September 6, 2026
Uncategorized

ಸಂತ ಅಂತೋನಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ನಾರಾವಿ :ಕರ್ನಾಟಕವು ವಿವಿಧ ಭಾಷೆ, ಕಲೆ, ಸಂಸ್ಕೃತಿಗಳ ತವರೂರು ಹಾಗೂ ಇಲ್ಲಿ ಕನ್ನಡ ಭಾಷೆಗಿರುವ ಸ್ಥಾನ ಮಹತ್ವದ್ದು.
ಕನ್ನಡ ಭಾಷೆಯನ್ನು ಉಳಿಸುವುದು, ಕರ್ಣಾಟಕದಲ್ಲಿನ ಸಂಸ್ಕೃತಿಯನ್ನು ಬೆಳೆಸುವುದು ಮನುಷ್ಯನ ಮೊದಲ ಧ್ಯೇಯವಾಗಿರಬೇಕು” ಎಂದು ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ ಸ್ವಾಮಿ ಜೆರೋಮ್ ಡಿ’ಸೋಜಾ ಹೇಳಿದರು. ಅವರು ಸಂತ ಅಂತೋನಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಧ್ವಜಾರೋಹಣವನ್ನು ನೆರವೇರಿಸಿ ಮಾತಾಡಿದರು. ದೇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು ನಂತರ ಧ್ವಜಾರೋಹಣವನ್ನು ಮಾಡಿ ರಾಷ್ಟ್ರ ಗೀತೆ ಹಾಗೂ ಕರ್ನಾಟಕದ ವೈಭವವನ್ನು ಸಾರುವ ನಾಡಗೀತೆಯನ್ನು ಹಾಡುವ ಮೂಲಕ ಕನ್ನಡ ರಾಜ್ಯೋತ್ಸವವನ್ನುಆಚರಿಸಲಾಯಿತು.
ಪದವಿ ಕಾಲೇಜಿನ ಕನ್ನಡ ಭಾಷಾ ಉಪನ್ಯಾಸಕರಾದ ಶ್ರೀ ದಿನೇಶ್ ಬಿಕೆ ಇವರು ತಮ್ಮ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು.ಸಂತ ಅಂತೋನಿ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು ಎಲ್ಲಾ ಮುಕ್ಯೋಪಾಧ್ಯಾಯರು ಅಧ್ಯಾಪಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಪದವಿ ಕಾಲೇಜಿನ ವಿದ್ಯಾರ್ಥಿನಿ ಕು.ಅನ್ವಿತಾ ರಾವ್ ಮಾಡಿದರು.ಕಾರ್ಯಕ್ರಮದ ಕೊನೆಗೆ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ಹಂಚುವುದರ ಮೂಲಕ
ಕನ್ನಡ ರಾಜ್ಯೋತ್ಸವವನ್ನು ಸಂಭ್ರಮಿಸಲಾಯಿತು.

Related posts

ಧರ್ಮಸ್ಥಳದಲ್ಲಿ ಸಾಹಿತ್ಯ ಸಮ್ಮೇಳನದ 93ನೇ ಅಧಿವೇಶನ ಉದ್ಘಾಟನೆ

Suddi Udaya

ನ. 23: ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಯಾತ್ರಿ ನಿವಾಸ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಸವ೯ಧಮ೯ ಸಮ್ಮೇಳನದ 93ನೇ ಅಧಿವೇಶನ ಉದ್ಘಾಟನೆ

Suddi Udaya

ಸೆ .13: ಶ್ರವಣಬೆಳಗೊಳದ ಮಹಾಸ್ವಾಮೀಜಿ ಬೆಳ್ತಂಗಡಿ ಪುರ ಪ್ರವೇಶ

Suddi Udaya

ವೇಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕರುಣಾಕರ ಹೆಗ್ಡೆ ನಿಧನ

Suddi Udaya

ಶಿಬಾಜೆ; ವಲಯ ಶಿವಳ್ಳಿ ಬಾಂಧವರ ವತಿಯಿಂದ ಜಯರಾಮ ನೆಲ್ಲಿತ್ತಾಯ ದಂಪತಿಗಳಿಗೆ ಅಭಿನಂದನಾ ಕಾರ್ಯಕ್ರಮ ಜಯರಾಮ ನೆಲ್ಲಿತ್ತಾಯ ಸಮಾಜದ ಆಸ್ತಿ: ರಾಜಪ್ರಸಾದ್ ಪೊಲ್ನಾಯ

Suddi Udaya
error: Content is protected !!