April 2, 2025
Uncategorized

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿನ ಹಳೆ ವಿದ್ಯಾರ್ಥಿ ಸಂಘ ಪ್ರತಿ ವರ್ಷದಂತೆ ದೀಪಾವಳಿಯ ನರಕ ಚತುರ್ದಶಿಯಂದು ಆಯೋಜಿಸಿರುವ ವಾರ್ಷಿಕ ಕ್ರೀಡಾಕೂಟ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ವೇಣೂರು :ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿನ ಹಳೆ ವಿದ್ಯಾರ್ಥಿ ಸಂಘ ಪ್ರತಿ ವರ್ಷದಂತೆ ದೀಪಾವಳಿಯ ನರಕ ಚತುರ್ದಶಿಯಂದು ಆಯೋಜಿಸಿರುವ ವಾರ್ಷಿಕ ಕ್ರೀಡಾಕೂಟ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಐ ಟಿ ಐ ನಲ್ಲಿ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಶ್ರೀ ವಿಶ್ವೇಶ್ವರ ಪ್ರಸಾದ್ ಕೆಆರ್ ವಹಿಸಿ ಮಾತಾಡುತ್ತಾ ಹಳೆ ವಿದ್ಯಾರ್ಥಿ ಸಂಘವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಸಂಸ್ಥೆಗೆ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿರುವುದು ಅಭಿನಂದನೀಯ ಎಂದರು. ಗೌರವ ಉಪಸ್ಥಿತಿಯಲ್ಲಿ ಸಂಸ್ಥೆಯ ನಿವೃತ್ತ ಪ್ರಾಚಾರ್ಯರಾದ ಶ್ರೀ ಸದಾನಂದ ಪೂಜಾರಿಯವರು ಮಾತಾಡುತ್ತಾ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಳೆ ವಿದ್ಯಾರ್ಥಿ ಸಂಘ ಎಲ್ಲರಿಗೂ ಮಾದರಿ ಎಂದರು. ಮುಖ್ಯ ಅತಿಥಿ ನೆಲೆಯಲ್ಲಿ ಹಳೆ ವಿದ್ಯಾರ್ಥಿಗಳಾದ ಶ್ರೀ ಮಹಾವೀರ ಬ್ಯಾಟರೀಸ್ ನ ಮಾಲಕರಾದ ಶ್ರೀ ವಸಂತ ಕುಮಾರ್, ಮೊಲೆಕ್ಸ್ ಇಂಡಿಯಾ ಪ್ರೈ. ಲಿಮಿಟೆಡ್ ನ ಪ್ಲಾನಿಂಗ್ ಇಂಜಿನಿಯರ್ ಶ್ರೀ ಪ್ರದೀಪ್ ಜೈನ್, ಡಿ ಆರ್ ಡಿ ಓ ಕಂಪನಿಯ ಟೆಕ್ನಿಕಲ್ ಆಫೀಸರ್ ಶ್ರೀ ರೋಷನ್ ಲೋಬೋ, ಕತಾರ್ ನ ಎ ಸಿ ಟೆಕ್ನೀಷಿಯನ್ ಶ್ರೀಮನ್ಸೂರ್ ಹಳೆ ವಿದ್ಯಾರ್ಥಿ ಸಂಘಕ್ಕೆ ಶುಭ ಹಾರೈಸಿದರು .


