September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಿಕ್ಷಣ ಸಂಸ್ಥೆ

ಗೇರುಕಟ್ಟೆ ಮನ್‌ಶರ್ ಕಾಲೇಜು ವತಿಯಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾವನದಲ್ಲಿ ವನಮಹೋತ್ಸವ ಆಚರಣೆ

ಬೆಳ್ತಂಗಡಿ: ವಿಶ್ವ ಪರಿಸರ ದಿನದ ಪ್ರಯುಕ್ತ ಗೇರುಕಟ್ಟೆ ಸಯ್ಯದ್ ಉಮರ್ ಅಸ್ಸಖಾಫ್ ತಂಙಳ್ನೇತೃತ್ವದ ಮನ್‌ಶರ್ ವಿವಿಧ ವಿದ್ಯಾ ಸಂಸ್ಥೆಗಳ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಹಾಗೂ ಕರ್ನಾಟಕ ಅರಣ್ಯ ಇಲಾಖೆ ವನ್ಯಜೀವಿ ವಲಯ ಬೆಳ್ತಂಗಡಿ ಇದರ ಸಹಯೋಗದಲ್ಲಿ ಇಂದಬೆಟ್ಟು ಗಸ್ತು ವ್ಯಾಪ್ತಿಯ ಕುದುರೆಮುಖ ರಕ್ಷಿತಾ ಅರಣ್ಯದಲ್ಲಿ 200ಕ್ಕಿಂತ ಅಧಿಕ ಉಪಯುಕ್ತ ಗಿಡಗಳನ್ನು ನೆಡುವುದರ ಮೂಲಕ ಬಹಳ ವನಮಹೋತ್ಸವ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾಡು ಬೆಳೆಸುವುದರ ಮಹತ್ವ, ಔಷಧಿ ಸಸ್ಯಗಳ ಮಹತ್ವ ಅದರ ಗುರುತು ಪತ್ತೆ ಹಚ್ಚುವಿಕೆ ಹಾಗೂ ವೈಜ್ಞಾನಿಕವಾಗಿ ಗಿಡ ನೆಡುವುದರ ಬಗ್ಗೆ ಸವಿಸ್ತಾರವಾಗಿ ಅರಣ್ಯ ಇಲಾಖೆಯ ಬೀಟ್ ಫಾರೆಸ್ಟ್ ಅಧಿಕಾರಿ ಭರತೇಶ್ ಸುವರ್ಣ, ಅರಣ್ಯ ವೀಕ್ಷಕರಾದ ಸತೀಶ್, ಸ್ವಾದಿಕ್, ಪ್ರವೀಣ್, ಗೋಪಾಲ್, ಇವರು ಮಾಹಿತಿ‌ ನೀಡಿದರು.

ಮನ್‌ಶರ್ ಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ದಾಲ ಸಾಂಕೇತಿಕವಾಗಿ ಗಿಡ ನೆಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.

ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರಶೀದ್ ಕುಪ್ಪೆಟ್ಟಿ, ಪ್ಯಾರಾಮೆಡಿಕಲ್ ಕಾಲೇಜು ಉಪನ್ಯಾಸಕಿ ಪವಿತ್ರಾ ಎಚ್, ಪಿಯು ಕಾಲೇಜು ಉಪನ್ಯಾಸಕಿ ಸುಪ್ರಿಯಾ ಜಾದವ್, ಪ್ಯಾರಾಮೆಡಿಕಲ್ ಪಿಯು ಕಾಲೇಜು ಸ್ಕೂಲ್ ನ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಮನ್‌ಶರ್ ಎನ್.ಎಸ್.ಎಸ್ ಘಟಕದ ನಿರ್ವಹಣಾಧಿಕಾರಿ ಮುಹಮ್ಮದ್ ತೌಫಿಕ್ ಕಾರ್ಯಕ್ರಮವನ್ನು ಆಯೋಜನೆಯನ್ನು ಮಾಡಿದರು.

Related posts

ಮಚ್ಚಿನ : ಕಲ್ಲಗುಡ್ಡೆಯಲ್ಲಿ ಬಡ ಮಹಿಳೆಗೆ ಮನೆ ಹಸ್ತಾಂತರ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಆಗಿ ಎಸ್.ಎನ್. ನರಗುಂದ ನೇಮಕ

Suddi Udaya

ಅಂಡಿಂಜೆ : ನೆಲ್ಲಿಂಗೇರಿ ಸ.ಕಿ.ಪ್ರಾ. ಶಾಲೆ ಮತ್ತು ಅಂಗನವಾಡಿ ಕೇಂದ್ರದಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ವೇಣೂರು ಸರಕಾರಿ ಪದವಿ ಪೂರ್ವ ಕಾಲೇಜಿಗೆ (ಪ್ರೌಢಶಾಲಾ ವಿಭಾಗ) 1 ಲಕ್ಷ ರೂ. ನೆರವು

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ. ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಅ28-ನ.3: ಕೊಕ್ಕಡದಲ್ಲಿ 69ನೇ ವರ್ಷದ ಸಾರ್ವಜನಿಕ ನಗರ ಭಜನಾ ಸಪ್ತಾಹ

Suddi Udaya
error: Content is protected !!