25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಂಗಳೂರು “ಎಂಪಿರಿಯಾ ಕಾರ್ಪೋರೇಶನ್” ಷೇರು ಮಾರುಕಟ್ಟೆಯ ಕೋಚಿಂಗ್ ಸೆಂಟರ್ ನ ಮಾಹಿತಿ ಕಾರ್ಯಾಗಾರ ಹಾಗೂ “ಗೋ ವರ್ಧನ ಗಿರಿ” ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಉದ್ಘಾಟನಾ ಪೂರ್ವಸಭೆ

ಬೆಳ್ತಂಗಡಿ: “ಎಂಪಿರಿಯಾ ಕಾರ್ಪೋರೇಶನ್” ಷೇರು ಮಾರುಕಟ್ಟೆಯ ಕೋಚಿಂಗ್ ಸೆಂಟರ್ ಮಂಗಳೂರು ಇದರ ಹೂಡಿಕೆ
ಮಾಹಿತಿ ಕಾರ್ಯಾಗಾರ ಹಾಗು ಉದ್ದೇಶಿತ “ಗೋ ವರ್ಧನ ಗಿರಿ” ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಯ ಉದ್ಘಾಟನಾ ಪೂರ್ವ ಸಭೆಯನ್ನು ನ.10 ರಂದು ಉಜಿರೆ ಓಷಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಜರುಗಿತು.

ಉದ್ಘಾಟನೆಯನ್ನು ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಷಾಕಿರಣ್, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸ್ಥಾಪಕರಾದ ನಾಮದೇವ್ ರಾವ್, ಪ್ರಗತಿಪರ ಕೃಷಿಕರಾದ ನಾರಾಯಣ ಗೌಡ ದೇವಸ್ಯ, ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಹಾಗೂ ರಾಘವೇಂದ್ರ ಉಪಾಧ್ಯಾಯ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಷೇರು ಮಾರುಕಟ್ಟೆಯ ಪ್ರಾಥಮಿಕ ಅರಿವಿನ ಬಗ್ಗೆ ಮಾತನಾಡಿದ ಕಿಶನ್ ಆಚಾರ್ಯ ರವರು ಭಾರತದಲ್ಲಿ ಷೇರು ಮಾರುಕಟ್ಟೆ ಹೂಡಿಕೆ ಪ್ರಮಾಣ ಕೇವಲ 3% ಇದ್ದು ಇದರ ಮಾಹಿತಿ ಕೊರತೆಯಿಂದ ಬಹುದೊಡ್ಡ ಅವಕಾಶದಿಂದ ದೇಶದ ಜನರು ವಂಚಿತರಾಗಿದ್ದಾರೆ‌. ಹಾಗೂ ಷೇರು ಮಾರುಕಟ್ಟೆಯಲ್ಲಿರುವ ಸಕಾರಾತ್ಮಕ ಮತ್ತು ನಕಾರಾತ್ಮಕ ಹೂಡಿಕೆಗಳ ಬಗ್ಗೆ ತಿಳಿಸಿ ಇದಕ್ಕಾಗಿ ಸರಳ ರೀತಿಯಲ್ಲಿ ಇಂಪೀರಿಯಲ್ ಕಾರ್ಪೊರೇಷನ್ ನ ಸ್ಥಾಪಕರು ನಿಶಾನ್ ಕೃಷ್ಣ ಭಂಡಾರಿಯವರು ಈ ಸಂಸ್ಥೆಯನ್ನು ಹುಟ್ಟು ಹಾಕಿ ಇಂದು ಸಾವಿರಾರು ಜನರು ಈ ಲಾಭವನ್ನು ಪಡೆದುಕೊಂಡ ಬಗ್ಗೆ ತಿಳಿಸಿಕೊಟ್ಟರು.

ಇಂಪೀರಿಯಲ್ ಕಾರ್ಪೊರೇಷನ್ ಸಂಸ್ಥಾಪಕರಾದ ನಿಶಾನ್ ಕೃಷ್ಣ ಭಂಢಾರಿಯವರು‌ ಕೂಡ ತಮ್ಮ ಕನಸಿನ ಯೋಜನೆಗಳ ಬಗ್ಗೆ ತಿಳಿಸಿ ಸಹಕಾರ ಕೋರಿದರು. ಸಂಸ್ಥೆಯ ನಿರ್ದೇಶಕರಾದ ಚಂದ್ರಶೇಖರ, ಕಾರ್ಯಕ್ರಮದ ಆಯೋಜಕರಾದ ರಾಮಚಂದ್ರ ಗೌಡ ಕಾನರ್ಪ, ನಂದೀಶ್ ಭಂಡಾರಿ ಮುಂಡಾಜೆ, ಚಂದ್ರಶೇಖರ ಕಾನರ್ಪ, ವಿಠಲ್ ಎಂ ಕೆ ನಿಡ್ಲೆ, ರಾಘವೇಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಹರೀಶ್ ನೆರಿಯ ಹಾಗೂ ವಿಠಲ ಕೊಕ್ಕಡ ನಿರ್ವಹಿಸಿದರು.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಅಶಕ್ತರಿಗೆ ಆರ್ಥಿಕ ಸಹಕಾರ, 500 ಗಿಡಗಳ ವಿತರಣೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya

ವಲಯ ಮಟ್ಟದ ಬಾಲಕರ ತ್ರೋಬಾಲ್ ಪಂದ್ಯಾಟ: ಬರೆಂಗಾಯ ಶಾಲಾ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ವಾಣಿ ಕಾಲೇಜಿನ ತುಳು ಸಂಘದ ಆಶ್ರಯದಲ್ಲಿ ‘ಆಟಿ ಒಂಜಿ ನೆಂಪು’ ಕಾರ್ಯಕ್ರಮ

Suddi Udaya

ಎಲ್ ಸಿ ಆರ್ ಇಂಡಿಯನ್ ಪದವಿ ವಿಭಾಗದಲ್ಲಿ ವಾಣಿಜ್ಯ ಚಟುವಟಿಕೆ ಕಾರ್ಯಕ್ರಮ

Suddi Udaya

ಶಿಶಿಲೇಶ್ವರ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿ ರಚನೆ ವಿಳಂಬ: ದೇವಸ್ಥಾನ ದೈನಂದಿನ ಪೂಜಾ ಕಾರ್ಯ ಹಾಗೂ ವಾರ್ಷಿಕ ಆಚರಣೆಗಳಿಗೆ ತೀವ್ರ ಅಡಚಣೆ: ಮಳೆಯಿಂದ ದೇವಾಲಯದ ತಡೆಗೋಡೆ ಕುಸಿದು ದೇವಾಲಯದ ಒಳಗೆ ಕೆಸರುಮಯವಾದರೂ ಕೇಳುವವರಿಲ್ಲ: ಭಕ್ತರ ತೀವ್ರ ಅಕ್ರೋಶ, ದೇವಸ್ಥಾನದಲ್ಲಿ ಧರಣಿ ನಡೆಸುವ ಎಚ್ಚರಿಕೆ

Suddi Udaya

ನೆರಿಯ: ಬೀಜದಡಿ ನಿವಾಸಿ ಗೋಪಿ ನಿಧನ

Suddi Udaya
error: Content is protected !!