26 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ನಾರಾವಿ ವೈಶಾಲಿ ಪರಿಸರದಲ್ಲಿ ಮನೆ ಹಾಗೂ ತೋಟಕ್ಕೆ ಸಿಡಿಲು ಬಡಿತ: ಸಿಡಿಲಿನ ರಭಸಕ್ಕೆ ಸುಟ್ಟು ಕರಕಲಾದ ಮನೆಯ ವಸ್ತುಗಳು, ಅಪಾಯದಿಂದ ಪಾರಾದ ತಾಯಿ- ಮಗಳು

ನಾರಾವಿ: ಕಳೆದ ರಾತ್ರಿ ಸುರಿದ ಸಿಡಿಲು ಮಳೆಗೆ ಮನೆಗೆ ಹಾಗೂ ತೋಟಕ್ಕೆ ಸಿಡಿಲು ಬಡಿದು ಮನೆಯವರು ಅಪಾಯದಿಂದ ಪಾರಾದ ಘಟನೆ ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನ.14ರಂದು ನಡೆದಿದೆ.

ನಿನ್ನೆ ಒಂದೆ ಸಮನೆ ಸುರಿದ ಮಳೆ ಹಾಗೂ ಸಿಡಿಲಿಗೆ ನಾರಾವಿ ವೈಶಾಲಿ ಪರಿಸರದ ನಾರಾಯಣ ಬಂಗೇರ ಅವರ ಮನೆಗೆ ಹಾಗೂ ತೋಟಕ್ಕೆ ಸಿಡಿಲು ಬಡಿದಿದೆ. ಮನೆಯಲ್ಲಿ ತಾಯಿ ಮಗಳು ಮಾತ್ರವಿದ್ದು ಅಪಾಯದಿಂದ ಪಾರಾಗಿದ್ದಾರೆ. ಸಿಡಿಲಿನ ರಭಸಕ್ಕೆ ಮನೆಯ ಗೋಡೆ ಬಿರುಕು ಬಿದ್ದಿದೆ. ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಕರಕಲಾಗಿದೆ. ತೋಟಕ್ಕೂ ಹಾನಿಯಾಗಿದೆ. ಈ ಘಟನೆಯಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಇಗಾಗಲೇ ಪಂಚಾಯತ್ ಹಾಗೂ ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಘಟನಾ ಸ್ಥಳಕ್ಕೆ ನಾರಾವಿ ಗ್ರಾ.ಪಂ ಅಧ್ಯಕ್ಷ ರಾಜವರ್ಮ ಜೈನ್, ನಾರಾವಿ ಸಿಎ ಬ್ಯಾಂಕ್ ಅಧ್ಯಕ್ಷ ಎನ್. ಸುಧಾಕರ ಭಂಡಾರಿ, ಪ್ರಮುಖರಾದ ಉದಯ ಹೆಗ್ಡೆ, ಶ್ರೀನಿವಾಸ್ ಕಿಣಿ ಹಾಗೂ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Related posts

ಗುರುವಾಯನಕೆರೆ: ಎಕ್ಸೆಲ್ ಕಾಲೇಜಿನಲ್ಲಿ ಗಣೇಶೋತ್ಸವ

Suddi Udaya

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ: ರೂ. 32 ಲಕ್ಷ ನಿವ್ವಳ ಲಾಭ, ಶೇ.9 ಡಿವಿಡೆಂಡ್

Suddi Udaya

ಬೆಳ್ತಂಗಡಿ: ಡಿಕೆಡಿಆರ್‌ಎಸ್ ಸಂಸ್ಥೆಯಲ್ಲಿ ಕ್ಲಸ್ಟರ್ ಮಟ್ಟದ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ಉಜಿರೆ: ಅತ್ತಾಜೆ ರಮೇಶ್‌ ಭಟ್ ರವರ ಪುತ್ರ ಆದಿತ್ಯ ಭಟ್ ನಿಧನ

Suddi Udaya

ಶಿಶಿಲ: ಆನೆ ದಾಳಿ ಬಗ್ಗೆ ಗ್ರಾಮಸ್ಥರು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ಕಾರ್ಯಾಗಾರ

Suddi Udaya

ಲಾಯಿಲ ಗುತ್ತು ಶ್ರೀ ಕೊಡಮಣಿತ್ತಾಯ ಮತ್ತು ಕಲ್ಕುಡ ಕಲ್ಲುರ್ಟಿ ದೈವಗಳಿಗೆ ದೊಂಪದ ಬಲಿ ಉತ್ಸವ

Suddi Udaya
error: Content is protected !!