25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮೊಗ್ರು – ಮುಗೇರಡ್ಕದಲ್ಲಿ ಅಡಿಕೆ ಬೆಳೆ ಮತ್ತು ಕಾಳುಮೆಣಸು ಬೆಳೆಗಳ ಆಧುನಿಕ ಬೇಸಾಯ ಕ್ರಮದ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

ಮೊಗ್ರು : ತೋಟಗಾರಿಕೆ ಇಲಾಖೆ ಬೆಳ್ತಂಗಡಿ, ಬಂದಾರು ಗ್ರಾಮ ಪಂಚಾಯತ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪದ್ಮುಂಜ, ಇದರ ಸಹಭಾಗಿತ್ವದಲ್ಲಿ ತೋಟಗಾರಿಕೆ ಇಲಾಖೆ 2024-25 ನೇ ಸಾಲಿನ ಜಿಲ್ಲಾ ಪಂಚಾಯತ್ ಯೋಜನೆಯಡಿ ಅಡಿಕೆ ಬೆಳೆ ಮತ್ತು ಕಾಳು ಮೆಣಸು ಆಧುನಿಕ ಬೇಸಾಯ ಕ್ರಮದ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ ನ 10 ರಂದು ಮುಗೇರಡ್ಕ ಮೂವರು ದೈವಸ್ಥಾನದ ವಠಾರದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾದ ವಿಟ್ಲ ಪ್ರಾದೇಶಿಕ ಕೇಂದ್ರ ಸಿ.ಪಿ.ಸಿ.ಆರ್.ಐ ವಿಜ್ಞಾನಿಗಳಾದ ಡಾ.ಭವಿಷ್ಯ ಸಮಗ್ರ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ, ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ ಹಾಗೂ ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹಾವೀರ ರವರು ಇಲಾಖೆಯ ಯೋಜನೆಗಳ ಸಮಗ್ರ ಮಾಹಿತಿ ನೀಡಿ ಸಂಧರ್ಬೋಚಿತವಾಗಿ ಮಾತನಾಡಿದರು.

ಬಂದಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪುಷ್ಪವತಿ ಬರಮೇಲು, ಬಂದಾರು ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಪರಮೇಶ್ವರಿ ಕೆ ಗೌಡ, ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯ ಗಂಗಾಧರ ಪೂಜಾರಿ, ಮುಗೇರಡ್ಕ ಮೂವರು ದೈವಸ್ಥಾನದ ಆಡಳಿತ ಮೊಕ್ತೇಸರರಾದ ರಾಮ್ಮಣ್ಣ ಗೌಡ ದೇವಸ, ಮನೋಹರ ಗೌಡ ಅಂತರ, ಪದ್ಮುಂಜ ಸಿ ಎ ಬ್ಯಾಂಕ್ ನಿರ್ದೇಶಕರಾದ ಶೀಲಾವತಿ ಬಾಬು ಗೌಡ, ಬೆಳ್ತಂಗಡಿ ತೋಟಗಾರಿಕೆ ಇಲಾಖಾ ಸಹಾಯಕ ಅಧಿಕಾರಿಗಳಾದ ಮಲ್ಲಿನಾಥ ಬಿರಾದಾರ್, ಭೀಮರಾಯ ಸೊಡ್ಡಗಿ ಉಪಸ್ಥಿತರಿದ್ದರು.


ಹೆಚ್ಚಿನ ರೈತರು ತರಬೇತಿ ಶಿಬಿರ ಮಾಹಿತಿ ಪಡೆದುಕೊಂಡರು. ವಕೀಲರಾದ ಉದಯ ಬಿ ಕೆ ಸಹಕರಿಸಿದರು, ಬಂದಾರು ಪಂಚಾಯತ್ ಸದಸ್ಯ ಬಾಲಕೃಷ್ಣ ಗೌಡ ಮುಗೇರಡ್ಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಬಂದಾರು ಪಂಚಾಯತ್ ಸದಸ್ಯ ಗಂಗಾಧರ ಪೂಜಾರಿ ಧನ್ಯವಾದವಿತ್ತರು.

Related posts

ಚಾರ್ಮಾಡಿ ಸಾರ್ವಜನಿಕ ಹಿಂದೂ ರುದ್ರ ಭೂಮಿಯ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಶಾಸಕ ಹರೀಶ್ ಪೂಂಜರಿಂದ ಭರವಸೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಉಜಿರೆ ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವ ತರಬೇತಿ ಕಾರ್ಯಕ್ರಮ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

Suddi Udaya

ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿ ದೇವಸ್ಥಾನದ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

Suddi Udaya

ಮೇ 25 : ಪೊಸಂದೋಡಿ ಶ್ರೀಮತಿ ಜಾಜೀವಿ ಮತ್ತು ಪಿ ದುಗ್ಗಪ್ಪ ಗೌಡ ರವರ ದಾಂಪತ್ಯ ಜೀವನದ ಸುವರ್ಣ ಸಂಭ್ರಮ: ಸಹಸ್ರ ಚಂದ್ರದರ್ಶನ

Suddi Udaya

ಉಜಿರೆ ಬ್ರಹ್ಮಕಲಶೋತ್ಸವದ “ಸುಪ್ರಸಾದ” ಭೋಜನ ಶಾಲೆಯಲ್ಲಿ” “ಮುಷ್ಠಿ ಅಕ್ಕಿ” ವಿಶೇಷ ಸೇವೆ

Suddi Udaya
error: Content is protected !!