September 6, 2026
Uncategorizedಧಾರ್ಮಿಕ

ತೆಕ್ಕಾರು ಬಟ್ರೆಬೈಲು ದೇವರಗುಡ್ಡೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಗರ್ಭಗುಡಿಯ ಪ್ರಧಾನ ಅಂಗವಾದ ಷಢಾಧಾರ ಪ್ರತಿಷ್ಠೆ, ಗಭ೯ನ್ಯಾಸ ಕಾರ್ಯಕ್ರಮ

ತೆಕ್ಕಾರು : ಬಟ್ರೆಬೈಲು ದೇವರಗುಡ್ಡೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಗರ್ಭಗುಡಿಯ ಪ್ರಧಾನ ಅಂಗವಾದ ಷಢಾಧಾರ ಪ್ರತಿಷ್ಠೆ,ಗಭ೯ನ್ಯಾಸ ಕಾರ್ಯಕ್ರಮ ನ.13 ರಂದು ಪ್ರತಿಷ್ಠಾಧಿಗಳನ್ನು ತಂತ್ರಿವರ್ಯರಾದ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ‌ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಸಲಾಯಿತು.

ಶ್ರೀ ಗೋಪಾಲಕೃಷ್ಣ ದೇವರ ವಿಶೇಷವಾದ ಪೂಜೆ, ಪುಣ್ಯಾಹ , ಮುಷ್ಟಿಆದಿಶುದ್ಧಿ,ಆಧಾರ ಶಿಲೆ ಪ್ರತಿಷ್ಠೆ, ನಿಧಿ ಕುಂಭ,ಪದ್ಮಕೂರ್ಮ ಹಾಗೂಯೋಗನಾಳ ಪ್ರತಿಷ್ಠೆ, ಹಾಗೂ ದಕ್ಷಿಣಾಮೂರ್ತಿ ಸಂಕಲ್ಪ ನಡೆಯಿತು.ಬಳಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಬೊಟ್ಯಾಡಿ ಈ ಒಂದು ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ವಿಧಾನ ಪರಿಷತ್ ಸದಸ್ಯನಾದ ನಂತರ ಪ್ರಥಮವಾಗಿ ಭಾಗವಹಿಸಲು ಅವಕಾಶ ಸಿಕ್ಕಿರೋದು ನನ್ನ ಪಾಲಿನ ಸುಯೋಗ ಒದಗಿ ಬಂದಿದೆ, ಈ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣವಾಗಿ ಸಹಕರಿಸಿ ಮೂಲಭೂತ ಸೌಕರ್ಯಕ್ಕೆ ಅನುದಾನ ನೀಡಲು ಪ್ರಯತ್ನಿಸುವುದಾಗಿ ತಿಳಿಸಿ ಶಿಲಾಮಯ ದೇಣಿಗೆಯ ಕೂಪನ್ ಗಳನ್ನು ಬಿಡುಗಡೆ ಗೊಳಿಸಿದರು.

ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ತುಂಗಪ್ಪ ಬಂಗೇರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದಕ್ಕಾಗಿ ಧನ್ಯವಾದ ಹೇಳಿ ಸಹಕಾರದ ಭರವಸೆ ನೀಡಿದರು.ವಾಸ್ತುತಜ್ಞರಾದ ಜಗನ್ನಿವಾಸ ರಾವ್ , ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ನವೀನ್ ನೆರಿಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ತುಕಾರಾಮ ನಾಯಕ್ ಯನ್.ಟ್ರಸ್ಟ್ ಅಧ್ಯಕ್ಷರಾದ ನಾಗಭೂಷಣ ರಾವ್, ಸಂಚಾಲಕರಾದ ಲಕ್ಷ್ಮಣ್ ಬಟ್ರೆಬೈಲು, ಹಾಗೂ ಟ್ರಸ್ಟಿಗಳು, ಜೀರ್ಣೋದ್ಧಾರ ಸಮಿತಿಯ ಸಂತೋಷ್ ಕೆ,ತುಳಸಿಧರ ಪೂಜಾರಿ,ಶರತ್, ಬಾಲಕೃಷ್ಣ ಕುಲಾಲ್,ನವೀಶ್ ನಾಯ್ಕ, ಹಾಗೂ ಊರ ಹಿರಿಯರಾದ ಶಿವಪ್ಪ ಪೂಜಾರಿ, ಹರಿಣಾಕ್ಷಿ ಟೀಚರ್,ಕೇಶವ ಪೂಜಾರಿ,ಸಾಂತಪ್ಪ ಗೌಡ‌ ಮತ್ತು ತೆಕ್ಕಾರು ,ಬಾರ್ಯ,ಪುತ್ತಿಲ,ಉಳಿಯ ಹಿಂದೂ ಬಾಂಧವರು ಉಪಸ್ಥಿತರಿದ್ದರು.
ಸಂಜೆ ವಾಸ್ತು ಬಲಿ,ಗರ್ಭಪಾತ್ರೆಸಂಸ್ಕಾರಹೋಮ,ಕಲಶ ಪೂರಾಣ,ಗರ್ಭನ್ಯಾಸ ಧಾರ್ಮಿಕ ವಿಧಿವಿಧಾನ ಪ್ರಕ್ರಿಯೆ ಜರಗಿತು.

Related posts

ಬೆಳ್ತಂಗಡಿ: ಹೋಲಿ ರೆಡಿಮರ್ ಆಂಗ್ಲ ಮಾಧ್ಯಮ ಶಾಲಾ ಮಂತ್ರಿಮಂಡಲದ ಚುನಾವಣೆ

Suddi Udaya

ಮರೋಡಿ: ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ದೈವ, ಶ್ರೀ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿಗೆ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರಿಂದ ಶಿಲಾನ್ಯಾಸ

Suddi Udaya

ಉಳ್ತೂರಿನಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಮತ್ತು ಡಿ.ಎಡ್ ಕಾಲೇಜಿನಲ್ಲಿ ‘ಆಟಿಡೊಂಜಿ ದಿನ’

Suddi Udaya

ಸೆ.22ರಿಂದ ಅ.1: ಓಡೀಲು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

Suddi Udaya

ನ್ಯಾಷನಲ್ ಲೆವಲ್ ಯಕ್ಷ ನೃತ್ಯ ಸ್ಪರ್ಧೆ ಮಡಂತ್ಯಾರಿನ ಯಶಸ್ವಿನಿ ಕುಲಾಲ್ ಆಯ್ಕೆ

Suddi Udaya
error: Content is protected !!