23.5 C
ಪುತ್ತೂರು, ಬೆಳ್ತಂಗಡಿ
March 7, 2026
ಸಂಘ-ಸಂಸ್ಥೆಗಳು

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೀತಾರಾಮ ತೋಳ್ಪಾಡಿತ್ತಾಯರಿಗೆ ಅಭಿನಂದನೆ: ಪ್ರಶಸ್ತಿಯಿಂದ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ : ಹರ್ಷೇಂದ್ರ ಕುಮಾರ್

ಧರ್ಮಸ್ಥಳ: ಯಾವುದೇ ಸಂಸ್ಥೆಯ ಬೆಳವಣಿಗೆಯಲ್ಲಿ ಸಿಬ್ಬಂದಿಯ ತೊಡಗಿಸಿಕೊಳ್ಳುವಿಕೆ ಮುಖ್ಯ.ನಮ್ಮಲ್ಲಿ ಇಂತಹ ಸಿಬ್ಬಂದಿ ಇದ್ದಾರೆ. ಪ್ರಶಸ್ತಿಗಳನ್ನು ಪಡೆಯಲು ಸಿಬ್ಬಂದಿಗಳು ಸಲ್ಲಿಸುವ ಸೇವೆ ಸ್ಮರಣೀಯ, ಪ್ರಶಸ್ತಿಯಿಂದಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ ಎಂದು ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ,ಶಾಂತಿವನದ ಟ್ರಸ್ಟಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
ಅವರು ಧರ್ಮಸ್ಥಳದ ಶಾಂತಿವನದಲ್ಲಿ,ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಯಕ್ಷಗಾನ ಕ್ಷೇತ್ರದ ಸಾಧಕ,ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ಅವರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತೋಳ್ಪಾಡಿತ್ತಾಯರದು ಕರ್ತೃತ್ವ ವ್ಯಕ್ತಿತ್ವ.ಇವರಿಗೆ ಸಿಕ್ಕ ಪ್ರಶಸ್ತಿಯಿಂದ ಶಾಂತಿವನಕ್ಕೆ ಇನ್ನೊಂದು ಗರಿ ಮೂಡಿದೆ. ಪ್ರಶಸ್ತಿಗಳಿಂದ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ.ಉದ್ಯೋಗ ಬೆಳೆಸುವುದರಿಂದ ಅನೇಕ ಮನೆಗಳಲ್ಲಿ ದೀಪ ಬೆಳಗುವಂತಾಗುತ್ತದೆ” ಎಂದರು

