23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಬ್ಯೂಟಿ ಪಾರ್ಲರ್ ಮಾಲಕರ ಅಸೋಸಿಯೇಷನ್ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ: ಬ್ಯೂಟಿ ಪಾರ್ಲರ್ ಮಾಲಕರ ಅಸೋಸಿಯೇಷನ್ ಬೆಳ್ತಂಗಡಿ ತಾಲೂಕು ಇದರ ಮಹಾಸಭೆಯು ನ.12 ರಂದು ಬೆಳ್ತಂಗಡಿ ಜೆ.ಸಿ ಭವನದಲ್ಲಿ ಅಸೋಸಿಯೇಷನ್ ಅಧ್ಯಕ್ಷೆ ಶಾಂತಾ ಜೆ. ಬಂಗೇರ ಇವರ ಅಧ್ಯಕ್ಷತೆಯಲ್ಲಿ ಎಲ್ಲಾ ಸದಸ್ಯರ ಉಪಸ್ಥಿತಿಯಲ್ಲಿ ನಡೆಯಿತು.


ಸಭೆಯನ್ನು ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ಉಪಾಧ್ಯಕ್ಷೆ ರಶ್ಮಿತಾ ಸ್ವಾಗತಿಸಿದರು. ಕಾರ್ಯದರ್ಶಿ ಸುನಿತಾ ಬಿಜುರವರು ವಾರ್ಷಿಕ ವರದಿ ಒಪ್ಪಿಸಿ, ಕೋಶಾಧಿಕಾರಿ ವಿಶಾಲರವರು ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು. ನಂತರ ಸಂಘದ ಗ್ರಾಮಾಭಿವೃದ್ಧಿ ಬಗ್ಗೆ ಚರ್ಚೆ ನಡೆದು ಮುಂದಿನ ಕಾರ್ಯಕಾರಣಿ ಸಮಿತಿಯ ಆಯ್ಕೆಯ ಬಗ್ಗೆ ನಿರ್ಣಯಿಸಲಾಯಿತು. ಮುಂದಿನ ಅವಧಿಗೆ ಸದಸ್ಯರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ಅಧ್ಯಕ್ಷರಾಗಿ ಬೆಳ್ತಂಗಡಿ ದಿಯಾ ಬ್ಯೂಟಿ ಪಾರ್ಲರ್‌ನ ರಶ್ಮಿತಾ ಆಳ್ವ, ಉಪಾಧ್ಯಕ್ಷರಾಗಿ ಬೆಳ್ತಂಗಡಿ ಸೌಂದರ್ಯ ಬ್ಯೂಟಿ ಪಾರ್ಲರ್‌ನ ಶ್ರೀಮತಿ ವಿದ್ಯಾ, ಕಾರ್ಯದರ್ಶಿಯಾಗಿ ಅಳದಂಗಡಿ ಸತ್ಯಶ್ರೀ ಬ್ಯೂಟಿ ಪಾರ್ಲರ್‌ನ ಶ್ರೀಮತಿ ವಿನುಷಾ, ಕೋಶಾಧಿಕಾರಿಯಾಗಿ ಬೆಳ್ತಂಗಡಿ ಲವ್ಲೀ ಬ್ಯೂಟಿ ಪಾರ್ಲರ್‌ನ ಗ್ರೇಸಿ ಲೋಬೊ, ಜೊತೆ ಕಾರ್ಯದರ್ಶಿಯಾಗಿ ಗುರುವಾಯನಕೆರೆಯ ಸ್ಟ್ಯಾಂಡರ್‍ಡ್ ಬ್ಯೂಟಿ ಪಾರ್ಲರ್‌ನ ಶಕೀಳಾ, ಗೌರವ ಸಲಹೆಗಾರರಾಗಿ ಬೆಳ್ತಂಗಡಿ ಭವಿಷ್ಯ ಬ್ಯೂಟಿ ಪಾರ್ಲರ್‌ನ ಶರ್ಮಿಳಾ ಮೊರಸ್ ಹಾಗೆಯೇ ಉಳಿದ ಕಾರ್ಯಕಾರಣಿ ನಿರ್ದೇಶಕರನ್ನು ಆಯ್ಕೆಮಾಡಲಾಯಿತು.

Related posts

ಮಲವಂತಿಗೆ : ಕೃಷಿಕನನ್ನು ಒಕ್ಕೆಲಬ್ಬಿಸಿ ಕೃಷಿಯನ್ನು ಸಂಪೂರ್ಣ ನಾಶ ಪಡಿಸಿದ ಅರಣ್ಯ ಇಲಾಖೆ

Suddi Udaya

ಧರ್ಮಸ್ಥಳ ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿ ದರ್ಶನ ಪಡೆದ ಎಮ್.ಎಲ್.ಸಿ ಸೂರಜ್ ರೇವಣ್ಣ

Suddi Udaya

ಶಿಬಾಜೆ ಜನಸ್ಪಂದನ ಸಭೆ

Suddi Udaya

ಮರೋಡಿ ಪಲಾರಗೋಳಿ ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿಯ ನೇಮೋತ್ಸವ: ಸಾರ್ವಜನಿಕ ಶ್ರೀ ಶನಿಪೂಜೆ

Suddi Udaya

ಕುತ್ಲೂರು ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಧರ್ಮಸ್ಥಳ: ‘ ದಾನ ಪುರುಷಾರ್ಥ ‘ ಭಿತ್ತಿಪತ್ರಿಕೆ ಅನಾವರಣ

Suddi Udaya
error: Content is protected !!