಿ: 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಟ್ಟ ಸ್ನೇಕ್ ಅಶೋಕ್ ಲಾಯಿಲ

Suddi Udaya

ಧರ್ಮಸ್ಥಳ: 25 ನೇ ವರ್ಷದ ಭಜನಾ ತರಬೇತಿ ಕಮ್ಮಟ ಸಮಾರೋಪ – ಭಜನೋತ್ಸವ ಸಮಾವೇಶ

Suddi Udaya

ನಿಟ್ಟಡೆ ಕುಂಭಶ್ರೀ ಶಾಲಾ ಶಿಕ್ಷಕ-ರಕ್ಷಕ ಸಂಘದ ಸಭೆ

Suddi Udaya

ಜು.17: ಧರ್ಮಸ್ಥಳದಲ್ಲಿ ಪುರಾಣ ಕಾವ್ಯ ವಾಚನ-ಪ್ರವಚನ

Suddi Udaya
error: Content is protected !!