ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ದಯಾ ವಿಶೇಷ ಶಾಲೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಲಾಯಿಲ: ಕರ್ನಾಟಕ ರಾಜ್ಯೋತ್ಸವ ಆಚರಣೆಯ ಅಂಗವಾಗಿ ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ದಯಾ ವಿಶೇಷ ಶಾಲೆ, ಲಾಯಿಲಾ, ಬೆಳ್ತಂಗಡಿ ಇದರ ವಿಶೇಷ ಚೇತನ ಮಕ್ಕಳ ಪರ ನಿಸ್ವಾರ್ಥ ಸೇವೆಯನ್ನು ಗುರುತಿಸಿ 2024-2025 ರ ಸಾಲಿನ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ದಯಾ ವಿಶೇಷ ಶಾಲೆಗೆ ನೀಡಿ ಗೌರವಿಸಲಾಯಿತು. ದಯಾ ವಿಶೇಷ ಶಾಲೆಯ ಸಂಚಾಲಕರಾದ ವಂ.ಫಾ.ವಿನೋದ್ ಮಸ್ಕರೇನಸ್ ರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡರು.


ದಯಾ ವಿಶೇಷ ಶಾಲೆಯಲ್ಲಿ 150 ಕ್ಕಿಂತ ಹೆಚ್ಚುಮಕ್ಕಳಿದ್ದು, ವಾಕ್ ಮತ್ತು ಶ್ರವಣ ಚಿಕಿತ್ಸೆ, ಭೌತ ಚಿಕಿತ್ಸೆ, ವೈಧ್ಯಕೀಯ ಚಿಕಿತ್ಸೆ, ನೈರ್ಮಲ್ಯ ತರಬೇತಿ, ಕೌಶಲ್ಯ ತರಬೇತಿ ಮತ್ತು ಪೌಷ್ಟಿಕ ಆಹಾರವನ್ನು ಪ್ರತಿನಿತ್ಯವೂ ಆಡಳಿತ ಮಂಡಳಿಯು ಮಕ್ಕಳಿಗೆ ಉಚಿತವಾಗಿ ಒದಗಿಸುತ್ತಿದ್ದು, ಈ ವಿಶೇಷ ಚೇತನರು ದೈಹಿಕ, ಮಾನಸಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿಯನ್ನು ಕಾಣುತ್ತಾ ಬಂದಿರುತ್ತಾರೆ. ದಯಾ ವಿಶೇಷ ಮಕ್ಕಳ ಸರ್ವತೋಮುಖ ಅಭಿವೃಧ್ದಿಗೆ ವಿವಿಧ ದಾನಿಗಳು ತಮ್ಮ ಸಹಾಯ ಹಸ್ತವನ್ನು ನೀಡಿರುತ್ತಾರೆ. ಅವರ ಈ ಸಹಭಾಗಿತ್ವಕ್ಕೆ ಸಂಸ್ಥೆಯು ಸದಾ ಚಿರಋಣಿಯಾಗಿರುತ್ತದೆ ಎಂದು ಶಾಲಾ ಸಂಚಾಲಕರಾದ ವಂ.ಫಾ.ವಿನೋದ್ ಮಸ್ಕರೇನಸ್ ರವರು ಹಾಗೂ ಸಹ ನಿರ್ದೇಶಕರಾದ ವಂ.ಫಾ.ರೋಹನ್ ಲೋಬೋ ರವರು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದು. ಈ ಸಂಭ್ರಮದಲ್ಲಿ ಭಾಗಿಯಾದರು.

Related posts

ಖಂಡಿಗ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಮತ್ತು ವಿವಿಧ ಸ್ಪರ್ಧೆಗಳು

Suddi Udaya

ಬೆಳ್ತಂಗಡಿ: “ಸಮಾಜಮುಖಿ ಸೇವೆಯಲ್ಲಿ ವಿ. ಹರೀಶ್ ನೆರಿಯ ರವರಿಗೆ ವಿಶೇಷ ಸಾಧಕ” ಪ್ರಶಸ್ತಿಯ ಗರಿಮೆ

Suddi Udaya

ಉರುವಾಲು : ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವಭಾವಿ-ಸಮಾಲೋಚನಾ ಸಭೆ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿರವರಿಂದ ಮತದಾನ

Suddi Udaya

ಪುಂಜಾಲಕಟ್ಟೆ- ಬಿಸಿ ರೋಡ್ ಮಾದರಿಯಲ್ಲಿ ರಸ್ತೆ ವಿಸ್ತರಣೆ ಮಾಡುವಂತೆ ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡೊ ಲೋಬೋ ಮನವಿ

Suddi Udaya

ಬೆಳ್ತಂಗಡಿ ತಾಲೂಕು ಮಟ್ಟದ ಚೆಸ್ ಪಂದ್ಯಾಟ ಉದ್ಘಾಟನೆ

Suddi Udaya
error: Content is protected !!