25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಅವೈಜ್ಞಾನಿಕ ಹಾಗೂ ಜನಹಿತಪರವಲ್ಲದ ಕಸ್ತೂರಿರಂಗನ್ ವರದಿ ತಡೆಹಿಡಿದು ವಜಾಮಾಡುವ ತನಕ ಹೋರಾಟವನ್ನು ಮುನ್ನಡೆಸೋಣ : ಫಾ| ಸುನಿಲ್ ಐಸಕ್ ಬೆಂಬಲ

ಬೆಳ್ತಂಗಡಿ: ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಕಸ್ತೂರಿರಂಗನ್ ವರದಿ ಹಾಗು ಅದರ ಆಧಾರವಾಗಿರುವ ಗಾಡ್ಗಿಲ್ ವರದಿಗಳನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಅಳವಡಿಸಲು ಅಧಿಕಾರಿಗಳು ವಿಫಲಾರಾಗಿದ್ದು, ಪರಿಣಾಮವಾಗಿ ಕೃಷಿ ಭೂಮಿಗಳನ್ನು ಅರಣ್ಯ ಎಂದು ತಪ್ಪಾಗಿ ಮಾಪನಮಾಡಿದ್ದಾರೆ. ಇದರ ಆತಂಕಗಳಿಂದ ಕೃಷಿಕರ, ರೈತರ ಭೂಮಿಯ ಮೇಲಿನ ತಮ್ಮ ಹಕ್ಕು ಸಂರಕ್ಷಣೆಗೆ ನಡೆಸುವ ಹೋರಾಟಕ್ಕೆ ಮಲೆನಾಡು ಸಂರಕ್ಷಣಾ ವೇದಿಕೆಗೆ ಸಾರ್ವಜನಿಕರು ಬೆಂಬಲ ನೀಡುವಂತೆ ತಿಳಿಸಿದ್ದಾರೆ.

ಮಲೆನಾಡಿನ ಜನತೆ ಎಚ್ಚೆತ್ತು, ಜಾತಿ, ಧರ್ಮ, ಪಂಗಡ, ಪಕ್ಷಗಳನ್ನು ಮರೆತು ಮಣ್ಣಿನ ಸಂರಕ್ಷಣೆಗೆ ಹೋರಾಟಕಿಳಿಯೋಣ. ಮಲೆನಾಡಿನ ಮಣ್ಣನ್ನು ಕೃಷಿರೀತಿಗಳನ್ನು ಸರಿಯಾಗಿ ತಿಳಿಯದೆ ಅವೈಜ್ಞಾನಿಕ ಹಾಗೂ ಜನಹಿತಪರವಲ್ಲದ ಕಸ್ತೂರಿರಂಗನ್ ವರದಿ ತಡೆಹಿಡಿದು ವಜಾಮಾಡುವ ತನಕ ಈ ಹೋರಾಟವನ್ನು ಮುನ್ನಡೆಸೋಣ. ನ. 15 ರಂದು ಗುಂಡ್ಯದಲ್ಲಿ ನಡೆಯಲಿರುವ ಬ್ರಹತ್ ಸಮ್ಮೇಳನಕ್ಕೆ ಸಾರ್ವಜನಿಕರೆಲ್ಲರು ಭಾಗವಹಿಸಿ ನಮ್ಮ ಹಕ್ಕು ಸಂರಕ್ಷಣೆಗಾಗಿ ಹೋರಾಡೋಣ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯ ಮಾಧ್ಯಮ ನಿರ್ದೇಶಕ ಫಾ| ಸುನಿಲ್ ಐಸಕ್ ತಿಳಿಸಿದ್ದಾರೆ.

Related posts

ನಾವೂರು ಮೂಲ್ಯರ ಯಾನೆ ಕುಲಾಲರ ಸಂಘ ಮತ್ತು ಕುಲಾಲರ ಕ್ರೀಡಾ ಕೂಟ ಸಮಿತಿ ಆಶ್ರಯದಲ್ಲಿ ವಲಯ ಮಟ್ಟದ ಸ್ವಜಾತಿ ಬಾಂಧವರ ಕ್ರೀಡಾಕೂಟ

Suddi Udaya

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗೀತಾ ಗಾಯನ ಸ್ಪರ್ಧೆ

Suddi Udaya

ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ಛಾಯಾಗ್ರಹಕ‌ ರಾಮಕೃಷ್ಣ ರೈ ಅವರಿಗೆ ಸನ್ಮಾನ

Suddi Udaya

ವೇಣೂರು ಎಸ್.ಡಿ.ಎಮ್. ಐಟಿಐ ಮತ್ತು ಟೊಯೋಟಾ ಒಡಂಬಡಿಕೆ

Suddi Udaya

ಅಂತರ್ ಕಾಲೇಜು ಪ.ಪೂ. ವಿದ್ಯಾರ್ಥಿಗಳ “ಯುನಿಟಸ್ 2023” : ಪ್ರಸನ್ನ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya

ಸುಲ್ಕೇರಿಯಲ್ಲಿ ಟಾಟಾ ಗೂಡ್ಸ್ ವಾಹನಕ್ಕೆ ಈಚರ್ ಲಾರಿ ಡಿಕ್ಕಿ

Suddi Udaya
error: Content is protected !!