ವೇದಿಕೆಯಲ್ಲಿ ಕಚೇರಿ ಅಧಿಕ್ಷಕರಾದ ಶ್ರೀ ಸುರೇಶ್ ದೇವಾಡಿಗ, ತರಬೇತಿ ಅಧಿಕಾರಿ ಶ್ರೀ ಪೀಟರ್ ಸಿಕ್ವೇರಾ, ಲಿಖಿತ್ ಎಲೆಕ್ಟ್ರೋ ಪವರ್ ಸರ್ವಿಸ್ನ ಎ ಗ್ರೇಟ್ ಗುತ್ತಿಗೆದಾರರಾದ ಶ್ರೀ ಸುಂದರ್ , ಎಸಿಇ ಡಿಸೈನರ್ ನ ಟೆಕ್ನೀಷಿಯನ್ ಶ್ರೀ ಜನಾರ್ಧನ ಕುಲಾಲ್ ವಡ್ಡ, ಶ್ರೀ ದುರ್ಗಾಪರಮೇಶ್ವರಿ ಆಟೋ ವರ್ಕ್ ನ ಮಾಲಕರಾದ ಶ್ರೀ ಗೀತ ಪ್ರಕಾಶ್ , ಎಸಿಇ ಕ್ರೇನ್ಸ್ ದುಬೈ ಯ ಟೆಕ್ನೀಷಿಯನ್ ಮನೋಜ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಪ್ರಸಕ್ತ ತರಬೇತಿದಾರರಾಗಿ ವ್ಯಾಸಂಗ ಮಾಡುತ್ತಿರುವ 7 ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಇದೇ ಸಂಧರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ನವೀಕರಣಗೊಂಡ ಉಪನ್ಯಾಸಕರ ಕಚೇರಿಯನ್ನು ಉದ್ಘಾಟಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ತಿಲಕ್ ಕೆ ಎಸ್, ಹಳೆ ವಿದ್ಯಾರ್ಥಿ ಮಿತ್ರರು, ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳು, ಸಂಸ್ಥೆಯ ಹಿತೈಷಿ ಜಗನ್ನಾಥ ದೇವಾಡಿಗ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕು ಪ್ರಭಾ ಪ್ರಾರ್ಥಸಿ,ಕೋಶಾಧಿಕಾರಿ ಶ್ರೀ ಪದ್ಮ ಪ್ರಸಾದ್ ಬಸ್ತಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು, ಕಿರಿಯ ತರಬೇತಿ ಅಧಿಕಾರಿ ಶ್ರೀ ಸತೀಶ್ ರವರು ನಿರೂಪಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಶ್ರೀ ಮಾಣಿಕ್ಯರಾಜ್ ಜೈನ್ ಧನ್ಯವಾದ ಸಮರ್ಪಿಸಿದರು ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಹಳೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯಾಟ ನಡೆಸಿ ವಿಜೇತರಿಗೆ ಬಹುಮಾನ ವಿತರಣೆ ನಡೆಸಲಾಯಿತು.

Related posts

ಹಿಂದೂ ದೇವಾಲಯಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಲು ಒಂದು ದಿನದ ಉಪವಾಸ ಸತ್ಯಾಗ್ರಹ

Suddi Udaya

ಕೊಯ್ಯೂರು ಮಾಧವ ಶೆಟ್ಟಿಗಾರ್ಮನೆ ಬಳಿ ಗುಡ್ಡ ಕುಸಿತಸ್ಥಳಕ್ಕೆ ಗ್ರಾ.ಪಂ ಕಾಯ೯ದಶಿ೯ ಪರಮೇಶ್ವರ್ ಭೇಟಿ – ಪರಿಶೀಲನೆ

Suddi Udaya

ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಸಂಘಟಿತ ಶ್ರಮದಿಂದ ಕಾಂಗ್ರೆಸ್ ಗೆಲುವು: ಸಂದೀಪ್ ಎಸ್ ನೀರಲ್ಕೆ

Suddi Udaya

ನಾವೂರು ತಡೆಗೋಡೆ ನಿರ್ಮಾಣನೀರು ನಿಂತು ನಡೆದುಕೊಂಡು ಹೋಗುವುದಕ್ಕೆ ಸಮಸ್ಯೆ

Suddi Udaya

ಧರ್ಮಸ್ಥಳ : ಶ್ರೀ ಧ.  ಮಂ.  ಆಂಗ್ಲ ಮಾಧ್ಯಮ ಶಾಲೆಯಲ್ಲಿ  ನಾಯಕತ್ವ ತರಬೇತಿ ಕಾರ್ಯಾಗಾರ

Suddi Udaya

ಕೊಕ್ರಾಡಿ: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಟಿದ ನೆಂಪು ಕಾರ್ಯಕ್ರಮ

Suddi Udaya
error: Content is protected !!