July 23, 2026
Uncategorized

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಮತ್ತಷ್ಟು ವಿಘ್ನ : ಚುನಾವಣೆಯಲ್ಲಿ ನಿಯಮಗಳ ಉಲ್ಲಂಘನೆ ಮೂರು ಮಂದಿ ನಿರ್ದೇಶಕರಿಂದ ಚುನಾವಣಾಧಿಕಾರಿಗಳಿಗೆ ಮನವಿ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಳ್ತಂಗಡಿ ತಾಲೂಕು ಶಾಖೆಯ 2024-29ನೇ ಅವಧಿಯ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ವಿವಾದ ಉಂಟಾದಾಗಿ ಇಬ್ಬರು ಶಿಕ್ಷಕರು ಪೊಲೀಸ್ ಠಾಣೆಯ ಮೇಟ್ಟಿಲೇರಿದರೆ, ಇದೀಗ ಚುನಾವಣೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿಲಾಗಿದ್ದು, ಇದರ ಬಗ್ಗೆ ಸೂಕ್ತ ವಿವರಣೆ ನೀಡುವಂತೆ ಸಂಘದ ಮೂರು ಮಂದಿ ನಿರ್ದೇಶಕರು ಚುನಾವಣಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.

ನಿರ್ದೇಶಕರಾದ ಪ್ರಶಾಂತ್ ಡಿ.ಬಳೆಂಜ, ಪ್ರದೀಪ್ ಕುಮಾರ್, ಕೆ. ಸದಾಶಿವ ರಾವ್ ‌ಈ ಮನವಿಯನ್ನು ನೀಡಿದ್ದಾರೆ.
ಮನವಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಆದೇಶ, ನೋಟೀಸುಗಳನ್ನು ಸಂಘದ ಸದಸ್ಯರಿಗೆ ತಿಳಿಯಪಡಿಸಲು ಸೂಕ್ತ ನೋಟೀಸು ಬೋರ್ಡ್ ಇರುವುದಿಲ್ಲ. ಆದೇಶ, ನೋಟೀಸುಗಳನ್ನು ಸಂಘದ ಕಛೇರಿ ಕಟ್ಟಡದ ಗೋಡೆಗೆ ಅಂಟಿಸಿ ಪ್ರಚುರ ಪಡಿಸಲಾಗಿದೆ.
ನಾಮಪತ್ರ ತಿರಸ್ಕೃತಗೊಂಡ ಸದಸ್ಯರಿಗೆ ಯಾವ ಕಾರಣಕ್ಕಾಗಿ ನಾಮಪತ್ರ ತಿರಸ್ಕೃತಗೊಂಡಿದೆ
ಯೆಂದು ಲಿಖಿತವಾಗಿ ಈ ದಿನದವರೆಗೆ ತಿಳಿಸಿರುವುದಿಲ್ಲ ಮತ್ತು ತಿರಸ್ಕೃತಗೊಂಡವರ ಠೇವಣಿಯನ್ನು ಹಿಂತಿರುಗಿಸಿರುವುದಿಲ್ಲ.
ಈ ಸಂಘದ ಅಧ್ಯಕ್ಷ, ಕೋಶಾಧಿಕಾರಿ ಮತ್ತು ರಾಜ್ಯ ಪರಿಷತ್ ಹುದ್ದೆಗೆ ಸ್ಪರ್ಧಿಸುವವರಿಗೆ ಚಿಹ್ನೆಯನ್ನು ಆಯ್ಕೆ ಮಾಡಲು ಸೂಕ್ತ ವ್ಯವಸ್ಥೆಯನ್ನು ಮಾಡಿರುವುದಿಲ್ಲ. ಇದರಿಂದಾಗಿ ಮತ ಕೇಳಲು, ಪ್ರಚಾರ ಮಾಡಲು ತೊಂದರೆಯಾಗಿರುತ್ತದೆ.
ಈ ವರೆಗೆ ಚುನಾವಣಾ ಸಿಬ್ಬಂದಿಯನ್ನು ನೇಮಕ ಮಾಡಿರುವ ಬಗ್ಗೆ ಘೋಷಣೆ ಮಾಡಿರುವುದಿಲ್ಲ. ಚುನಾವಣಾ ಪ್ರಕ್ರಿಯೆಯ ವಿವರವನ್ನು ಆರಂಭದಿಂದ ಇಲ್ಲಿಯವರೆಗೆ ಇಲಾಖಾ ಮುಖ್ಯಸ್ಥರಿಗೆ, ದೃಶ್ಯ ಮತ್ತು ಮುದ್ರಣ ಮಾಧ್ಯಮದವರಿಗೆ ಲಿಖಿತವಾಗಿ ನೀಡಿರುವುದಿಲ್ಲ.
ನ. 16 ರಂದು ನಡೆಯುವ ಚುನಾವಣಾ ಪ್ರಕ್ರಿಯೆಯ ವಿವರವನ್ನು ಲಿಖಿತವಾಗಿ ಚುನಾಯಿತ ನಿರ್ದೇಶಕರಿಗೆ ನೀಡಿರುವುದಿಲ್ಲ ಎಂಬ ಅಂಶಗಳನ್ನು ಉಲ್ಲೇಖಿಸಿ, ಇದರ ಬಗ್ಗೆ ಕೂಡಲೇ ನೀಡುವಂತೆ ವಿನಂತಿಸಿದ್ದಾರೆ. ಬೆಳ್ತಂಗಡಿ ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಇದುವರೆಗೆ ಅವಿರೋಧ ಆಯ್ಕೆಗಳೇ ನಡೆದಿದ್ದು, ಇತಿಹಾಸದಲ್ಲಿ
ಪೊಲೀಸ್ ಠಾಣೆಯ ಮೇಟ್ಟಿಲೇರಿದ ಪ್ರಕರಣ ನಡೆದಿರುವುದು ಇದು ಪ್ರಥಮವಾಗಿದೆ.

Related posts

ಲೋಕಸಭಾ ಚುನಾವಣೆ: ಭಾರತೀಯ ಜನತಾ ಪಾರ್ಟಿ‌ ಬೆಳ್ತಂಗಡಿ ಮಂಡಲ ಇದರ ನೇತೃತ್ವದಲ್ಲಿ ಬೃಹತ್ ರೋಡ್ ಶೋ:ಬಿಜೆಪಿ ರಾಜ್ಯ ಅಧ್ಯಕ್ಷರು ಹಾಗೂ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮತ ಯಾಚನೆ

Suddi Udaya

ಬೆಳಾಲು ಪ್ರೌಢಶಾಲೆ ವ್ಯಕ್ತಿತ್ವ ವಿಕಾಸನ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಅ.ಭಾ.ಸಾ.ಪ. ಸಮಿತಿ ಹಾಗೂ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನೇತೃತ್ವದಲ್ಲಿ ನೀರಿನ ಸದ್ಬಳಕೆ ಕುರಿತು ಕವಿಗೋಷ್ಠಿ

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಟ್ಟದ ಪ್ರತಿಭಾ ಕಾರಂಜಿ

Suddi Udaya

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ವರ್ಗಾವಣೆ ನೂತನ ಡಿಸಿಯಾಗಿ ದರ್ಶನ್ ಹೆಚ್ ನೇಮಕ

Suddi Udaya

ದ.ಕ. ಜಿಲ್ಲಾ ಯೋಜನಾ ಸಮಿತಿಯ ಸಭೆ: ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ್ ಕಾರಂತ್ ರಿಗೆ ಆಹ್ವಾನ

Suddi Udaya
error: Content is protected !!