ಅಭಿನಂದನೆ ಸ್ವೀಕರಿಸಿದ ಸೀತಾರಾಮ ತೋಳ್ಪಾಡಿತ್ತಾಯ ಮಾತನಾಡಿ”ಪ್ರತಿಯೊಬ್ಬನ ಪ್ರತಿಭೆ ಹೊರ ಹೊಮ್ಮಲು ವೇದಿಕೆಯ ಅಗತ್ಯ ಇದೆ.ನನಗೆ ಈ ಅವಕಾಶ ಒದಗಿಸಿ ಕೊಟ್ಟವರು ಡಾ.ಡಿ.ವೀರೇಂದ್ರ ಹೆಗ್ಗಡೆ ಯವರು,ಹರ್ಷೇಂದ್ರ ಕುಮಾರ್ ಹಾಗು ಕುಟುಂಬದವರು.ಕ್ಷೇತ್ರದ ಶಿಸ್ತು ನನ್ನ ಬೆಳವಣಿಗೆ ಕಾರಣವಾಗಿದೆ.ಚಿಕ್ಕಂದಿನಿಂದಲೆ ಚಂಡೆ ವಾದನ ಆರಂಭಿಸಿದೆ.ಪೋಷಕರ,ಅನೇಕ ಹಿರಿಯ ಕಲಾವಿದರ ಮಾರ್ಗದರ್ಶನ,ಪ್ರೇರಣೆಯಿಂದ ಕಲಿಕೆ ಮುಂದುವರಿಸಿದೆ” ಎಂದರು.
ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಮಾತನಾಡಿ”ತೋಳ್ಪಾಡಿತ್ತಾಯರ ಕಲಾ ಸೇವೆಯ ಗುಣಮಟ್ಟ ಅತ್ಯುತ್ತಮವಾದದ್ದು.ಸರ್ವಶ್ರೇಷ್ಠ ಕಲಾವಿದರ ಗರಡಿಯಲ್ಲಿ ಪಳಗಿದವರು” ಎಂದರು. ಎಸ್ ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನ ಪ್ರಿನ್ಸಿಪಾಲ್ ಡಾ.ಪ್ರಶಾಂತ್ ಶೆಟ್ಟಿ ಶುಭ ಹಾರೈಸಿದರು. ಶ್ರೀಮತಿ ಸುಪ್ರೀಯ ಹರ್ಷೆಂದ್ರ ಕುಮಾರ್, ಕೃಷ್ಣ ಸಿಂಗ್,
ಎಸ್‌ಡಿಎಂ ಉಜಿರೆ ಆಸ್ಪತ್ರೆಯ ಎಂ.ಡಿ ಎಂ.ಜನಾರ್ದನ್,ಸಿರಿ ಸಂಸ್ಥೆಯ ಎಂ.ಡಿ ಕೆ.ಎನ್.ಜನಾರ್ದನ್,ಮನೋರಮಾ ತೋಳ್ಪಾಡಿತ್ತಾಯ,ದೇವಸ್ಥಾನದ ಮಣೆಗಾರ್ ವಸಂತ ಕುಮಾರ್ ಉಪಸ್ಥಿತರಿದ್ದರು.
ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ.ಶಿವ ಪ್ರಸಾದ್ ಶೆಟ್ಟಿ ಸ್ವಾಗತಿಸಿದರು.ಸ್ಥಾನಿಕ ವೈದ್ಯಾಧಿಕಾರಿ ಡಾ.ಬಿಂದು ವಂದಿಸಿದರು.ಅನನ್ಯಾ ನಿರೂಪಿಸಿದರು.ಡಾ.ವೈಶಾಲಿ ಪರಿಚಯಿಸಿದರು.ಡಾ.ಸುಜಾತಾ ಸನ್ಮಾನ ಪತ್ರ ವಾಚಿಸಿದರು.

Related posts

ಬಂದಾರು ಗ್ರಾಮದ ಮೈರೋಳ್ತಡ್ಕ ಶಿವ ಗೆಳೆಯರ ಬಳಗ (ರಿ.)ನವ್ಯಶ್ರೀ ಯುವತಿ ಮಂಡಲ (ರಿ.) ಇದರ ಆಶ್ರಯದಲ್ಲಿ 29 ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವ

Suddi Udaya

ರಾಜಕೇಸರಿ ಸಂಘಟನೆಯಿಂದ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬ ಆಚರಣೆ: ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಬರೆಯುವ ಪುಸ್ತಕ ವಿತರಣೆ

Suddi Udaya

ಬೆಳ್ತಂಗಡಿ ತಾಲೂಕು ಔಷಧಿ ವ್ಯಾಪಾರಸ್ಥರ ಸಂಘ : ವೀಲ್ ಚೇರ್ ಹಸ್ತಾಂತರ

Suddi Udaya

ಕಲ್ಲೇರಿ ಐಸಿರಿ ಮಹಿಳಾ ಮಂಡಳಿಯಿಂದ ಮಹಿಳಾ ದಿನಾಚರಣೆ ಮತ್ತು ಶ್ರಮದಾನ

Suddi Udaya

ಉಜಿರೆ: ತಾಲೂಕು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಾಮೂಹಿಕ ಗೌರಿ ಪೂಜೆ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ

Suddi Udaya

ಮೊಗ್ರು: ಅಲೆಕ್ಕಿ ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ಇದರ ಬೆಳ್ಳಿಹಬ್ಬದ ಪ್ರಯುಕ್ತ ರಜತ ಮಹೋತ್ಸವ ಪ್ರತಿಬಿಂಬ ವಿಜ್ಞಾಪನ ಪತ್ರ ಬಿಡುಗಡೆ

Suddi Udaya
error: Content is protected !!