ವೇಣೂರು- ಶ್ರೀ ಶಾರದಾ ಸೇವಾ ಟ್ರಸ್ಟ್ ,ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವೇಣೂರು,ಲಯನ್ಸ್ ಕ್ಲಬ್ (ರಿ)ವೇಣೂರು,ಹಾಗು ಪದ್ಮಾಂಬ ಕ್ಯಾಟರ್ಸ್ ಅಳದಂಗಡಿ ಇವರ ಸಹಭಾಗಿತ್ವದಲ್ಲಿ ದೀಪಾವಳಿ* ಪ್ರಯುಕ್ತ ದೋಸೆ ಹಬ್ಬ,ಗೂಡುದೀಪ ಹಾಗು ರಂಗೋಲಿ ಸ್ಪರ್ಧೆ ನವಂಬರ್ 1 ಶುಕ್ರವಾರದಂದು ದೇವಸ್ಥಾನದ ವಠಾರದಲ್ಲಿ ಬಾರಿ ವಿಜೃಂಭಣೆಯಿಂದ ಜರಗಿತು
ಚಾಮುಂಡೇಶ್ವರ ಕ್ಷೇತ್ರ ಅರಿಕೊಡಿ ಧರ್ಮದರ್ಶಿ ಶ್ರೀ ಹರೀಶ್ ಅರಿಕೊಡಿ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ,ಶ್ರೀ ಸಾಯಿ ಈಶ್ವರ್ ಗುರೂಜಿ ಏಕಜಾತಿ ಧರ್ಮಪೀಠ ಶ್ರೀ ದ್ವಾರಕಾಮಯಿ ಮಠ ಶಂಕರಪುರ ಉಡುಪಿ ಆಶೀರ್ವಚನ ನೀಡುತ್ತಾ ,”ಇಂತಹ ಕಾರ್ಯಕ್ರಮಗಳಿಂದ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಪರಂಪರೆ ಜೀವಂತವಾಗಿರುದಲ್ಲದೆ, ಬೆಳಕಿನ ಹಬ್ಬ ದೀಪಾವಳಿಯಿಂದ ಕಹಿಗಳನ್ನು ಮರೆತು ಕತ್ತಲೆಯಿಂದ ಬೆಳಕಿಗೆ ಬರುವ ಅಪೂರ್ವದಿನ ಮತ್ತು ದಕ್ಷಿಣದಲ್ಲಿ ಶ್ರೀ ಕೃಷ್ಣಾ ಹೆಸರಲ್ಲಿ , ಉತ್ತರದಲ್ಲಿ ಶ್ರೀ ರಾಮನ ಹೆಸರಲ್ಲಿ ದೀಪಾವಳಿ ಶ್ರದ್ದೆ ಭಕ್ತಿಯಿಂದ ಆಚರಿಸುತ್ತಾರೆಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀ ಹರೀಶ್ ಪೊಕ್ಕಿ ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ವೇಣೂರು ಗ್ರಾ ಪ ಅಧ್ಯಕ್ಷೆ ಶ್ರೀಮತಿ ಮಲ್ಲಿಕಾ ಹೆಗ್ಡೆ,ಬೆಸ್ಟ್ ಪೌಂಡೇಶನ್ ಅಧ್ಯಕ್ಷ ಶ್ರೀ ರಕ್ಷಿತ್ ಶಿವರಾಂ, ದೇವಸ್ಥಾನದ ಮಾಜಿ ಅಧ್ಯಕ್ಷ ಶ್ರೀ ಜಯರಾಮ್ ಶೆಟ್ಟಿ ಖಂಡಿಗ,ಧರ್ಮಷ್ಠಳ ಗ್ರಾಮಾಭಿವೃದ್ಧಿ ಯೋಜನೆ ವೇಣೂರು ವಲಯದ ಮೇಲ್ಬಿಚಾರಕರಾದ ಶ್ರೀಮತಿ ಶಾಲಿನಿ , ಶ್ರೀ ಪ್ರಭಾಕರ್ ಹೆಗ್ಡೆ ಹಟ್ಟಾಜೆ ,ಲಯನ್ಸ್ ಕಾರ್ಯದರ್ಶಿ ಜಯರಾಮ ಹೆಗ್ಡೆ ,ಶ್ರೀ ಶಾರದಾ ಟ್ರಸ್ಟ್ ಕಾರ್ಯದರ್ಶಿ ಶ್ರೀ ಅರವಿಂದ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಮುಖರಾದ ಶ್ರೀ ದೇಜಪ್ಪ ಶೆಟ್ಟಿ ,ಬಾಲಕೃಷ್ಣ ಭಟ್ , ದಯಾನಂದ ದೇವಾಡಿಗ ಅಲಂತಿಯಾರ್ , ಗಣೇಶ್ ದೇವಾಡಿಗ,ದಯಾನಂದ.,ಶ್ರೀಧರ್ ಶೆಟ್ಟಿ , ಶಶಿಧರ್ ಶೆಟ್ಟಿ ಮೂಡುಕೋಡಿ ಉಪಸ್ಥಿತರಿದ್ದರು*.
ಶಾರದಾ ಪೀಠವನ್ನು ಉಚಿತವಾಗಿ ಒದಗಿಸಿದ್ದ ಶ್ರೀಮತಿ ವೀರಮ್ಮ ಸಂಜೀವ ಸಾಲ್ಯಾನ್ ಡೊಂಕಬೆಟ್ಟು ಇವರನ್ನು ಗುರೂಜಿಯವರು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿದರು
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಶ್ರೀ ಶಾರದಾ ಟ್ರಸ್ಟ್ ಅಧ್ಯಕ್ಷ ಶ್ರೀ ಧರಣೇಂದ್ರ ಕುಮಾರ್ ಪ್ರಸ್ತಾವನೆ ಮಾಡಿ ಅಥಿತಿಗಳನ್ನು ಸ್ವಾಗಿತಿಸಿದರು.ಶ್ರೀ ರಮೇಶ್ ಪಡ್ದಾಯಿ ಮಜಲು ಧನ್ಯವಾದವಿತ್ತರು. ಶ್ರೀ ಸತೀಶ್ ವೇಣೂರು ಹಾಗು ಸತೀಶ್ ಹೆಗ್ಡೆ ಬಜಿರೆ ಕಾರ್ಯಕ್ರಮ ನಿರ್ವಹಿಸಿದರು