ಉಜಿರೆ: ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ವಲಯ ಬಂಟರ ಸಂಘ, ಉಜಿರೆ ಹಾಗೂ ಬಂಟರ ಗ್ರಾಮ ಸಮಿತಿ ಉಜಿರೆ ಮುಂಡಾಜೆ ಮತ್ತು ತೋಟತ್ತಾಡಿ ಇವುಗಳ ಸಹಭಾಗಿತ್ವದಲ್ಲಿ ಉಜಿರೆ ವಲಯ ಬಂಟರಕ್ರೀಡಾಕೂಟ ನ.10ರಂದು ಎಸ್.ಡಿ.ಎಂ. ಹಿರಿಯ ಪ್ರಾಥಮಿಕ ಶಾಲೆ (ಜನಾರ್ದನ)ಯ ಕ್ರೀಡಾಂಗಣದಲ್ಲಿ ನಡೆಯಿತು.
ವಲಯ ಬಂಟರ ಸಂಘ ಉಜಿರೆ ಇದರ ಗೌರವ ಸಲಹೆಗಾರ ಹೆಚ್. ಸದಾಶಿವ ಶೆಟ್ಟಿ ದೀಪ ಪ್ರಜ್ವಲನೆ ಗೊಳಿಸಿ ಮಾತನಾಡಿ, ಮಕ್ಕಳು ಕ್ರೀಡೆಯೊಂದಿಗೆ ಓದಿಗೂ ಗಮನ ಕೊಡಬೇಕು. ಎಲ್ಲರೂ ಭಾಗವಹಿಸಿ ನಮ್ಮ ಸಂಘಟನೆಯನ್ನು ಬಲಗೊಳಿಸಬೇಕು ಎಂದರು.
ಬಂಟರ ಗ್ರಾಮ ಸಮಿತಿ, ಮುಂಡಾಜೆ ಇದರ ಗೌರವಾಧ್ಯಕ್ಷ ರಾಮಣ್ಣ ಶೆಟ್ಟಿ ಅಗರಿ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಎಂಬುವುದಕ್ಕೆ ದೊಡ್ಡ ಸಂಖ್ಯೆಯಲ್ಲಿ ಸೇರಿದ ಜನ ಸಂಖ್ಯೆಯೇ ಕಾರಣ ಎಂದು ಶುಭ ಹಾರೈಸಿದರು.
ತಾಲೂಕು ಬಂಟರ ಸಂಘದ ನಿರ್ದೇಶಕ ಜಯಂತ್ ಶೆಟ್ಟಿ ಕುಂಟಿನಿ ಗುಂಡೆಸತದ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ವೇದಿಕೆಯಲ್ಲಿ ಹಿರಿಯ ಸದಸ್ಯರಾದ ಶೀಲಾ ಶೆಟ್ಟಿ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ಬಳಂಜ, ಸುಜಯ ದಿನೇಶ್ ಶೆಟ್ಟಿ, ಅಜಿತ್ ಕುಮಾರ್ ಕುಂಜರ್ಪ, ಜೊತೆ ಕಾರ್ಯದರ್ಶಿ ಮಿಥುನ್ ಶೆಟ್ಟಿ, ಜಗನ್ನಾಥ ಶೆಟ್ಟಿ ಕಿನ್ನಿಬೆಟ್ಟು, ತೋಟತ್ತಾಡಿ ಗ್ರಾಮ ಸಮಿತಿ ಅಧ್ಯಕ್ಷ ಲೋಕೇಶ್ ಶೆಟ್ಟಿ ಉಪಸ್ಥಿತರಿದ್ದರು.
ವಲಯ ಬಂಟರ ಸಂಘ ಉಜಿರೆ ಇದರ ಅಧ್ಯಕ್ಷೆ ಶ್ರೀಮತಿ ವನಿತಾ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು. ರವೀಂದ್ರ ಶೆಟ್ಟಿ ನಿರೂಪಿಸಿದರು. ಸುದೇಶ್ ಶೆಟ್ಟಿ ಕುಂಟಿನಿ ವಂದಿಸಿದರು.