31.8 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಆರ್‌.ಆರ್‌.ನಗರದಲ್ಲಿ ಕೈಮಾರದ ಆರನೇ ಶಾಖೆ ಲೋಕಾರ್ಪಣೆ: ಡಾ.ಪದ್ಮಪ್ರಸಾದ ಅಜಿಲ, ನಟರಾದ ಗಣೇಶ್‌, ದಿಗಂತ್‌ ಭಾಗಿ

ಬೆಂಗಳೂರಿನ ರಾಜರಾಜೇಶ್ವರಿ ನಗರದ ಸಾಯಿ ಪ್ಲಾಜಾದ ಎರಡನೇ ಮಹಡಿಯಲ್ಲಿ ಕೈಮಾರ ವೆಲ್‌ನೆಟ್‌ ಸ್ಪಾ ಸೆಲೂನ್‌ನ ಆರನೇ ಶಾಖೆಯನ್ನು ನ.15ರಂದು ಶುಕ್ರವಾರದಂದು ಅಳದಂಗಡಿ ಅರಮನೆಯ ತಿಮ್ಮಣ್ಣಾರಸರಾದ ಡಾ.ಪದ್ಮಪ್ರಸಾದ ಅಜಿಲ ಅವರ ದಿವ್ಯಹಸ್ತ ಮತ್ತು ಖ್ಯಾತ ಚಲನಚಿತ್ರ ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಾಗೂ ಇನ್ನೊರ್ವ ಖ್ಯಾತ ನಟ ದಿಗಂತ್‌ ಅವರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು.

ಈ ಸಮಾರಂಭದಲ್ಲಿ ಬೆಂಗಳೂರಿನ ಖ್ಯಾತ ಉದ್ಯಮಿಗಳು, ರಾಜಕಾರಣಿಗಳು, ಬೇರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಗಣ್ಯರು ಭಾಗವಹಿಸಿ ಶುಭ ಕೋರಿದರು.

ಉದ್ಯಮದಲ್ಲಿ ಪಾಲುದಾರರಾಗಿರುವ ಸುರೇಂದ್ರ ಹೆಗ್ಡೆ, ದೇವೇಂದ್ರ ಹೆಗ್ಡೆ ಕೊಕ್ರಾಡಿ ಮತ್ತು ರತನ್‌ ಜೈನ್‌ ಮತ್ತು ಅವರ ಕುಟುಂಬಸ್ಥರು, ಬಂಧುಮಿತ್ರರು ಪಾಲ್ಗೊಂಡು, ಬಂದ ಅತಿಥಿಗಳನ್ನು ಸತ್ಕರಿಸಿ ಸಹಕಾರ ಕೋರಿದರು.

Related posts

ಶ್ರೀ ರಾಮ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

Suddi Udaya

ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವೈದ್ಯರ ದಿನಾಚರಣೆ

Suddi Udaya

ಕುಕ್ಕೇಡಿ ಗ್ರಾ.ಪಂ. ವತಿಯಿಂದ “ಆಧಾರ್ ಸೀಡಿಂಗ್” ಕ್ಯಾಂಪ್

Suddi Udaya

ಬಾರ್ಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಿಕ್ಷಣ ಸಂವಹನ ಕಾರ್ಯಕ್ರಮ

Suddi Udaya

ಉಜಿರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುನರ್ ನಿರ್ಮಾಣ ಯಶೋನಮನ ಶೀರ್ಷಿಕೆಯಡಿಅಭಿವೃದ್ಧಿ ಕಾರ್ಯಗಳ ಹಸ್ತಾಂತರ

Suddi Udaya

ಅಳದಂಗಡಿ: ಕೊಡಂಗೆ ದೈಲಬೈಲುವಿನಲ್ಲಿ ತೋಡು ಮಾಯ, ಕೃತಕ ನೆರೆ, ಕೃಷಿ ಹಾನಿ: ಸಮರ್ಪಕವಾದ ತೋಡಿನ ಕಾಮಗಾರಿ ಆಗದ ಹೊರತು ಈ ಸಮಸ್ಯೆಗೆ ಪರಿಹಾರ ಸಿಗದು

Suddi Udaya
error: Content is protected !!