April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ: ಎಸ್. ಡಿ. ಎಂ ಅಂತರ್ ಕಾಲೇಜು ಗೂಡುದೀಪ ಸ್ಪರ್ಧೆ

ಉಜಿರೆ: ಎಸ್. ಡಿ. ಎಂ ಪದವಿ ಶಿಕ್ಷಣ ಸಂಸ್ಥೆ ಗಳ ಅಂತರ್ ಕಾಲೇಜು ಗೂಡುದೀಪ ರಚನಾ ಸ್ಪರ್ಧೆಯನ್ನು ಇತ್ತೀಚೆಗೆ ಎಸ್. ಡಿ. ಎಂ ಇಂಜಿನಿಯರಿಂಗ್ ಕಾಲೇಜು ಉಜಿರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸ್ಪರ್ಧೆಯಲ್ಲಿ 30 ತಂಡಗಳು ಭಾಗವಹಿಸಿದವು. ಪರಿಸರ ಸ್ನೇಹಿ ವಸ್ತುಗಳಿಂದ ಗೂಡು ದೀಪ ರಚಿಸಲು ಪ್ರಾಮುಖ್ಯತೆ ನೀಡಲಾಯಿತು.
ಎಸ್ ಡಿ ಎಂ ಇಂಜಿನಿಯರಿಂಗ್ ಕಾಲೇಜಿನ ಅನು ಪ್ರಕಾಶ್ ಮತ್ತು ಜೀವನ್ ಪ್ರಥಮ ಸ್ಥಾನ, ಎಸ್ ಡಿ ಎಂ ನ್ಯಾಚುರೋಪತಿ ಕಾಲೇಜಿನ ಸಂಸ್ಕೃತಿ ಜೈನ್ ಮತ್ತು ಆಕ್ಷಯ್ ದ್ವಿತೀಯ ಹಾಗೂ ಇಂಜಿನಿಯರಿಂಗ್ ಕಾಲೇಜಿನ ಶ್ರೀನವ್ಯ ಮತ್ತು ಸಿಂಚನ ತೃತೀಯ ಸ್ಥಾನವನ್ನು ಗಳಿಸಿದರು.


ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ವಿಜೇತರಿಗೆ ನಗದು ಬಹುಮಾನ ವಿತರಿಸಿದರು. ತೀರ್ಪುಗಾರರಾಗಿ ಡಾ. ರವೀಶ್ ಪಡುಮಲೆ ಹಾಗೂ ಡಾ. ಶೋಭ ಜೀವಂಧರ್ ಸಹಕರಿಸಿದರು. ಸಹಪ್ರಾಧ್ಯಾಪಕ ಡಾ. ಕೃಷ್ಣಪ್ರಸಾದ್ ಕಾರ್ಯಕ್ರಮ ಸಂಯೋಜಿಸಿದರು.

Related posts

ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯ ವಾರ್ಷಿಕೋತ್ಸವ

Suddi Udaya

ಧರ್ಮಸ್ಥಳ :ಅಜಿಕುರಿ ಹೆಜ್ಜೇನು ದಾಳಿಯಿಂದ ಆಸ್ಪತ್ರೆಗೆ ದಾಖಲಾದ ಗಾಯಾಳುಗಳ ಆರೋಗ್ಯ ವಿಚಾರಿಸಿದ ರಕ್ಷಿತ್ ಶಿವರಾಂ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಸವ: ಜ್ಞಾನ, ವಿಜ್ಞಾನ ಮತ್ತು ಸುಜ್ಞಾನದ ತ್ರಿವೇಣಿ ಸಂಗಮ

Suddi Udaya

ವಾಣಿ ಕಾಲೇಜಿನ ವಿದ್ಯಾರ್ಥಿ ಉದಿತ್ ರೈ ತ್ರೋಬಾಲ್ ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ಮಹಿಳಾ ವೃಂದದಿಂದ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಉರುವಾಲು: ಶ್ರೀ ಭಾರತೀ ವಿದ್ಯಾಸಂಸ್ಥೆಯಲ್ಲಿ ವನಮಹೋತ್ಸವ ಮತ್ತು ಸಸಿ ವಿತರಣಾ ಕಾರ್ಯಕ್ರಮ

Suddi Udaya
error: Content is protected !!