September 6, 2026
Uncategorized

ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಗರ್ಭಗುಡಿ ಪ್ರಧಾನ ಅಂಗಗಳಲ್ಲೊಂದಾದ ಷಡಾಧಾರ ಪ್ರತಿಷ್ಠ ಹಾಗೂ ಗರ್ಭನ್ಯಾಸ ಕಾರ್ಯಕ್ರಮ

ತೆಕ್ಕಾರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಗರ್ಭಗುಡಿ ಪ್ರಧಾನ ಅಂಗಗಳಲ್ಲೊಂದಾದ ಷಡಾಧಾರ ಪ್ರತಿಷ್ಠ ಹಾಗೂ ಗರ್ಭನ್ಯಾಸ ಕಾರ್ಯಕ್ರಮ ನ.೧೩ರಂದು ಬ್ರಹ್ಮಶ್ರೀ ವೇ.ಮೂ. ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಮತ್ತು ವಾಸ್ತು ತಜ್ಞರಾದ ಪಿ.ಜಿ. ಜಗನ್ನಿವಾಸ ರಾವ್ ಪುತ್ತೂರು ಇವರ ನೇತೃತ್ವದಲ್ಲಿ ದೇವರಗುಡ್ಡೆ ಭಟ್ರಬೈಲು ತೆಕ್ಕಾರುನಲ್ಲಿ ನಡೆಯಿತು.


ಬೆಳಿಗ್ಗೆ ಗೋಪಾಲಕೃಷ್ಣ ದೇವರ ವಿಶೇಷ ಪೂಜೆ, ಪ್ರಾರ್ಥನೆ, ಪುಣ್ಯಾಹ, ಮುಷ್ಟಿ ಆದಿ ಶುದ್ಧಿ, ಆಧಾರ ಶಿಲೆ ಪ್ರತಿಷ್ಠೆ, ನಿಧಿಕುಂಭ, ಪದ್ಮ ಕೂರ್ಮ ಹಾಗೂ ಯೋಗನಾಳ ಪ್ರತಿಷ್ಠಾ ಕ್ರಿಯೆಗಳು, ದಕ್ಷಿಣ ಭಾಗದಲ್ಲಿ ಗಣಪತಿ, ದಕ್ಷಿಣಮೂರ್ತಿ ಸಂಕಲ್ಪ ಪ್ರತಿಷ್ಠೆ, ರಾತ್ರಿ ವಾಸ್ತು ಬಲಿ, ಗರ್ಭಪಾತ್ರೆ ಸಂಸ್ಕಾರ ಹೋಮ, ಕಲಶಪೂರಣ, ಗರ್ಭನ್ಯಾಸ ನಡೆಯಿತು.
ಈ ಸಂದರ್ಭದಲ್ಲಿ ಸಂಸದ ಕಿಶೋರ್ ಕುಮಾರ್ ಪುತ್ತೂರು, ಟ್ರಸ್ಟ್‌ನ ಅಧ್ಯಕ್ಷ ನಾಗಭೂಷಣ್ ರಾವ್, ಸಂಚಾಲಕ ಉದ್ಯಮಿ ಲಕ್ಷ್ಮಣ ಭಟ್ರಬೈಲು, ತಾ.ಪಂ. ಮಾಜಿ ಸದಸ್ಯ ತುಂಗಪ್ಪ ಬಂಗೇರ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ, ಬಾರ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಪ್ರವೀಣ್ ರೈ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು, ಸದಸ್ಯರು, ಗೋಪಾಲಕೃಷ್ಣ ಸೇವಾ ಟ್ರಸ್ಟಿಗಳು, ಊರಿನ ಭಕ್ತರು ಉಪಸ್ಥಿತರಿದ್ದರು.

Related posts

ಸುಲ್ಕೇರಿ: ಅ.ಖಾ.ಹಿ.ಪ್ರಾ. ಶಾಲೆ- ಶ್ರೀರಾಮ ಪ್ರೌಢಶಾಲೆಯಲ್ಲಿ ಸಹಪಠ್ಯ ಚಟುವಟಿಕೆ ಉದ್ಘಾಟನೆ

Suddi Udaya

ಜಮೀಯತುಲ್ ಫಲಾಹ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ವಿಧ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ

Suddi Udaya

ಚಾರ್ಮಾಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಪ್ರಯುಕ್ತ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಿಂದ ಶ್ರಮದಾನ

Suddi Udaya

ಇಂದಬೆಟ್ಟು-ಕಲ್ಲಾಜೆ ನವ ಭಾರತ್ ಗೆಳೆಯರ ಬಳಗ ಯುವ ಸಂಘಟನೆಯಿಂದ ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಸ್ವಚ್ಚತಾ ಶ್ರಮದಾನ

Suddi Udaya

ಕಂಚಿಮಾರ್ ಟೈಗರ್ಸ್ ಧರ್ಮಸ್ಥಳ ನೇತೃತ್ವದಲ್ಲಿ ಹುಲಿವೇಷ

Suddi Udaya

ಉಜಿರೆ: ಕುಂಜರ್ಪದಲ್ಲಿ 5ನೇ ವರ್ಷದ ದುರ್ಗಾಪೂಜೆ

Suddi Udaya
error: Content is protected !!