24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗೇರುಕಟ್ಟೆ: ಯಕ್ಷೋತ್ಸವ ಕಾರ್ಯಕ್ರಮ ಉದ್ಘಾಟನೆ

ಕಳಿಯ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಯಕ್ಷಾರಾಧನ ಕಲಾ ಪ್ರತಿಷ್ಠಾನ, ನಾಳ -ಗೇರುಕಟ್ಟೆ ಇದರ ಸಹಯೋಗದೊಂದಿಗೆ ಯಕ್ಷೋತ್ಸವ ಕಾರ್ಯಕ್ರಮ ನ.9ರಂದು ಗೇರುಕಟ್ಟೆ ಮಂಜಲಡ್ಕ ಗಣೇಶೋತ್ಸವ ಸಭಾಭವನದಲ್ಲಿ ನಡೆಯಿತು.

ಶ್ರೀ ಕ್ಷೇತ್ರ ನಾಳದ ಪ್ರಧಾನ ಅರ್ಚಕ ವೇ.ಮೂ.ರಾಘವೇಂದ್ರ ಅಸ್ರಣ್ಣ ಉದ್ಘಾಟಿಸಿ ಶುಭಹಾರೈಸಿದರು.

ವೇದಿಕೆಯಲ್ಲಿ ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ‌., ಗೇರುಕಟ್ಟೆ ಜ್ಯೋತಿ ಕ್ಲಿನಿಕ್ ನ ವೈದ್ಯ ಅನಂತ್ ಭಟ್, ನಿವೃತ್ತ ರೈಲ್ವೇ ಅಧಿಕಾರಿ ಬೆಂಗಳೂರು ಕೃಷ್ಣ ಕೆ, ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮತ್ತು ಮಂಗಳೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತಾರಾನಾಥ ಗಟ್ಟಿ ಕಾಪಿಕಾಡು ಉಪಸ್ಥಿತರಿದ್ದರು.

ಪ್ರಮುಖರಾದ ಮಹಾವೀರ್ ಮತ್ತು ವಿಜಯ್ ಕುಮಾರ್ ಇವರನ್ನು ಗೌರವಿಸಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್. ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ ನಿರೂಪಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಚಾಲಕ ರಾಘವ ಹೆಚ್ ಸಹಕರಿಸಿದರು.

ಯಕ್ಷ ಭಜನೆ:
ಪುಂಜಾಲಕಟ್ಟೆ ಗಣೇಶ್ ಮತ್ತು ತಂಡದಿಂದ ಯಕ್ಷಭಜನೆ ನಡೆಯಿತು. ಭಾಗತರಾಗಿ ಗಣೇಶ್ ಪುಂಜಾಲಕಟ್ಟೆ, ಜಗದೀಶ್ ಚಾರ್ಮಾಡಿ, ಚೆಂಡೆ ಮದ್ದಳೆ ವಿಶ್ವನಾಥ್ ಆಚಾರ್ಯ ವಾಮದಪದವು ಹಾಗೂ ಚಂದ್ರಶೇಖರ್ ಗೇರುಕಟ್ಟೆ ಮುನ್ನಡೆಸಿದರು.

Related posts

“ಸಿಂಧೂರ್” ಅರ್ಥಪೂರ್ಣವಾದ ಆಪರೇಷನ್: ಪೀತಾಂಬರ ಹೆರಾಜೆ

Suddi Udaya

ವಾಣಿ ಕಾಲೇಜಿನಲ್ಲಿ ರೋವರ್ಸ್ ಮತ್ತು ರೇಂಜರ್ಸ್ ವತಿಯಿಂದ ಉಪನ್ಯಾಸ ಕಾರ್ಯಕ್ರಮ

Suddi Udaya

ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ವತಿಯಿಂದ ಸ್ವಚ್ಛಾಲಯ ಅಭಿಯಾನ – 2024

Suddi Udaya

ಫೆಂಗಲ್ ಚಂಡಮಾರುತ: ಡಿ.02 ರಿಂದ 03 ರವರೆಗೆ ದ.ಕ. ಜಿಲ್ಲೆಯಾದ್ಯಂತ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ

Suddi Udaya

ಚಾರ್ಮಾಡಿ: ಇರ್ಫಾನ್ ಅಸೌಖ್ಯದಿಂದ ನಿಧನ

Suddi Udaya

ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ:ವೇಣೂರು ಸರ್ಕಾರಿ ಪದವಿ ಪೂರ್ವ(ಪ್ರೌಢಶಾಲಾ ವಿಭಾಗ ) ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya
error: Content is protected !!