20.7 C
ಪುತ್ತೂರು, ಬೆಳ್ತಂಗಡಿ
November 25, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಸ್ತೂರಿ ರಂಗನ್ ವರದಿ ವಿರೋಧಿಸಿ ನಡ ಗ್ರಾಮ ಪಂಚಾಯತ್ ನಲ್ಲಿ ಪ್ರತಿಭಟನೆ

ನಡ : ಮಲೆನಾಡು ಜನ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ನಡ ಗ್ರಾಮ ಪಂಚಾಯತ್ ಆವರಣದಲ್ಲಿ ನ.6 ರಂದು ಪ್ರತಿಭಟನೆ ನಡೆಯಿತು.

ಈ ವೇಳೆ ಮಾತನಾಡಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ, ಕಸ್ತೂರಿ ರಂಗನ್ ವರದಿ ವಿರೋಧಿಸಿ, ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿಗುರುತು ಆಗಬೇಕು, ಕೃಷಿ ಭೂಮಿಗೂ ಅರಣ್ಯ ಭೂಮಿಯ ನಡುವೆ ಆನೆ ಕಂದಕ ನಿರ್ಮಾಣವಾಗಬೇಕು. ಪಶ್ಚಿಮಘಟ್ಟಕ್ಕೆ ಬರುವ ಅರಣ್ಯ ಸಂರಕ್ಷಣಾ ಕಾಯ್ದೆ ಕೃಷಿ ಭೂಮಿ, ಜನವಸತಿ ಪ್ರದೇಶ ಮತ್ತು ಮೂಲಭೂತ ಸೌಕರ್ಯಕ್ಕೆ ಅನ್ವಯಿಸಬಾರದು ಎಂಬ ಕೆಲವು ಬೇಡಿಕೆಗಳನ್ನು ಮುಂದಿಟ್ಟು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅರಸಿನಮಕ್ಕಿ ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ನವೀನ್ ರೆಖ್ಯ, ಮಲೆನಾಡು ಹಿತ ರಕ್ಷಣಾ ಜಿಲ್ಲಾ ಸಮಿತಿಯ ಸದಸ್ಯ ಕರುಣಾಕರ ಶಿಶಿಲ, ಬೆಳ್ತಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಅಜಿತ್ ಅರಿಗ, ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ದಿವಾಕರ ಪೂಜಾರಿ, ನಾವೂರು ನಿಕಟಪೂರ್ವಾಧ್ಯಕ್ಷ ಗಣೇಶ್ ಗೌಡ ನಾವೂರು, ನಡ ನಿಕಟಪೂರ್ವಾಧ್ಯಕ್ಷ ವಿಜಯ್ ಗೌಡ, ಪಂಚಾಯತ್ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಅಜಿತ್ ಅರಿಗ ಧನ್ಯವಾದವಿತ್ತರು. ನಂತರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

Related posts

ಉಜಿರೆ: ಬ್ರಹ್ಮೋಪದೇಶದಲ್ಲಿ ಶರಸೇತು ಬಂಧನ ತಾಳಮದ್ದಳೆ

Suddi Udaya

ಕುವೆಟ್ಟು: ದಿ| ಪ್ರಭಾಕರ ಶೆಣೈರವರ ಪತ್ನಿ ವಿದ್ಯಾವತಿ ನಿಧನ

Suddi Udaya

ಶಿಬಾಜೆ ಗ್ರಾ.ಪಂ. ಅಧ್ಯಕ್ಷರಾಗಿ ರತ್ನ, ಉಪಾಧ್ಯಕ್ಷರಾಗಿ ದಿನಕರ್ ಆಯ್ಕೆ

Suddi Udaya

ಇಂದಬೆಟ್ಟು ಗ್ರಾ.ಪಂ. ವತಿಯಿಂದ ಸ್ವಚ್ಛತಾ ಕಾರ್ಯ

Suddi Udaya

ಗುರುವಾಯನಕೆರೆ: ಮನೆ ಹಾಗೂ ಅಂಗಡಿಗಳಿಗೆ ನುಗ್ಗಿದ ನೀರು: ಕುವೆಟ್ಟು ಗ್ರಾ.ಪಂ. ನಿಂದ ಮೋರಿ ಅಳವಡಿಕೆ, ಚರಂಡಿ ದುರಸ್ತಿ, ಪಂ.ಸದಸ್ಯರ ಮೂಲಕ ಸಮಸ್ಯೆಗೆ ಪರಿಹಾರ

Suddi Udaya

ಮಡಂತ್ಯಾರುವಿನಲ್ಲಿ “ಲಸ್ಸಿ ಟೇಲ್ಸ್ ಕೆಫೆ” ಶುಭಾರಂಭ

Suddi Udaya
error: Content is protected !!