ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ನ.16-17: ಉಜಿರೆಯಲ್ಲಿ ಇಂಟರಾಕ್ಟ್ ಜಿಲ್ಲಾ ಸಮ್ಮೇಳನ – ಯೂತ್ ಕಾರ್ನಿವಾಲ್: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭಾಗಿ

ಉಜಿರೆ: ರೋಟರಿ ಇಂಟರಾಕ್ಟ್ ಜಿಲ್ಲೆ 3181 ನ ಇಂಟರಾಕ್ಟ್ ಜಿಲ್ಲಾ ಸಮ್ಮೇಳನ – ಯೂತ್ ಕಾರ್ನಿವಾಲ್ 2024 ಉಜಿರೆಯ ಎಸ್.ಡಿ.ಎಂ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನ. 16 ಮತ್ತು 17 ರಂದು ನಡೆಯಲಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ ತಿಳಿಸಿದ್ದಾರೆ.

ಬೆಳ್ತಂಗಡಿಯ ರೋಟರಿ ಕ್ಲಬ್ ಆಯೋಜಿಸಿರುವ ಈ ಯೂತ್ ಕಾರ್ನಿವಾಲ್-ನಲ್ಲಿ ಮೈಸೂರು, ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 8,9 ಹಾಗೂ 10ನೇ ತರಗತಿಯ ಸುಮಾರು 600 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ನವೆಂಬರ್ 17 ರಂದು ಬೆಳಗ್ಗೆ 9 ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಯೂತ್ ಕಾರ್ನಿವಾಲ್ ಉದ್ಘಾಟಿಸಲಿದ್ದಾರೆ.

ರೋಟರಿ ಇಂಟರಾಕ್ಟ್ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ಆದ ರೊ. ವಿಕ್ರಂದತ್ತ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ರೋಟರಿಯ ಜಿಲ್ಲೆಯ ವಿವಿಧ ಪದಾಧಿಕಾರಿಗಳೂ ಭಾಗವಹಿಸಲಿದ್ದಾರೆ.

ಯೂತ್ ಕಾರ್ನಿವಾಲ್ ಆಕರ್ಷಣೆಗಳು: ಯೂತ್ ಕಾರ್ನಿವಾಲ್ ಪ್ರಯುಕ್ತ ನವೆಂಬರ್ 16 ರ ಸಂಜೆ 5 ಗಂಟೆಯಿಂದ ವಿಷಯಾಧಾರಿತ ಸಾಂಸ್ಕೃತಿಕ ವೈವಿಧ್ಯ ಸ್ಪರ್ಧೆ ನಡೆಯಲಿದೆ. ಜೊತೆಗೆ ಹಾಡು, ರಸಪ್ರಶ್ನೆ, ಭಾಷಣ ಸ್ಪರ್ಧೆ, ಛದ್ಮವೇಷ ಹಾಗೂ ಪ್ರಬಂಧ ಬರಹ ಸ್ಪರ್ಧೆಗಳು ನಡೆಯಲಿವೆ. ಇದರ ಜೊತೆಗೆ ವ್ಯಕ್ತಿತ್ವ ವಿಕಸನ ಶಿಬಿರಗಳು, ಇಂಟರಾಕ್ಟರ್-ಗಳ ಕೌಶಲ್ಯ ಪ್ರದರ್ಶಿಸುವ ವಸ್ತುಪ್ರದರ್ಶನ ಹಾಗೂ ವೈವಿಧ್ಯಮಯ ಆಹಾರದ ವ್ಯವಸ್ಥೆಯೂ ಇರಲಿದೆ. ಅಂತೆಯೇ ಯೂತ್ ಕಾರ್ನಿವಾಲ್ ಪ್ರಯುಕ್ತ ಲಕ್ಕಿ ಗೇಮ್ಸ್, ಕರಾವಳಿಯ ಸಾಂಪ್ರದಾಯಿಕ ಆಟಗಳ ಸ್ಪರ್ಧೆ ಮೊದಲಾದ ಚಟುವಟಿಕೆಗಳನ್ನು ಕೂಡಾ ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ರೋ. ಸಂದೇಶ್ ರಾವ್ (ಮೊ: 9632133669) ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Related posts

ಬಾರ್ಯ-ಪುತ್ತಿಲ-ತೆಕ್ಕಾರು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ,ಯುವಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆಯ ಜಂಟಿ ಆಶ್ರಯದಲ್ಲಿ ಗುರು ಪೂಜೆ

Suddi Udaya

ಉರುವಾಲು: ಕಾರಿಂಜ ಬಾಯ್ತಾರು ಶ್ರೀ ವಿಘ್ನೇಶ್ವರ ಭಜನಾ ಮಂಡಳಿಯ ಸಮವಸ್ತ್ರ ವಿತರಣೆ

Suddi Udaya

ಟಿಪ್ಪ‌ರ್ ಲಾರಿ ಡಿಕ್ಕಿ: ದ್ವಿಚಕ್ರ ಸವಾರ ಮೃತ್ಯು

Suddi Udaya

ಬೆಳ್ತಂಗಡಿ: ಅತ್ಯುತ್ತಮ ಜೂನಿಯರ್ ರೆಡ್ ಕ್ರಾಸ್ ಕೌನ್ಸಿಲರ್ ಆಗಿ ಪ್ರಮೀಳಾ ರಿಗೆ ಜಿಲ್ಲಾ ಪ್ರಶಸ್ತಿ

Suddi Udaya

ಉರುವಾಲು: ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಶ್ರೀ ದೇವಿಯ ಪ್ರತಿಷ್ಠಾ ಮಹೋತ್ಸವ – ಧಾರ್ಮಿಕ ಸಭೆ

Suddi Udaya

ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

Suddi Udaya
error: Content is protected !!